ತಾಲ್ಲೂಕು ಮಟ್ಟದ ಗೀತ ಗಾಯನ ಸ್ಪರ್ಧೆ
ಶಿರಹಟ್ಟಿ ಪಟ್ಟಣದ ತಾಲ್ಲೂಕು ಶಿಕ್ಷಕರ ಪತ್ತಿನ ಸಹಕಾರ ಸಂಘದ ಭವನದಲ್ಲಿ ಇಂದು ಭಾರತ ಸ್ಕೌಟ್ ಮತ್ತು ಗೈಡ್ ಸಂಸ್ಥೆ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ವತಿಯಿಂದ “ಗೀತ ಗಾಯನ ಸ್ಪರ್ಧೆ ಕಾರ್ಯಕ್ರಮ” ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ನೋಡಲ್ ಅಧಿಕಾರಿಗಳಾದ ಶ್ರೀ ಜಿ ಎಂ ಮುಂದಿನಮನಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿರಹಟ್ಟಿ ಇವರು ವಹಿಸಿದ್ದರು.
ಶ್ರೀ ಹುಮಾಯೂನ್ ಮಾಗಡಿ ಅವರುಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಫಕೀರೇಶ ರಟ್ಟಿಹಳ್ಳಿ, ECO ರಾದ ಶ್ರೀ ಉಮೇಶ ಹುಚ್ಚಯ್ಯನಮಠ, ಹಾಗೂ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀ ಎಂ ಎನ್ ಹವಳದ , ಶಿರಹಟ್ಟಿ ತಾಲೂಕಿನ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಕಾಯ೯ದಶಿ೯ಗಳಾದ ಶ್ರೀ ಎಂ ಎ ಬುಕ್ಕಿಟಗಾರ, ಲಕ್ಷ್ಮೇಶ್ವರ ತಾಲೂಕಿನ ಕಾಯ೯ದಶಿ೯ಗಳಾದ ಶ್ರೀ ಕೃಷ್ಣ ಆರ್ ಲಮಾಣಿ, ಶ್ರೀ ಎಸ್ ಎಂ ಮುಳುಗುಂದ್, ಶ್ರೀಮತಿ ವ್ಹಿ ಎಚ್ ಮಾಲಸೊರೆ, ಶ್ರೀಮತಿ ಯಾಸ್ಮಿನ್ ಅ ಶಿರಹಟ್ಟಿ, ಶ್ರೀ ಮತಿ ಜಯಶ್ರೀ ಪಾಟೀಲ, ಶ್ರೀಮತಿ ಜಿ ಎ ಹುಲಸೂರ, ಶ್ರೀ ಎಚ್ ವಾಯ್ ಹೊಸಮನಿ, ಬಿ ಆರ್ ಪಿ ಯವರಾದ ಶ್ರೀ ಬಸವರಾಜ ಎಮ್ ಯರಗುಪ್ಪಿ, ಶಿರಹಟ್ಟಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮುತ್ತುರಾಜ್ ಸಾವಿರಕುರಿ ಹಾಗೂ ಶಿರಹಟ್ಟಿ /ಲಕ್ಷ್ಮೇಶ್ವರ ತಾಲೂಕಿನ ಸ್ಕೌಟ್ಸ್ ಮತ್ತು ಗೈಡ್ಸ್ ಕ್ಯಾಪ್ಟನ್ ಭಾಗವಹಿಸಿದ್ದರು. ಶ್ರೀ ಹೆಚ್ ವಾಯ್ ಹೊಸಮನಿ ವಂದಿಸಿದರು