ಧಾರವಾಡ ಶಹರ ಶಿಕ್ಷಕರ ದಿನಾಚರಣೆ ಧಾರವಾಡ ಜಿಲ್ಲೆಯಲ್ಲಿಯೇ ಮಾದರಿ ಕಾರ್ಯಕ್ರಮವಾಗಿ. ನೆರವೇರಿತು..
ಧಾರವಾಡ: ನಗರದ ಪಾಟೀಲ್ ಪುಟ್ಟಪ್ಪ ಸಭಾ ಭವನದಲ್ಲಿ ಧಾರವಾಡ ಶಹರದ ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಮಾನ್ಯ ಕ್ಷೇತ್ರ ಸಮನ್ವಯ ಅಧಿಕಾರಿಗಳ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ಅತ್ಯಂತ ಅಚ್ಚುಕಟ್ಟಾಗಿ ಎಲ್ಲ ವ್ಯವಸ್ಥೆಗಳಿಂದ ಕೂಡಿದ ಧಾರವಾಡ ಜಿಲ್ಲೆಯಲ್ಲಿಯೇ ಮಾದರಿ ಕಾರ್ಯಕ್ರಮವಾಗಿ ಮೂಡಿಬಂದಿತು.
ಸ್ವತಃ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಅಶೋಕ್ ಸಿಂದಗಿ ಸರ್ ಹಾಗೂ ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಮಂಜುನಾಥ ಅಡಿವೆರ್ ಸರ್ ಅಧಿಕಾರಿಗಳು ಕಾರ್ಯಕ್ರಮ ಕ್ಕೆ ಆಗಮಿಸಿದ ಎಲ್ಲ ಶಿಕ್ಷಕ ಶಿಕ್ಷಕಿಯರಿಗೆ ಹೂವು ನೀಡಿ ಜೊತೆಗೆ ಒಂದು ಪುಸ್ತಕ ಕೊಟ್ಟು ನಗುತ್ತಾ ಸ್ವಾಗತಿಸಿದರು.
ಡಾ.ಸರ್ವಪಲ್ಲಿ ರಾಧಾಕೃಷ್ಣನ ಅವರ ಭಾವಚಿತ್ರ ದೊಂದಿಗೆ ಮಾತೆ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೂ ಪುಷ್ಪಾರ್ಚನೆ ನೆರವೇರಿಸಿದರು. ಹಾಗೂ ಮಾನ್ಯತೆ ಪಡೆದ ಸಂಘ ಹಾಗೂ ಮಾನ್ಯತೆ ಪಡೆಯದೇ ಇರುವ ಸಂಘ ಆ ಸಂಘ ಈ ಸಂಘ ಎಂದು ತಾರತಮ್ಯ ಮಾಡದೆ ಎಲ್ಲ ಸಂಘದವರನ್ನು ಸಮಾನವಾಗಿ ಕಂಡು ಸಮಾನವಾಗಿ ವೇದಿಕೆಯನ್ನು ಕಲ್ಪಿಸಿ ಎಲ್ಲ ಸಂಘದವರನ್ನು ಗೌರವಿಸಿದರು.
ವಿವಿಧ ಸಂಘದ ಪದಾಧಿಕಾರಿಗಳನ್ನು ಹಲವು ಬಾರಿ ಸಭೆ ಕರೆದು ಕಾರ್ಯ ಹಂಚಿಕೆ ಮಾಡಿ ಎಲ್ಲ ಸಂಘದವರನ್ನು ಸಮಾನತೆಯಾಗಿ ಕಂಡು ಧಾರವಾಡ ಜಿಲ್ಲೆಯಲ್ಲಿಯೇ ಅತ್ತ್ಯುತ್ತಮವಾಗಿ ಮಾದರಿ ಕಾರ್ಯಕ್ರಮ ಮಾಡಿದ ನಮ್ಮೆಲ್ಲರ ಮೆಚ್ಚಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾನ್ಯ ಶ್ರೀ ಅಶೋಕ್ ಸಿಂದಗಿ ಸರ್ ಗೆ ಹಾಗೂ ಮಾನ್ಯ ಶ್ರೀ ಮಂಜುನಾಥ ಅಡಿವೆರ ಕ್ಷೇತ್ರ ಸಮನ್ವಯ ಅಧಿಕಾರಿಗಳಿಗೂ BEO ಹಾಗೂ BRC ಎಲ್ಲ ಮಾರ್ಗದರ್ಶಕ ಸಿಬ್ಬಂದಿ ಅವರಿಗೂ ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಶಿಕ್ಷಕರ ಫೆಡರೇಶನ್ (ರಿ)ನವದೆಹಲಿ ವತಿಯಿಂದ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ವತಿಯಿಂದ ತುಂಬು ಹೃದಯದ ಧನ್ಯವಾದಗನ್ನು ತಿಳಿಸಲಾಯಿತು..
ಕೆಲವು ಸಂಘದವರಿಗೆ ಇದೊಂದು ಪಾಠವಾಯ್ತು ಯಾರ ಮಾತಿಗೂ ಕಿವಿಗೊಡದೆ ಧಾರವಾಡ ಜಿಲ್ಲೆಯಲ್ಲಿ ಅತ್ಯುತ್ತಮ ಕಾರ್ಯಕ್ರಮವಾಗಿ ನೆರವೇರಿಸಿದ ನಮ್ಮ ಮೆಚ್ಚಿನ ಅಧಿಕಾರಿಗಳಿಗೆ ಧನ್ಯವಾದಗಳು..