ಹುಬ್ಬಳ್ಳಿ: ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಆದ ಹಿರಿಯ ಶಿಕ್ಷಕ ಶ್ರೀ ಪಿ ಎಸ್ ಧರೆಣಪ್ಪನವರ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಹಾವೀರ ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅವರು ೯೧ ವರ್ಷದ ಹಿರಿಯ ಶಿಕ್ಷಕರಾದ ಶ್ರೀ ಧರೆಣಪ್ಪನವರ ಅವರ ಶಿಕ್ಷಣ ಸೇವೆಯನ್ನು ಮತ್ತು ಜೈನ ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸಿದ್ದನ್ನು ನೆನಪಿಸಿಕೊಂಡರು.
ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್ ಕೆ ಆದಪ್ಪನವರ ಅವರು ಧರೆಣಪ್ಪನವರ ಶಿಕ್ಷಕರು ಜೈನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿ ಶಿಕ್ಷಣ ಸಂಸ್ಥೆಗಳು ಪ್ರಗತಿ ಪರವಾಗಿ ಮುನ್ನಡೆಯಲು ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಪ್ರೊ ಕೆ ಎಸ್ ಕೌಜಲಗಿ, ಮಹಾವೀರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ಆರ್ ಟಿ ಅಣ್ಣಿಗೇರಿ, ಮೂರು ಸಾವಿರ ಮಠದ ಪೂಜಾ ಸಮಿತಿ ಸದಸ್ಯರು ಆದ ಶ್ರೀ ಚನ್ನಬಸಪ್ಪ ಧಾರವಾಡ ಶೆಟ್ಟರ್ ಹಾಗೂ ಶ್ರೀ ವಿಜಯ ಧರೆಣಪ್ಪನವರ ಉಪಸ್ಥಿತರಿದ್ದರು.