ಸರ್ಕಾರಿ ಶಾಲೆಗಳಲ್ಲಿ ದೇಶಪಾಂಡೆ ಫೌಂಡೇಶನ್ ಹುಬ್ಬಳ್ಳಿ ಇವರ ವತಿಯಿಂದ ಅರ್ಲಿ ಸ್ಪಾರ್ಕ ವಿನೂತನ ಕಾರ್ಯಕ್ರಮ
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ರಿಯ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ದೇಶಪಾಂಡೆ ಫೌಂಡೇಶನ್ ಹುಬ್ಬಳ್ಳಿ ಇವರ ವತಿಯಿಂದ ಗೌರವ ಇಂಗ್ಲೀಷ ಶಿಕ್ಷಕಿಯರಾದ ಭಾರತಿ ಎಸ್.ಧಲಬಂಜನ ಹಾಗೂ ಭಾಗ್ಯಶ್ರೀ .ಬಟ್ಟೂರ. ಇವರ ಆಯೋಜನೆಯಂತೆ ನಲಿ ಕಲಿ ತರಗತಿಗಳ ನಾಲ್ಕು ವಿಭಾಗಗಳ ಒಂದುನೂರು ಬಾಲಕಿಯರಿಗೆ ಅರ್ಲಿ ಸ್ಪಾರ್ಕ ಕಾರ್ಯಕ್ರಮ ಕಮ್ಯೂನಿಟಿ ಹೆಲ್ಪರ್ಸ್ ಕಾರ್ಯಕ್ರಮದಡಿಯಲ್ಲಿ ಶಿಕ್ಷಕಿ ವೈದ್ಯೆ ಇಂಜಿನೀಯರ್ ಟೈಲರ್ ವಕೀಲರು ನ್ಯಾಯಾಧೀಶರು ಪೋಲೀಸ್ ಸೈನಿಕ ವಿಜ್ಞಾನಿ ರೈತ ವ್ಯಾಪಾರಿ ವಿವಿಧ ಉದ್ಯೋಗಗಳ ವೇಷಭೂಷಣ ಕೆಲಸದ ಗುರಿ ಉದ್ದೇಶ ಉಪಯೋಗ ವಿದ್ಯಾಭ್ಯಾಸ ಕುರಿತು ಬಾಲೆಯರಿಗೆ ಗುಂಪಿನಲ್ಲಿ ಸಂವಾದದೊಂದಿಗೆ ಮಾಹಿತಿ ವಿನಿಮಯ ಕಾರ್ಯ ಚಟುವಟಿಕೆಗಳು ನಡೆದವು.
ಕಾರ್ಯಕ್ರಮದಲ್ಲಿ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ..ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಪುರದಪ್ಪ ಗಾಳಿ ಸದಸ್ಯರಾದ ವೆಂಕಣ್ಣ ತಳವಾರ.ಪ್ರ.ಗು.ಲತಾ ಗ್ರಾಮಪುರೋಹಿತ.ಹಾಗೂ ಶಾರದಾ ಕಂಬಳಿ.ದ್ರಾಕ್ಷಾಯಿಣಿ ಕೊರಗರ.ಸುವರ್ಣ ಮಡಿವಾಳರ.ಸುಧಾ ಕೊಣ್ಣೂರ.ದೇವೇಂದ್ರ.ಪತ್ತಾರ.ಗೀತಾ ಕೆಂಚರಡ್ಡಿ.ಮುಂತಾದವರು ಉಪಸ್ಥಿತರಿದ್ದರು.