ಈ ವರ್ಷ ಶಿಕ್ಷಕರ ವರ್ಗಾವಣೆಗೆ ಬ್ರೇಕ್!! ದಸರಾ ರಜೆಯಲ್ಲೂ ಕಡಿತ!!
ಕನಕಪುರ:ಗ್ರಾಮೀಣ ಮಕ್ಕಳಿಗೆ ಸಮರ್ಪಕ ಶಿಕ್ಷಣ ಸಿಗುವ ನಿಟ್ಟಿನಲ್ಲಿ ಈ ವರ್ಷ ಯಾವುದೇ ಶಾಲಾ ಶಿಕ್ಷಕರ ವರ್ಗಾವಣೆ ಮಾಡುವುದಿಲ್ಲ. ಅವಶ್ಯಕತೆಯಿದ್ದಲ್ಲಿ ಪರಸ್ಪರ ಒಪ್ಪಂದದ ವರ್ಗಾವಣೆಯಾಗಬಹುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇಡೀ ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. 50 ಸಾವಿರ ಶಿಕ್ಷಕರ ನೇಮಕವಾಗಬೇಕಾಗಿದೆ.ಇಂತಹ ಸಮಸ್ಯೆ ಮತ್ತು ಕೊರತೆಯ ನಡುವೆ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ಸರಿದೂಗಿಸುವ ಚಿಂತನೆಯಲ್ಲಿದೆ ಎಂದರು.
ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಈ ಬಾರಿಯೂ ದಸರಾ ರಜೆಯನ್ನು ಸರ್ಕಾರ ಕಡಿತಗೊಳಿಸಿದೆ. ಸರ್ಕಾರ ರಜೆ ಕಡಿತಗೊಳಿಸಿರುವುದರಿಂದ ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಅ.2 ರಿಂದ ಅ.29ರವರೆಗೆ ನೀಡಲಾಗುತ್ತಿದ್ದ ದಸರಾ ರಜೆಗಳನ್ನು ಕೊರೊನಾ ಹಿನ್ನೆಲೆಯಲ್ಲಿ ಕಡಿತಗೊಳಿಸಲಾಗಿತ್ತು. ಲಾಕ್ಡೌನ್ನಲ್ಲಿ ನಡೆಯದ ತರಗತಿಗಳನ್ನು ಸರಿದೂಗಿಸುವ ನಿಟ್ಟಿನಲ್ಲಿಕೈಗೊಳ್ಳಲಾಗಿತ್ತು. ಈಗ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದ್ದರೂ ಸರ್ಕಾರ ಹಿಂದಿನ ರಜೆ ಕಡಿತ ನೀತಿ ಅನುಸರಿಸುತ್ತಿದೆ.
ಸಾಮಾನ್ಯ ಶಾಲೆಗಳಿಗೆ ಆಕ್ಟೋಬರ್ 8 ರಿಂದ 24ರವರೆಗೆ ರಜೆ ನೀಡಿದೆ. ವಿಶೇಷ ಶಾಲೆ ಮಕ್ಕಳಿಗೆ ದಸರಾ ರಜೆಯನ್ನು ರದ್ದುಗೊಳಿಸಿದೆ. ಈ ಮೂಲಕ ಇಲಾಖೆಯ ವಿವಿಧ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಶಿಕ್ಷಕರಿಗೆ ನಿರಂತರ ಕರ್ತವ್ಯ ಮಾಡುವಂತಾಗಿದೆ..
ಕರ್ನಾಟಕ ರಾಜ್ಯ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಕೂಡ ಮಾನ್ಯ ಮುಖ್ಯಮಂತ್ರಿಗಳಿಹೆ ಹಾಗೂ ಶಿಕ್ಷಣ ಸಚಿವರಿಗೆ ದಸರಾ ರಜೆ ವಿಸ್ತರಣೆ ಮಾಡಬೇಕು..ಕರೊನಾ ವೈರಸ್ ಗೂ ಮುನ್ನ ನೀಡುತ್ತಿದ್ದ ದಸರಾ ರಜೆ ಮಾದರಿಯಲ್ಲೆ ಈ ವರ್ಷವೂ ಕೂಡ ದಸರಾ ರಜೆ ನೀಡುವಂತೆ ಅಶೋಕ ಸಜ್ಜನ ಅವರು ಆಗ್ರಹಿಸಿದ್ದರು..