ಶಿಕ್ಷಕರ ಬೀಳ್ಕೊಡುಗೆ ಮಳೆರಾಯನ ಅಡ್ಡಿ ಆದರೂ ಹಠಬಿಡದ ವಿದ್ಯಾರ್ಥಿ ಪಡೆ…
ಸುರೇಶ ಸಿ ಆರ್ ಮುಖ್ಯಗುರುಗಳು ಇವರು ಸ ಕಿ ಪ್ರಾ ಶಾಲೆ ಕೋಟೆಹಾಳು ಶಾಲೆಯಲ್ಲಿ 16 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸುಂಕದಗದ್ದೆ ಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಇವರ ಬೀಳ್ಕೊಡುಗೆ ಸಮಾರಂಭವನ್ನು ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರು ಹಮ್ಮಿಕೊಂಡಿದ್ದರು.
ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಇರುವುದರಿಂದ ಈ ದಿನವೇ ಸುರೇಶ್ ಸಿ ಆರ್ ರವರನ್ನು ಬೀಳ್ಕೊಡ ಬೇಕೆಂದು ತೀರ್ಮಾನಿಸಿ ಅದ್ದೂರಿಯಾಗಿ ಬೀಳ್ಕೊಟ್ಟರು. ಬೆಂಚಿಕ್ಯಾಂಪ್ ನ ದ್ಯಾವಮ್ಮ ಗುಡಿಯಿಂದ ಸರೋಟ್ ಹಾಗೂ ಡ್ರಮ್ ಸೆಟ್ ಮತ್ತು ಮಕ್ಕಳ ಕಳಸದೊಂದಿಗೆ ಮೆರವಣಿಗೆ ಹೊರಟರು. ಮಳೆರಾಯನ ಅಡ್ಡಿಯ ನಡುವೆಯೂ ಲೆಕ್ಕಿಸದೆ ಪ್ರತಿ ಬೀದಿಗಳಲ್ಲಿ ಮೆರವಣಿಗೆ ಆರಂಭಿಸಿ ಬೆಂಚಿಕ್ಯಾಂಪ್ ಹಾಗೂ ಕೋಟೆಹಾಳನ ಪ್ರತಿ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ವಿದ್ಯಾರ್ಥಿಗಳು ಶಿಕ್ಷಕರ ಪಾದವನ್ನು ನೆಲಕ್ಕೆ ತಾಗಿಸದೆ ತಮ್ಮ ಕೈ ಮೇಲೆ ನಡೆಸಿ ಋಣ ಭಾರ ತೀರಿಸಿದರು. ಇದೆಲ್ಲ ಕಂಡು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜೋರಾಗಿ ಅಳುತ್ತ ಒಲ್ಲದ ಮನಸ್ಸಿನಿಂದ ಬೀಳ್ಕೊಟ್ಟರು.
ಥೇಟ್ ಶಿಕ್ಷಕರಂತೆ ಫೋಟೋ ಬರೆದು ಶಿಕ್ಷಕರ ಮೆಚ್ಚಿಗೆ ಪಾತ್ರವಾದ ವಿದ್ಯಾರ್ಥಿ ಸ್ಮರಿಸಿ ತಮ್ಮ ಅನುಭವವಾಗಳು ಹಾಗೂ ಸಾಧನೆ ದಾರಿಯಲ್ಲಿ ಸಹಾಯ ಹಸ್ತವನ್ನು ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಯವರು ಗ್ರಾಮ ಪಂಚಾಯತ್ ರವರು ಶಾಲೆಯ ಸಿಬ್ಬಂದಿಗಳು ಹಾಗೂ ಅಪಾರ ಶಿಷ್ಯ ಬಳಗ ನೆರೆದಿತ್ತು