ಇಂದು ದಿನಾಂಕ .13/09/2023 ರಂದು ಶಿರಹಟ್ಟಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ .ಜಿ.ಎಂ.ಮುಂದಿನಮನಿ ಯವರ ಮಾರ್ಗದರ್ಶನದಲ್ಲಿ ಸರ್ಕಾರಿ ಪ್ರೌಢಶಾಲೆ ಲಕ್ಷ್ಮೇಶ್ವರ ದಲ್ಲಿ ಲಕ್ಷ್ಮೇಶ್ವರ ಉತ್ತರ ಹಾಗೂ ಮಾಗಡಿ ಕ್ಲಸ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತಾಲ್ಲೂಕು ಮಟ್ಟಕ್ಕೆ ಆಯ್ಕೆ ಮಾಡುವ ಜವಾಬ್ದಾರಿ ನಿರ್ಣಾಯಕರ ಹೆಗಲಮೇಲಿದೆ ಎಂದು ಡ್ರಮ್ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷರು ಹಾಗೂ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿರಹಟ್ಟಿ ಶ್ರೀ.ಎಂ.ಬಿ.ಹೊಸಮನಿ ಅವರು ಮಾತನಾಡಿದರು.
ಪ್ರತಿ ಶಾಲೆಯಿಂದ ಆಯ್ಕೆ ಆಗಿ ಇಲ್ಲಿ ಆಗಮಿಸಿರುವ ಎಲ್ಲಾ ಸ್ಪರ್ಧಾಳು ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲು ಹಿಂಜರಿತವನ್ನು ಬಿಟ್ಟು ಧೈರ್ಯದಿಂದ ಎಲ್ಲಾ ಸಹಪಠ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಎಸ್ ಕೆ ಹವಾಲ್ದಾರ ಎಪಿಸಿಒ ಉಪನಿರ್ದೇಶಕರ ಕಛೇರಿ ಗದಗ ಮಾತನಾಡಿದರು.
ಕ್ಲಸ್ಟರ್ ಮಟ್ಟದ ಕಲೋತ್ಸವದಲ್ಲಿ ಆಯ್ಕೆ ಆದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ದೂರದರ್ಶನ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಇಂತಹ ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಪ್ರಯತ್ನದಿಂದ ತಮ್ಮ ಪ್ರತಿಭೆ ಪ್ರದರ್ಶಿಸಲು ಶ್ರೀ ಈಶ್ವರ ಮೆಡ್ಲೇರಿ ಬಿ ಆರ್ ಪಿ ಪ್ರೌಢ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗುರಿಯಿಲ್ಲದ ಜೀವನ ನಡೆಯುವ ಕುರುಡನಂತೆ- ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಏನಾದರೂ ಒಂದು ಮಹತ್ವದ ಗುರಿ ಇಟ್ಟುಕೊಂಡು ಅದನ್ನು ಸಾಧಿಸಲು ಸತತ ಪ್ರಯತ್ನ ಮಾಡಬೇಕು ಎಂದು ಬಿ ಎಸ್ ಹರಲಾಪುರ ಅಧ್ಯಕ್ಷರು ಕರಾಪ್ರಾಶಾಶಿಸಂಘ ಲಕ್ಷ್ಮೇಶ್ವರ ಇವರು ಹೇಳಿದರು.
ಎಲ್ಲಾ ವಿದ್ಯಾರ್ಥಿಗಳು ಹಾಗೂ ನಿರ್ಣಾಯಕರು ಮತ್ತು ಶಿಕ್ಷಕರು ಅತ್ಯಂತ ಶಿಸ್ತು ಬದ್ಧವಾಗಿ ಭಾಗವಹಿಸಿ ಕಲೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರಿ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಿ ಸಿ ಪಟ್ಟೇದ ಮುಖ್ಯೋಪಾಧ್ಯಯರು ಸರ್ಕಾರಿ ಪ್ರೌಢಶಾಲೆ ಲಕ್ಷ್ಮೇಶ್ವರ ಇವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈರಪ್ಪ ಹಾದಿಮನಿ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಮುಖ್ಯ ಅತಿಥಿಗಳು ಎಸ್.ಕೆ.ಹವಾಲ್ದಾರ, ಬಿ ಸಿ ಪಟ್ಟೆದ, ಈಶ್ವರ ಮೇಡ್ಲೇರಿ ಬಿ ಆರ್ ಪಿ ಮತ್ತು ಕಸಾಪ ಅಧ್ಯಕ್ಷರು ಲಕ್ಷ್ಮೇಶ್ವರ, ಲಕ್ಷ್ಮೇಶ್ವರ ಸಿಆರ್ ಪಿಗಳಾದ ಉಮೇಶ್ ನೇಕಾರ, ಸತೀಶ್ ಬೊಮಲೆ, ಗಿರೀಶ್ ನೇಕಾರ, ಎನ್ ಎನ್ ಸಾವಿರಕುರಿ, ಕೆ ಪಿ ಕಂಬಳಿ, ಜ್ಯೋತಿ ಗಾಯಕವಾಡ, ಲೋಕೇಶ ಮಠದ, ಎಮ್ ಎಸ್ ಹಿರೇಮಠ, ಜಿ.ಆರ್.ಪಾಟೀಲ, ಎಸ್ ಜಿ ಅಂಗಡಿ, ಸರ್ಕಾರಿ ಪ್ರೌಢಶಾಲೆ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಎಚ್ ಎಮ್ ಗುತ್ತಲ, ಕೊಶ್ಯಾಧ್ಯಕ್ಷರಾದ ಎಸ್.ಡಿ.ಲಮಾಣಿ, ಸಂಘಟನಾ ಕಾರ್ಯದರ್ಶಿ ಸಂಗಮೇಶ ಅಂಗಡಿ, ಜಿ.ಡಿ ಕಲ್ಲಣ್ಣವರ ಅಧ್ಯಕ್ಷರು ದೈಹಿಕ ಶಿಕ್ಷಕ ಸಂಘ, ಕ್ರಾಫ್ಟ್ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಂಬರೀಶ ಚಲವಾದಿ, ಎಸ್ ಡಿ.ಎಮ್.ಸಿ.ಸದಸ್ಯರಾದ ಚಂದ್ರು ಮಾಗಡಿ, ಎಮ್.ಎಸ್.ಹಿರೇಮಠ.ಕರಾಪ್ರಾಶಿಸಂಘ ಬೆಂಗಳೂರು ರಾಜ್ಯಪ್ರತಿನಿಧಿಗಳು, , ಪಿ ಎಸ್ ಪುರಾಣಮಠ,ಎ ಎಂ ಕುಂಬಾರ್, ಆರ್ ಬಿ. ನಾಯ್ಕರ, ಆರ್ ಟಿ ಚವ್ಹಾಣ, ಕಾವ್ಯ ಬಬಲಿಯವರ, ಎಲ್ ಬಿ ಕೋರ್ಲಹಳ್ಳಿ..ಎಲ್ಲಾ ನಿರ್ಣಾಯಕರು,೧೩ ಪ್ರೌಢ ಶಾಲೆಗಳ ಮಾರ್ಗದರ್ಶಿ ಶಿಕ್ಷಕರು , ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ವರ್ಗ ಹಾಜರಿದ್ದರು. ಆರ್.ಆಯ್. ಹಬಸಿ ನಿರೂಪಿಸಿದರು, ಎ ಎಮ್ ಅಕ್ಕಿ ವಂದನಾರ್ಪಣೆಯನ್ನು ಮಾಡಿದರು.