ಮಾರುತಿ ಮೆಡಿಕಲ್ ಮಾಲೀಕರಿಂದ ಶಾಲಾ ವಿದ್ಯಾರ್ಥಿಗಳಿಗೆ ನೊಟ್ ಬುಕ್ ವಿತರಣೆ…
ಚಿಕ್ಕಮಗಳೂರು: ಮಾರುತಿ ಮೆಡಿಕಲ್ ಮಾಲೀಕರಾದ ಶ್ರೀಯುತ ಮಹೇಂದ್ರ ಮುನ್ನೊಟ್ ರವರು(ಗೀತಾ ಮೇಡಂ ರವರ ಸಹಕಾರ )ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸುಂಕದಗದ್ದೆ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಿದರು.
ಇಂತಹ ಹೃದಯವಂತರು ಎಲ್ಲ ಕಡೆ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಬೇಕೆಂದು ಮುಖ್ಯಗುರುಗಳಾದ ಮಮತರವರು ಹೇಳಿದರು. ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಉಮೇಶ್ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಮತ್ತು ಸಹಶಿಕ್ಷಕರಾದ ಸಿ ಆರ್ ಸುರೇಶ್ ರವರು ಉಪಸ್ಥಿತರಿದ್ದರು.