ರಾಜ್ಯ ಮಟ್ಟದ ಆದರ್ಶ ಶಿಕ್ಷಕರತ್ನ ಪ್ರಶಸ್ತಿ
ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು (ರಿ) ರಾಜ್ಯ ಘಟಕ ಬೆಂಗಳೂರು, ಲಯನ್ಸ್ ಕ್ಲಬ್ ಆಫ್ ಕೆಜಿಎಫ್ ಗೋಲ್ಡ್ ಮೈನ್ಸ್ ಹಾಗೂ ಸ್ವರ್ಣ ಭೂಮಿ ಫೌಂಡೇಶನ್ ಕರ್ನಾಟಕ ಇವರು ಕೊಡಮಾಡುವ ರಾಜ್ಯ ಮಟ್ಟದ “ಡಾ ಸರ್ವಪಲ್ಲಿ ರಾಧಾಕೃಷ್ಣನ್ ಆದರ್ಶ ಶಿಕ್ಷಕರತ್ನ” ಪ್ರಶಸ್ತಿಗೆ 1)ಶಿರಹಟ್ಟಿ ತಾಲ್ಲೂಕು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಸವರಾಜ ಎಮ್ ಯರಗುಪ್ಪಿ.
2)ಹುಲ್ಲೂರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ವಾಸುದೇವ ಡಿ ಮಡ್ಲಿ ಮತ್ತು
3)ಗೊಜನೂರ ಅಂಗನವಾಡಿ ಕಾರ್ಯಕರ್ತೆ ಗಿರಿಜವ್ವ ಶಿವರುದ್ರಯ್ಯ ಪೂಜಾರ ಅವರು ಭಾಜನರಾಗಿದ್ದಾರೆ.
ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಶಾಲೆಯ ಮಕ್ಕಳ ಮತ್ತು ಸಮುದಾಯದ ಒಡನಾಡಿಗಳಾಗಿ ಸೇವೆ ಸಲ್ಲಿಸುತ್ತಿರುವ ಅವರು ಜನಮಾನಸಗೊಂಡಿದ್ದಾರೆ.ಈ ಮೂಲಕ ಅವರು ಸಮುದಾಯಗಳಿಗೆ ಜ್ಞಾನವನ್ನು ಎರೆಯುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.ಈ ಎಲ್ಲಾ ಸೇವಾ ಕಾರ್ಯಗಳನ್ನು ಪರಿಗಣಿಸಿ,”ರಾಜ್ಯ ಮಟ್ಟದ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಆದರ್ಶ ಶಿಕ್ಷಕರತ್ನ” ಪ್ರಶಸ್ತಿಗೆ ಈ ಮೂವರನ್ನು ಆಯ್ಕೆ ಮಾಡಿದ್ದಾರೆ. ದಿನಾಂಕ 10.09.2023 ರಂದು ಕೋಲಾರದಲ್ಲಿ ನಡೆದ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಆದರ್ಶ ಶಿಕ್ಷಕರತ್ನ ಪ್ರಶಸ್ತಿ ಸನ್ಮಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಲಕ್ಷ್ಮೇಶ್ವರ ಘಟಕದ ಅಧ್ಯಕ್ಷ ಬಸವರಾಜ ಹರ್ಲಾಪುರ ಕ ರಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ ಎಚ್ ಪಾಟೀಲ ಕಾರ್ಯದರ್ಶಿ ಚಂದ್ರು ನೇಕಾರ ಹಾಗೂ ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ ಎಸ್ ಹಿರೇಮಠ ಎನ್ ಪಿ ಎಸ್ ನೌಕರರ ತಾಲೂಕಾ ಅಧ್ಯಕ್ಷ ಎಫ್ ಎಸ್ ತಳವಾರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.