ಬೆಂಗಳೂರಿನ ಶ್ರೀಕಾಂತ ಶಿಕ್ಷಕರ ಸಂಘದ ನೂತನ ರಾಜ್ಯಾಧ್ಯಕ್ಷ
ಧಾರವಾಡ : ರಾಜ್ಶ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ರಾಜ್ಯಾಧ್ಯಕ್ಷರಾಗಿ ಬೆಂಗಳೂರು ಗ್ರಾಮಂತರ ಜಿಲ್ಲೆಯ ಶಿಕ್ಷಕ, ಹೋರಾಟಗಾರ ಕೆ.ವ್ಹಿ.ಶ್ರೀಕಾಂತ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ನಗರದಲ್ಲಿ ಶನಿವಾರ ಜರುಗಿದ ರಾಜ್ಶ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ರಾಜ್ಯ ಘಟಕಕ್ಕೆ ಕೆಲವು ಹೊಸ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು. ಗುರು ತಿಗಡಿ ಹಾಗೂ ಗುರು ಪೋಳ (ಗೌರವಾಧ್ಶಕ್ಷರು), ಡಾ. ಗುರುಮೂರ್ತಿ ಯರಗಂಬಳಿಮಠ, ಶಿವರಾಜ ಕಪಲಾಪುರಿ, ಸಿ. ಎಂ. ಕಿತ್ತೂರ ಮತ್ತು ಎಸ್. ಬಿ. ಪಾಟೀಲ (ಮಹಾಪೋಷಕರು), ಚಿಂತಾಮಣಿಯ ಡಾ. ಆರ್ ನಾರಾಯಣಸ್ವಾಮಿ (ಕಾರ್ಯಾಧ್ಶಕ್ಷ), ಸಂಗಮೇಶ ಖನ್ನಿನಾಯ್ಕರ ಹಾಗೂ ಶಾರದಾ ಶಿರಕೋಳ (ಉಪಾಧ್ಶಕ್ಷರು), ಎಂ.ಎನ್. ಸತ್ತೂರ (ಕೋಶಾಧ್ಶಕ್ಷ), ಶಂಕರಪ್ಪ ಎಸ್. ಘಟ್ಟಿ (ಪ್ರಧಾನ ಕಾರ್ಯದರ್ಶಿ), ರಯಿಸ್ ಫಾತೆಮಾ (ಸಂಘಟನಾ ಕಾರ್ಯದರ್ಶಿ), ಸುರೇಶ ಟಾಳೆ (ಜಿಲ್ಲಾಧ್ಯಕ್ಷ – ಬೀದರ), ಎನ್. ನಾಗರಾಜ (ಜಿಲ್ಲಾಧ್ಯಕ್ಷ – ಬೆಂಗಳೂರು ದಕ್ಷಿಣ ಜಿಲ್ಲೆ), ಪಾಂಡುರಂಗ ಎಚ್. ದಾಸರ (ಅಧ್ಯಕ್ಷ – ಹುಬ್ಬಳ್ಳಿ ಶಹರ ಘಟಕ), ವಸಂತ ಟಿ. ಭಜಂತ್ರಿ (ಕಾರ್ಯದರ್ಶಿ – ಅಳ್ನಾವರ ತಾಲೂಕ ಘಟಕ)
*ಸಮಸ್ಯೆಗಳ ಚರ್ಚೆ* : ವರ್ಗಾವಣೆಯೂ ಸೇರಿದಂತೆ ಪ್ರಾಥಮಿಕ ಶಿಕ್ಷಕರು ಎದುರಿಸುತ್ತಿರುವ ಹಲವಾರು ಪ್ರಮುಖ ಸಮಸ್ಯೆಗಳ ನಿವಾರಣೆಗೆ ಸಭೆಯಲ್ಲಿ ವಿವರವಾದ ಚರ್ಚೆ ನಡೆಯಿತು. ಜಿಲ್ಲಾ ಘಟಕದ ಅಧ್ಯಕ್ಷ ಆರ್. ಎಸ್. ಹಿರೇಗೌಡರ, ಗೌರವಾಧ್ಯಕ್ಷ ಆರ್. ಬಿ. ಮಂಗೋಡಿ, ಕಾರ್ಯದರ್ಶಿ ಎಸ್.ಬಿ. ಶಿವಸಿಂಪಿ, ಉಪಾಧ್ಯಕ್ಷೆ ಗಂಗಮ್ಮ ಎಂ. ಕೋಟಿಗೌಡರ, ತಾಲೂಕ ಘಟಕದ ಅಧ್ಯಕ್ಷ ಕಾಶಪ್ಪ ಎಸ್. ದೊಡವಾಡ, ಗೌರವಾಧ್ಶಕ್ಷ ಅಲ್ಲಾಭಕ್ಷ ಹೆಚ್ ನದಾಫ, ಕಾರ್ಯದರ್ಶಿ ಚಂದ್ರು ತಿಗಡಿ, ಶಹರ ಅಧ್ಶಕ್ಷೆ ಶಕುಂತಲಾ ಬಿ ಅರಮನಿ, ಕಾರ್ಯದರ್ಶಿ ಐ. ಎಚ್. ನದಾಫ, ಗೌರವಾಧ್ಶಕ್ಷ ಎಂ. ಜಿ. ಸುಬೇದಾರ, ಎನ್.ಪಿ.ಎಸ್. ರಾಜ್ಯ ಸಹ ಕಾರ್ಯದರ್ಶಿ ರಾಜು ಮಾಳವಾಡ, ಅಳ್ನಾವರ ತಾಲೂಕ ಅಧ್ಶಕ್ಷ ಆರ್. ಎನ್. ಬಸ್ತವಾಡಕರ, ಹುಬ್ಬಳ್ಳಿ ಶಹರ ಗೌರವಾಧ್ಶಕ್ಷ ಎ. ಎ. ಮುಲ್ಲಾ, ಮಹಾಪೋಷಕ ಜೆ. ಜಿ. ಹೆಬ್ಬಾಳ, ಜಿಲ್ಲಾ ಮುಖ್ಶೋಪಾಧ್ಶಾಯರ ಸಂಘದ ಕಾರ್ಯದರ್ಶಿ ಮಹಾದೇವಿ ಎಂ. ದೊಡಮನಿ, ಇತರೇ ಪದಾಧಿಕಾರಿಗಳಾದ ಎಸ್ ಎಸ್ ಧನಿಗೊಂಡ, ಚಂಪಾ ನರೇಗಲ್, ರಮೇಶ ಸಣ್ಣಮನಿ, ಹನಮಂತ ವಾಯ್. ಡೊಕ್ಕನವರ, ಅನಸೂಯಾ ಡಬ್ಬು, ಎನ್. ವ್ಹಿ. ತೋರಣಗಟ್ಟಿ, ರಾಜು ಬೆಟಗೇರಿ, ಎಸ್ ಎಸ್ ಸಿಂಗೆ, ಕೆ.ಎಸ್. ಹಿರೇಮಠ, ಜಿ. ಎಂ. ಗುಂಜಾಳ ಅವರು ಚರ್ಚೆಯಲ್ಲಿ ಭಾಗವಹಿಸಿ ತಮ್ಮ ವಿಚಾರಗಳನ್ನು ಹಂಚಿಕೊಂಡರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಎಸ್. ಘಟ್ಟಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಎಸ್.ಬಿ. ಶಿವಸಿಂಪಿ ವಂದಿಸಿದರು. ಬೆಂಗಳೂರಿನ ಕಾರ್ಮಿಕ ನಾಯಕ ಕೃಷ್ಣಪ್ಪ ಇದ್ದರು.
————————————–