ವಿದ್ಯಾರ್ಥಿನಿಯರಿಗೆಶುಚಿ ಸ್ಯಾನಿಟರಿ ಪ್ಯಾಡ್ ಒದಗಿಸುವ ಯೋಜನೆಯನ್ನು ಮರು ಪ್ರಾರಂಭಿಸಲು ಸನ್ಮಾನ್ಯ ಶ್ರೀ ಮಧು.ಬಂಗಾರಪ್ಪ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರ ಇವರಿಗೆ ಒತ್ತಾಯ.
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕಿಶೋರಿಯರಿಗೆ ಆನಿಯಮಿತ ದಾಖಲಾತಿಯನ್ನು ಹೆಚ್ಚಿಸಲು ಮತ್ತು ಆರೋಗ್ಯ ಮತ್ತು ನೈರ್ಮಲ್ಯದ ಹಿತದೃಷ್ಟಿಯಿಂದ ಶುಚಿ ಸ್ಯಾನಿಟರ್ ಪ್ಯಾಡ್ ಒದಗಿಸುವ ಯೋಜನೆಯನ್ನು ಮರು ಆರಂಭಿಸುವ ಕುರಿತು.
ಡಾ. ಲತಾ ಎಸ್ ಮುಳ್ಳೂರ ರಾಷ್ಟ್ರೀಯ ಅಧ್ಯಕ್ಷ ರು.ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್(ರಿ) ನವದೆಹಲಿ ಹಾಗೂ ಸಂಸ್ಥಾಪಕ ರಾಜ್ಯಾಧ್ಯಕ್ಷರು ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ಇವರು
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಋತುಮತಿಯಾದ ಕಿಶೋರಿಯರಿಗೆ ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಒದಗಿಸುವ ಶುಚಿ ಪ್ಯಾಡ್ ಗಳನ್ನು ನೀಡುವ ಯೋಜನೆಯನ್ನು ಸನ್ 2019 ರಿಂದಲೇ ಸ್ಥಗಿತಗೊಳಿಸಲಾಗಿದೆ.
ಬಹುತೇಕ ಋತುಮತಿಯಾದ ಹೆಣ್ಣು ಮಕ್ಕಳು ತಿಂಗಳ ಮುಟ್ಟಿನ ಸಮಯದಲ್ಲಿ ಗೈರು ಹಾಜರಾಗುತ್ತಿರುವುದು ಅಶುಚಿತ್ವದ ಕಾರಣದಿಂದಾಗಿ, ಹೊಟ್ಟೆ ನೋವು ಅತಿರಕ್ತಸ್ರಾವ ಮುಂತಾದ ಕಾರಣಗಳಿಂದಾಗಿ ಶಾಲೆಗಳಿಗೆ ಗೈರುಹಾಜರಾಗುತ್ತಿದ್ದಾರೆ
ಇನ್ನು ಕೆಲವು ವಿದ್ಯಾರ್ಥಿನಿಯರ ಪಾಲಕರು ಬೆಳಿಗ್ಗೆಯಿಂದ ರಾತ್ರಿಯವರೆಗೆ ಹೊಟ್ಟೆ ಪಾಡಿಗಾಗಿ ಶಹರಕ್ಕೆ ದುಡಿಯಲು ಹೋಗುತ್ತಿದ್ದು, ಸ್ಯಾನಿಟರಿ ಪ್ಯಾಡ್ ಗಳನ್ನು ಕೊಡಿಸಲು ಪ್ರತಿ ತಿಂಗಳು 120 ರೂ ಇಂದ 180 ರೂಗಳನ್ನು ನೀಡಲು ಪಾಲಕರಿಗೆ ಆರ್ಥಿಕ ತೊಂದರೆಯಾಗುತ್ತಿದೆ
ಆದ್ದರಿಂದ ಸರ್ಕಾರಿ ಶಾಲೆಯಲ್ಲಿ ದಾಖಲಾದ ಎಲ್ಲಾ ಹೆಣ್ಣು ಮಕ್ಕಳು ನಿಯಮಿತವಾಗಿ ಹಾಜರಾಗಲು ಮತ್ತು ಹೆಣ್ಣು ಮಕ್ಕಳ ಆರೋಗ್ಯ ಮತ್ತು ಶುಚಿತ್ವದ ಹಿತದೃಷ್ಟಿಯಿಂದ ಶುಚಿ ಪ್ಯಾಡ್ ಗಳನ್ನು ನೀಡುವ ಯೋಜನೆಯನ್ನು ಪುನರ್ ಆರಂಭಿಸಬೇಕೆಂದು ಮಾನ್ಯ ಶಿಕ್ಷಣ ಸಚಿವರಿಗೆ ವಿನಮ್ರವಾಗಿ ವಿನಂತಿಸುತ್ತೇನೆ.
ದಯವಿಟ್ಟು ಈ ಯೋಜನೆಯು ಪುನರ್ ಆರಂಭಿಸಬೇಕೆಂದು ಡಾ.ಲತಾ.ಎಸ್.ಮುಳ್ಳೂರ ಅವರು ಮಾನ್ಯ ಶಿಕ್ಷಣ ಸಚಿವರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.