ಧಾರವಾಡದ ನಿವೃತ್ತ ಶಿಕ್ಷಕಿ ದತ್ತಿದಾನಿ ಲೂಸಿ ಸಾಲ್ಡಾನ ಅವರಿಗೆ ನಾಳೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ
ಅಕ್ಷರತಾಯಿ ಬಿರುದು ನೀಡುವರು.
ಧಾರವಾಡ:
ಧಾರವಾಡದ ಅಕ್ಷರತಾಯಿ ಎಂದು ಗುರುತಿಸಲ್ಪಟ್ಟ ಧಾರವಾಡದ ನಿವೃತ್ತ ಶಿಕ್ಷಕಿ ದತ್ತಿದಾನಿಗಳು ಲೂಸಿ ಸಾಲ್ಡಾನ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನಕ ಭವನದಲ್ಲಿ ಧಾರವಾಡದ ನುಡಿಸಡಗರ ಕಾರ್ಯಕ್ರಮದಲ್ಲಿ, ಧಾರವಾಡ ಜಿಲ್ಲೆ ಹಾಗೂ ಹೊರ ಜಿಲ್ಲೆಗಳು ಸೇರಿ ನೂರು ಸರಕಾರಿ ಶಾಲೆಗಳಿಗೆ ದತ್ತಿನೀಡಿದ ಲೂಸಿ ಸಾಲ್ಡಾನರವರಿಗೆ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠ, ಚೇತನ ಪೌಂಡೇಶನ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಆಯೋಸಿದ ನುಡಿಸಡಗರ ಕಾರ್ಯಕ್ರಮದಲ್ಲಿ ಲೂಸಿ ಸಾಲ್ಡಾನರವರಿಗೆ ಅಕ್ಷರತಾಯಿ ಬಿರುದು ನೀಡಿ ಗೌರವಿಸಲಾಗುತ್ತಿದೆ, ಕಷ್ಟಪಟ್ಟು ಬದುಕು ಕಟ್ಟಿಕೊಂಡ ಮೇಲೆ ತಾವಾಯಿತು,ತಮ್ಮ ಸಂಸಾರ ವಾಯಿತು ಎನ್ನುವವರ ಮದ್ಯೆ ಈ ಮಹಾನ ತಾಯಿ ಆದರ್ಶವಾಗಿ ನಿಲ್ಲುತ್ತಾರೆ,
ನಿವೃತ್ತಿಯಾಗಿ ಹದಿಮಾರು ವರ್ಷ ಕಳೆದರೂ ತಮ್ಮ ಮನೆಯ ಸಮೀಪದ ಕೆಲಗೇರಿಯ ಸರಕಾರಿ ಶಾಲೆಗೆ ಹೋಗಿ ಮಕ್ಕಳಿಗೆ ಪಾಠ ಮಾಡುತ್ತಾರೆ, ತಮಗೆ ಬರುವ ಪಿಂಚಣಿಯಲ್ಲಿ ಅರ್ಧದಷ್ಟು ತೆಗೆದಿಟ್ಟು ಬಡ ಮಕ್ಕಳ ಕಲಿಕೆಗೆ ಆಶ್ರಯ ಆಗಲಿ ಎಂಬ ಸದುದ್ಧೇಶದಿಂದ ಕೂಡಿಟ್ಟ ಹಣವನ್ನು ಇವರು ಶಾಲೆಗಳಿಗೆ ದತ್ತಿ ನೀಡುತ್ತಾ ಬಂದಿದ್ದಾರೆ, ಅದು ಐವತ್ತು ಲಕ್ಷಕ್ಕೂ ಅಧಿಕವಾಗಿದೆ.
ಇಂತಹ ಮಹಾತಾಯಿಯನ್ನು ಅಕ್ಷರತಾಯಿ ಬಿರುದು ನೀಡಿ ಗೌರವಿಸುತ್ತಿರುವುದು,ಸಂತಸ ತಂದಿದೆ ಎಂದು ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಮಹಾಪೋಷಕರಾದ ಡಾ, ರೇಣುಕಾ ಅಮಲಝರಿ, ಗೌರವಾದ್ಯಕ್ಷರಾದ ಭೀಮಪ್ಪ ಕಾಸಾಯಿ ಅದ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಕಾರ್ಯಾದ್ಯಕ್ಷರಾದ ಅಕ್ಬರಲಿ ಸೋಲಾಪೂರ ಕೋಶಾದ್ಯಕ್ಷರಾದ ಅಜೀತಸಿಂಗ ರಜಪೂತ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ತಿಗಡಿ ಉಪಾಧ್ಯಕ್ಷರು ವಿ ಎನ್ ಕೀರ್ತಿವತಿ ಮಲ್ಲಿಕಾರ್ಜುನ ಉಪ್ಪಿನ ನಂದಕುಮಾರ ದ್ಯಾಪೂರ ವೀಣಾ ಹೊಸಮನಿ, ವಾಯ ಬಿ ಕಡಕೋಳ ಜಿ ಬಿ ಶೆಟ್ಟರ್ ಎಂ ಆರ್ ಕಬ್ಬೇರ ಮಂಜುನಾಥ ವಾಸಂಬಿ,ಪ್ರೇಮ ಹೆಗಡೆ,ಮುಂತಾದವರು ಸಂತಸ ವ್ಯಕ್ತಪಡಿಸಿ, ಸಂಘಟಕ ಚಂದ್ರಶೇಖರ ಮಾಡಲಗೇರಿ ಅವರಿಗೆ ಧನ್ಯವಾದಗಳು ತಿಳಿಸಿದರು.