ಬಿಸಿಯೂಟ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವವಸ್ಥ:ಸ್ಥಳೀಯ ಆಸ್ಪತ್ರೆಗೆ ದಾಖಲು..
ಚಿತ್ರದುರ್ಗ: ಬಿಸಿಯೂಟ ಸೇವನೆ ಬಳಿಕ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಚಿತ್ರದುರ್ಗದಲ್ಲಿ ಮಂಗಳವಾರ ನಡೆದಿದೆ.
ಚಿತ್ರದುರ್ಗದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು. ಮಧ್ಯಾಹ್ನದ ಬಿಸಿ ಊಟದಲ್ಲಿ ದೋಶವಿದೆ ಎಂದು ಹೇಳಲಾಗುತ್ತಿದೆ.
ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಿಸಿಯೂಟದ ಬಳಿಕ ವಾಂತಿ ಮಾಡಲು ಆರಂಭಿಸಿದ್ಧಾರೆ. ಮಧ್ಯಾಹ್ನದ ಬಿಸಿಯೂಟದ ಬಳಿಕ ಸೇಂಗಾ ಚಾಕ್ಲೇಟ್ ಸೇವಿಸಿದ್ದರು ಎಂದು ಹೇಳಲಾಗಿದೆ.
ಆ ಕಾರಣದಿಂದ ಶೇಂಗಾ ಚಾಕಲೇಟ್ ಅಥವಾ ಬಿಸಿ ಊಟ ಯಾವುದರಲ್ಲಿ ದೋಷ ಇತ್ತು ಎಂಬುದನ್ನು ಕಂಡು ಹಿಡಿಯಲಾಗಿಲ್ಲ.
ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದ್ದು ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಚಿತ್ರದುರ್ಗ ನಗರ ಠಾಣೆಯ ಸಿಪಿಐ ತಿಪ್ಪೇಸ್ವಾಮಿ ಆಸ್ಪತ್ರೆಗೆ ಭೇಟಿ, ಪರಿಶೀಲನೆ ಮಾಡಿದ್ದಾರೆ.