ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಏಕವ್ಯಕ್ತಿ ರಂಗ ಪ್ರಯೋಗ ನಾಟಕೋತ್ಸವ ಡಾ.ಲತಾ. ಎಸ್.ಮುಳ್ಳೂರ ಬಾಗಿ.
ಧಾರವಾಡ ಸೆ.9 ಸ್ನೇಹಿತರ ಕಲಾ ಸಂಘ(ರಿ) ಧಾರವಾಡ ಹಾಗೂ ಕನ್ನಡ ಮತ್ರು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಇಂದು
ಧಾರವಾಡ ಶಹರದ ಕನ್ನಡ ಕುಲಪುರೋಹಿತ ಆಲೂರ ವೆಂಕಟರಾವ ಸಭಾಭವನದಲ್ಲಿ ಎರಡು ದಿನಗಳ ಏಕವ್ಯಕ್ತಿ ರಂಗ ಪ್ರಯೋಗ ನಾಟಕೋತ್ಸವ ಪ್ರಾರಂಭವಾಯಿತು.
ಈ ಕಾರ್ಯಕ್ರಮದ ಆಯೋಜಕರ ಆಹ್ವಾನದ ಮೇರೆಗೆ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್(ರಿ) ನವದೆಹಲಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ ಇದರ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ. ಎಸ್. ಮುಳ್ಳೂರ ರವರು ಭಾಗವಹಿಸಿ, ಕಾರ್ಯಕ್ರಮದ ಆಯೋಜಕರಾದ ಶ್ರೀ ವಿಜಯೇಂದ್ರ ಅರ್ಚಕ ರವರನ್ನು ಹಾಗೂ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪಾತ್ರಧಾರಿಯಾಗಿ ಅಭಿನಯಿಸಿದ ಶ್ರೀಮತಿ ಶೈಲಜಾ ಪ್ರಕಾಶ ರವರನ್ನು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ಸನ್ಮಾನಿಸಿದರು.
ಕಾರ್ಯಕ್ರಮದ ವತಿಯಿಂದ ಆಯೋಜಕರುಗಳು ಕೂಡ
ಡಾ.ಲತಾ.ಎಸ್.ಮುಳ್ಳೂರ ಅವರನ್ನು ಸನ್ಮಾನಿಸಿ ಗೌರವಿಸಿದರು .ಈ ಕುರಿತು ಮಾತನಾಡಿದ ಮುಳ್ಳೂರ ರವರು ಈಗಾಗಲೇ ಹಲವಾರು ಕಡೆ ಈ ಏಕವ್ಯಕ್ತಿ ರಂಗ ಅಬಿನಯ ಪ್ರದರ್ಶನಗೊಂಡು ಯಶಸ್ವಿ ಕಂಡಿದೆ. ಎಲ್ಲರ ಮನಮುಟ್ಟುವಂತೆ ಶೈಲಜಾ ಅವರು ಮಾತೆಯ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ಪರಿಣಾಮಕಾರಿಯಾಗಿ ಅಭಿನಯಿಸಿದ್ದಾರೆ.ಇಂತಹ ಪ್ರದರ್ಶನಗಳಿಂದ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ಸಿಗುತ್ತದೆ ಎಂದರು. ಮಾತೆಯ ಜೀವನಾಧರಿತ ಇಂತಹ ನಾಟಕಗಳು ಇನ್ನು ಹೆಚ್ಚು ರಾಜ್ಯದ ಎಲ್ಲಾ ಕಡೆಯೂ ಪ್ರದರ್ಶನವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಈ ನಾಟಕದ
ರಚನೆಗಾರರಾದ ಡಾ.ಡಿ.ಎಸ್.ಚೌಗಲೇ ,ವಿನ್ಯಾಸ/ನಿರ್ದೇಶಕರಾದ ಶ್ರೀ ಮಂಜುನಾಥ. ಎಲ್.ಬಡಿಗೇರ. ಪ್ರಸ್ತುತಿ ನಾಡ ಚಾವಡಿ.ಹಾಗೂ ಶ್ರೀ ಸಂತೋಷ ಮಹಾಲೆ ರವರಿಗೂ, ಸ್ನೇಹಿತರ ಕಲಾ ಸಂಘದವರಿಗೂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರ ಇವರಿಗೂ ರಾಷ್ಟ್ರ ಹಾಗೂ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಮಸ್ತ ಪದಾಧಿಕಾರಿಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ರೇಖಾ ಜೋಶಿ. ಶ್ರೀಮತಿ ಅನಸೂಯಾ ದೊಡಮನಿ ಶ್ರೀಮತಿ ಸವಿತಾ ಧಾರವಾಡಕರ ಶ್ರೀಮತಿ ಗೀತಾ. ಶ್ರೀಮತಿ ಅನ್ನಪೂರ್ಣ ಹಾಜರಿದ್ದರು.