ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಬಂದು ನೂರು ದಿನಗಳು ಕಳೆದಿವೆ..ವೇತನ ಆಯೋಗ ಹಾಗೂ ಸರಕಾರದ ನಡುವೆ ಯಾವುದೇ ಸಭೆ ನಡೆದಿಲ್ಲ.. ವೇತನ ಆಯೋಗ ಏನು ಮಾಡುತ್ತಿದೆ? ಎಲ್ಲಿಗೆ ಬಂತು ಸರಕಾರಿ ನೌಕರರ ವೇತನ ಪರಿಷ್ಕರಣೆ? ಹೀಗೆ ನೂರಾರು ಪ್ರಶ್ನೇಗಳಿಗೆ ಉತ್ತರವೇ ಸೀಗುತ್ತಿಲ್ಲ…
ಸರಕಾರದ ತನ್ನ ಐದು ಗ್ಯಾರೆಂಟಿಗಳನ್ನು ಜಾರಿ ಮಾಡುವಲ್ಲಿ ನಿರತವಾಹಿಗಿದೆ.ಈ ಕೆಲಸವನ್ನು ಕೂಡ ನಮ್ಮ ಸರಕಾರಿ ನೌಕಕರರೇ (ಅಧಿಕಾರಿಗಳಿಗೆ) ಮಾಡಬೇಕಿದೆ..ಆದ್ರೆ ಸರಕಾರ ಮಾತ್ರ ನೌಕರರಿಗೆ ನೀಡಿರುವ ಭರವಸೆಗಳು ಮಾತ್ರ ಹಾಗೆ ಉಳಿದಿವೆ…
ಸರ್ಕಾರಿ ನೌಕರರ ಸಂಘದ ರಾಜ್ಯಾದ್ಯಕ್ಷರ ಮೇಲೆ ನೌಕರರು ಸಾಕಷ್ಟು ಭರವಸೆಗಳನ್ನು ಇಟ್ಟುಕೊಂಡಿದ್ದಾರೆ..ನೂರು ದಿನದಲ್ಲಿ ಒಂದೇ ಒಂದು ಮನವಿಯನ್ನು ಸರ್ಕಾರಕ್ಕೆ ನೀಡಿಲ್ಲ…
7 ನೇ ವೇತನ ಆಯೋಗ: ಸಂಘದ ಮುಖ್ಯಸ್ಥರೊಂದಿಗೆ ಸಂಘದ ಪ್ರತಿಕ್ರಿಯೆ / ಬೇಡಿಕೆಗಳ ಕುರಿತು ಸಭೆ.
ರಾಜ್ಯ ಸರ್ಕಾರವು ಸರ್ಕಾರಿ ನೌಕರರು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ, ತುಟ್ಟಿಭತ್ಯೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ, ಪರಿಷ್ಕರಿಸಿ ಸರ್ಕಾರಕ್ಕೆ ವರದಿ ನೀಡಲು ಸರ್ಕಾರಿ ಆದೇಶ ಸಂಖ್ಯೆ: ಆಇ 45 ಎಸ್ ಆರ್ ಪಿ 2022 ದಿನಾಂಕ: 19.11.2022 ರಲ್ಲಿ ಶ್ರೀ ಸುಧಾಕರ್ ರಾವ್, ಭಾ.ಆ.ಸೇ. (ನಿವೃತ್ತ) ಇವರ ಅಧ್ಯಕ್ಷತೆಯಲ್ಲಿ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿರುವ ಬಗ್ಗೆ ನೆನಪಿಸಲು ಇಚ್ಛಿಸುತ್ತೇನೆ.
ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾರ್ಹ ಅಂಶಗಳ ಕುರಿತು ಸಾರ್ವಜನಿಕರು, ಸೇವಾ ಸಂಘಗಳು ಹಾಗೂ ಸರ್ಕಾರಿ ನೌಕರರು, ಸಂಘ ಸಂಸ್ಥೆಗಳಿಂದ ಮುಕ್ತ ಸಲಹೆ, ಅನಿಸಿಕ ಅಲ್ಲದೇ ಇಲಾಖೆಗಳಿಂದ ಮಾಹಿತಿ ಹಾಗೂ ಮುಕ್ತ ಸಲಹೆ ಪಡೆಯುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಆಯೋಗವು ಉಲ್ಲೇಖ (2) ರ ಅಧಿಕೃತ ಜ್ಞಾಪನದಲ್ಲಿ ವಿವಿಧ ಪ್ರಶ್ನಾವಳಿಗಳನ್ನು ರಚಿಸಿ ಕರ್ನಾಟಕ ರಾಜ್ಯಪತ್ರ – ವಿಶೇಷ ರಾಜ್ಯ ಪತ್ರಿಕೆಯಲ್ಲಿ ದಿನಾಂಕ: 17.01.2023 ರಂದು ಪ್ರಕಟಿಸಿರುತ್ತದೆ.
ಸದರಿ ಪ್ರಶ್ನಾವಳಿಗಳಿಗೆ ತಮ್ಮ ಸಂಘದ ವತಿಯಿಂದ ಪ್ರತಿಕ್ರಿಯೆಗಳು / ಉತ್ತರಗಳು / ಬೇಡಿಕೆಗಳು ಉಲ್ಲೇಖ (3) ರಂತ ಆಯೋಗದಲ್ಲಿ ಸ್ವೀಕೃತಗೊಂಡಿರುತ್ತದೆ, ಈ ಹಿನ್ನಲೆಯಲ್ಲಿ, ಆಯೋಗವು ತಮ್ಮ ಸಂಘದ ಬೇಡಿಕೆಗಳು /ವಿನಂತಿಗಳು / ಅಭಿಪ್ರಾಯಗಳ ಕುರಿತು ಚರ್ಚಿಸಲು ಇಚ್ಚಿಸುತ್ತದೆ. ಈ ದಿಸೆಯಲ್ಲಿ, ದಿನಾಂಕ: 06.09.2023 ರಂದು, ಸಭಾ ಕೊಠಡಿ, 7ನೇ ರಾಜ್ಯ ವೇತನ ಆಯೋಗ, 3ನೇ ಮಹಡಿ, ಹಳೆಯ ಕಲ್ಲು ಕಟ್ಟಡ, ಔಷಧ ನಿಯಂತ್ರಣ ಸಂಕೀರ್ಣ, ಅರಮನೆ ರಸ್ತೆ, ಬೆಂಗಳೂರು ಇಲ್ಲಿ 02:40 ಗಂಟೆಗೆ ಸಭೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.
ಸದರಿ ಸಭೆಗೆ ತಮ್ಮ ಸಂಘದ ವತಿಯಿಂದ ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುವ ಪ್ರಾತ್ಯಕ್ಷಿಕೆಯನ್ನು (PPT) ಪ್ರಸ್ತುತಪಡಿಸಬಹುದು.
ಪ್ರಶ್ನಾವಳಿಯ ಉತ್ತರಗಳು, ಬೇಡಿಕೆಗಳು ಮತ್ತು ಇತರೆ ವಿಷಯಗಳ ಸಂಕ್ಷಿಪ್ತ ಮಾಹಿತಿ.
ಮಾಹಿತಿಯು ವಸ್ತುನಿಷ್ಯ ಹಾಗೂ ನಿರ್ದಿಷ್ಟವಾಗಿರಲಿ
ಪ್ರಾತ್ಯಕ್ಷಿಕೆಯು 10 ಸ್ಲೈಡ್ ಗಳಿಗೆ ಸೀಮಿತಗೊಳಿಸುವುದು.
ಮಾಹಿತಿಯು ಸ್ಲೈಡ್ ಗಳು ಪುನರಾವರ್ತನೆಯಾಗದಿರಲಿ,
ಸದರಿ ಸಭೆಗೆ ಪೂರ್ವ ಸಿದ್ಧತೆ ಹಾಗೂ ಅಗತ್ಯ ಮಾಹಿತಿಯೊಂದಿಗೆ ಹಾಜರಾಗುವಂತೆ ಈ ಮೂಲಕ ಕೋರಿದೆ.
ತಮ್ಮ ವಿಶ್ವಾಸಿ,
[ಹಪ್ಪಿಬಾ ರಾಣಿ ಕೋರ್ಲಪಾಟಿ]
ಕಾರ್ಯದರ್ಶಿ.
7ನೇ ರಾಜ್ಯ ವೇತನ ಆಯೋಗ..
ಒಟ್ಟಿನಲ್ಲಿ ವೇತನ ಆಯೋಗ ಆದಷ್ಟು ಬೇಗ ತನ್ನ ವರದಿಯನ್ನು ಸರ್ಕಾರ ನೀಡಲಿ..ಲೋಕಸಭೆ ಚುನಾವಣೆಗೆ ಮೋದಲೆ ವೇತನ ಪರಿಷ್ಕರಣೆ ಆದ್ರೆ ಸರಕಾರದ ಜೊತೆ ನೌಕರರು ಕೈ ಜೋಡಿಸುತ್ತಾರೆ. ಇಲ್ಲವಾದರೆ ಸರಕಾರಕ್ಕೆ ಆಡಳಿತ ವರ್ಗದಿಂದಲೇ ವಿರೋಧವ್ಯಕ್ತವಾಗುತ್ತದೆ..
Please don’t believe all this, for the govt has no time to even fulfil it’s fake garentees to public. They are only eyewashing the all of us. We believe all these only after these happens.
Niveuttiyada NAUKARARU adhikarigalu jataka pakshi mooka giliyante kayutta kulitiddare begane ayoga Tanna 7 ne vetana da shifaarassugalannu sarakarakke sallisali illavadare inneradu nooru varusha madyantara pariharakke seemitavagabekagutade_ shadaksharige ENADARU kannukattu madisavraa __ e sarakara banda mele daniye adgi hodantide