ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು,ಶಿಕ್ಷಕರಾಗಿ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಸುರೇಶ ಮುಗಳಿ ಇವರಿಗೆ ಅಭಿನಂದನೆಗಳ ಮಹಾಪೂರ
ಧಾರವಾಡ:
ಧಾರವಾಡ ತಾಲೂಕಿನ
ಸುರೇಶ ಮುಗಳಿ, ಇವರು ಸರ್ಕಾರಿ ಪ್ರೌಢಶಾಲಾ ಶಿಕ್ಷಕರು, ಇವರು ಓದಿದ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಮುಗಳಿ,ತಾ:ಧಾರವಾಡ ಪ್ರೌಢ ಶಾಲಾ ಶಿಕ್ಷಣವನ್ನು ಕರೇಮ್ಮಾದೇವಿ ಪ್ರೌಢಶಾಲೆ,ತೇಗೂರು,ತಾ:ಧಾರವಾಡ ಈ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಮುಂದೆ ಇಂಗ್ಲೀಷ ಭಾಷಾ ಶಿಕ್ಷಕರಾಗಿ ಸೇವೆಗೆ ಸೇರಿದ್ದು ಇವರು ಅತ್ಯತ್ತಮ ಇಂಗ್ಲೀಷ ಶಿಕ್ಷಕರಾಗಿರುತ್ತಾರೆ.
ಈಗ ಇವರಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಲಭಿಸಿದೆ. ನೀವು ನಮ್ಮ ಧಾರವಾಡ ತಾಲೂಕಿನ ಊರಿನವರು ಅನ್ನುವುದು ನಮಗೆಲ್ಲಾ ಅತೀವ ಆನಂದವನ್ನು ಉಂಟು ಮಾಡಿದೆ. ಇವರಿಗೆ ಈ ಪ್ರಶಸ್ತಿ ಲಭಿಸಿದ್ದು ನಿಜವಾಗಲೂ ಪ್ರಶಸ್ತಿಯ ಮೌಲ್ಯ ಹೆಚ್ಚಿದೆ, ಇವರು ನಿರಂತರವಾಗಿ ಮಕ್ಕಳಿಗೆ ಜ್ಞಾನವನ್ನು ಉಣಬಡಿಸುತ್ತಾ, ಸದಾ ಮಕ್ಕಳ ಏಳಿಗೆಗಾಗಿ ಶ್ರಮಿಸಿದವರು, ಎಲೆಯ ಮರೆಯ ಕಾಯಿಯಂತೆ ಇರುವ ಇವರು ನಿಜವಾಗಲೂ ಯಾರು ಬೇಕಾದರೂ ಇವರ ಪಾಂಡಿತ್ಯ ಪರೀಕ್ಷಿಸಬಹುದು ಹೀಗೆ ಮುಂದುವರೆಯಲಿ ಎಂದು ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಗೌರವಾದ್ಯಕ್ಷರಾದ ಭೀಮಪ್ಪ ಕಾಸಾಯಿ ಅದ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ತಿಗಡಿ, ಧಾರವಾಡದ ಬಿ ಇ ಒ ಕಚೇರಿಯ ಅಧೀಕ್ಷಕರಾದ ಮಂಜು ಕಲಾದಗಿ, ಧಾರವಾಡದ ಗುರು ಬಳಗದ ಗುರು ತಿಗಡಿ ವಿ ಎನ್ ಕೀರ್ತಿವತಿ ವಾಯ್ ಬಿ ಕಡಕೋಳ ಪ್ರಮೀಳಾ ಜಕ್ಕಣ್ಣವರ ಹಸೀನ ಸಮುದ್ರಿ ಅನಸೂಯ ಡಬ್ಬು ಮಲ್ಲಿಕಾರ್ಜುನ ಉಪ್ಪಿನ ಅಕ್ಷರತಾಯಿ ಲೂಸಿ ಸಾಲ್ಡಾನ, ನಂದಕುಮಾರ ದ್ಯಾಪೂರ ಅಕ್ಬರಲಿ ಸೋಲಾಪೂರ ಮರಿಗೌಡ ಭೂಮನಗೌಡರ ಕೆ ಎಂ ಮುನವಳ್ಳಿ, ರುದ್ರೇಶ ಕುರ್ಲಿ ಎಂ ಡಿ ಹೊಸಮನಿ ಮುಂತಾದವರು ಶುಭಹಾರೈಸಿದರು.