ಸಕ್ಕರೆ ಕಾಯಿಲೆಯ ಸರಳ ಆಹಾರ ತಜ್ಞೆ ಅರುಣಾ
ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಮಾತು ಎಲ್ಲರಿಗೂ ಗೊತ್ತಿದೆ. ಆದರೂ ಕೂಡ ಇಂದಿನ ಈ ಕಂಪ್ಯೂಟರ್ ಯುಗದಲ್ಲಿ ಇತಿ ಮಿತಿ ಇಲ್ಲದ ಊಟ… ವೇಳೆಗೆ ತಕ್ಕ ನಿದ್ದೆ ಇಲ್ಲದೆ ನಮ್ಮ ಅರೋಗ್ಯ ತುಂಬಾ ಹಾಳಾಗುತ್ತಿದೆ.
ಮೊದಲು ನಮ್ಮ ಹಿರಿಯರು ಬೆಳಿಗ್ಗೆ ಬೇಗ ಎದ್ದು ಮೈ ಮುರಿದು ಕೆಲಸ ಮಾಡಿ ಮತ್ತೆ ಬೇಗ ಮಲಗಿ ತುಂಬಾ ಲವಲವಿಕೆಯಿಂದ ಇರುತ್ತಿದ್ದರು. ಆದರೆ ಈಗಿನ ದಿನಗಳಲ್ಲಿ work from home (ಮನೆಯಲ್ಲಿ ಕೆಲಸ) ಸಾಮಾನ್ಯವಾಗಿದ್ದು ಮಕ್ಕಳಿಗೆ ಊಟ ನಿದ್ದೆಯ ನೀರಡಿಕೆಯ ಪರಿವೆ ಇಲ್ಲದೆ ಹಲವಾರು ಸಮಸ್ಯೆಗಳಿಗೆ ಬಲಿಯಾಗುತ್ತಿರುವರು.
ರಕ್ತದ ಕೊರತೆ, ಗ್ಲುಕೋಸ್ ಮಟ್ಟದಲ್ಲಿ ಏರಿಳಿತ, ಬೆನ್ನುನೋವು,ತಲೆನೋವು, ಕಣ್ಣು ಮಂಜಾಗುವಿಕೆ ಹೀಗೆ ಹಲವಾರು ಸಮಸ್ಯೆಗಳಿಂದ ತೊಂದರೆ ಪಡುತ್ತಿದ್ದಾರೆ.
ಇದಕ್ಕೆಲ್ಲ ದೊಡ್ಡ ದೊಡ್ಡ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಗಳಿಗೆ ಹೋಗೋದು ಸಿಟಿ ಸ್ಕ್ಯಾನ್, ಬ್ರೈನ್ ಸ್ಕ್ಯಾನ್, ಅದು ಇದು ಅಂಥ ಸಾವಿರಾರು ರೂಪಾಯಿ ಖರ್ಚು ಮಾಡುತ್ತ ಔಷಧ ಸೇವನೆ ಮಾಡುವುದು ಸಾಗುತ್ತಿದೆ. ಆದರೂ ಖಾಯಿಲೆ ಮಾತ್ರ ಹಾಗೆ ಇರುತ್ತೆ. ಕೆಲವೊಂದು ರೋಗಕ್ಕೆ ಔಷಧಿ ಅನಿವಾರ್ಯ ಆದರೂ.. ಇನ್ನು ಕೆಲವು ರೋಗಗಳಿಗೆ ಔಷಧಿಯ ಅಗತ್ಯ ಇಲ್ಲದಿದ್ದರೂ ಕೊನೆಯ ತನಕ ತೆಗೆದುಕೊಳ್ಳುವ ಅಸಹಾಯಕತೆ ಹೆಚ್ಚಾಗುತ್ತಿದೆ.
ನಮಗೆ ಈಗ ವಯಸ್ಸಿನ ಅಂತರವಿಲ್ಲದೆ ಬಹು ಮುಖ್ಯವಾಗಿ ಕಂಡು ಬರುತ್ತಿರುವ ಸಮಸ್ಯೆ ಸಕ್ಕರೆ ಕಾಯಿಲೆ (ಶುಗರ್) ಎಂಬ ಪಿಡುಗು.
ಇದು ರೋಗವಲ್ಲ. ನಮ್ಮ ದೇಹದಲ್ಲಿರುವ ಪ್ಯಾಂಕ್ರಿಯಾಟಿಕ್ ಎಂಬ ಗ್ರಂಥಿಯ ಚಟುವಟಿಕೆಯಲ್ಲಿ ಏರುಪೇರಾಗಿದ್ದು ಅದರ ಪರಿಣಾಮ ನಮ್ಮ ದೇಹದ ಇತರ ಅಂಗಾಂಗಗಳ ಮೇಲೂ ಉಂಟಾಗಿ ಕಷ್ಟ ಅನುಭವಿಸುತ್ತೇವೆ.
ಇಂತಹ ಕೆಲವು ಸಮಸ್ಯೆಗಳಿಗೆ ತಮ್ಮ ಭರವಸೆಯ ಮಾತುಗಳಿಂದ ಧೈರ್ಯ ತುಂಬಿ ಜೀವನೋತ್ಸಾಹ ತುಂಬುವ ಪ್ರಯತ್ನವನ್ನು ಇಲ್ಲೊಬ್ಬ ಮಹಿಳೆ ಶ್ರೀಮತಿ ಅರುಣಾ ಮಹೇಶ್ ಹಿರೇಮಠ ಎನ್ನುವವರು ಮಾಡುತ್ತಿದ್ದಾರೆ.
ಶಿಕ್ಷಕ ದಂಪತಿಯ ಕುವರಿ
ಇವರು ಮೂಲತ: ಕಿತ್ತೊರಿನವರು. ಇವರ ತಂದೆ ಶ್ರೀ ರಾಚಯ್ಯ್ ತಿಮ್ಮಾಪುರ ಮಠ್ ತಾಯಿ ರಾಜೇಶ್ವರಿ. ವೃತ್ತಿಯಲ್ಲಿ ಇಬ್ಬರೂ ಶಿಕ್ಷಕರು.ಈ ಶರಣ ಶಿಕ್ಷಕ ದಂಪತಿಗಳ ಮೊದಲ ಮಗ ಗುರುಪ್ರಸಾದ್. ಇವರು ಸದ್ಯ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವರು. ಇನ್ನು ಅರುಣಾ ಮುದ್ದಿನ ಎರಡನೆಯ ಮಗಳಾಗಿ ತಂದೆ ತಾಯಿಯ ಆದರ್ಶದಡಿಯಲ್ಲಿ ಬೆಳೆದವರು.
ಇವರು ತಮ್ಮ ಪ್ರಾರ್ಥಮಿಕ ವ್ಯಾಸಂಗವನ್ನು ಹಿಡಕಲ್ ನಲ್ಲಿ ನಂತರ ಪದವಿಪೂರ್ವ ಶಿಕ್ಷಣ ವಿಜ್ಞಾನ ವಿಭಾಗದಲ್ಲಿ ಧಾರವಾಡ ಸೆಂಟ್ ಜೋಸೆಫ್ ಹಾಗೂ ಗೃಹ ವಿಜ್ಞಾನ (ಹೋಂ ಸೈನ್ಸ್).ಮತ್ತು ಮಾಸ್ಟರ್ of ಸೈನ್ಸ್ ನ್ನು ಅಗ್ರಿಕಲ್ಚರ್ ಯೂನಿವರ್ಸಿಟಿ ಧಾರವಾಡ ದಲ್ಲಿ ಮುಗಿಸಿರುವರು. ನಂತರ ಹೆಚ್ಚಿನ ತರಬೇತಿಯನ್ನು ಬೆಂಗಳೂರಿನ ಮಣಿಪಾಲ್ ಹಾಗೂ ಬೆಳಗಾವಿ ಕೆ. ಎಲ್. ಇ ಸಂಸ್ಥೆಯಲ್ಲಿ ಪಡೆದಿರುವರು.
ಮನೆಯಲ್ಲಿನ ಹಿರಿಯರ ಆಶೀರ್ವಾದ ಹಾಗೂ ಸಂಸ್ಕಾರ ಎಲ್ಲವೂ ಇವರ ವೃತ್ತಿಗೆ ಪೂರಕವಾಗಿದ್ದು ಸಾಧನೆ ಮಾಡಲು ಬಹಳ ಸಹಾಯವಾಗಿದೆ. ಅಲ್ಲದೆ ಇವರ ಪತಿ ಮಹೇಶ್ ಅವರು ಪ್ರತಿ ಹೆಜ್ಜೆಯಲ್ಲೂ ಇವರಿಗೆ ಬೆಂಬಲವಾಗಿರುವರು.ಈ ವೈದ್ಯಗೆ ಓಜಸ್ ಎಂಬ ಪುತ್ರನಿರುವನು.
ವೈದ್ಯಕೀಯ ರಂಗ
ಇವರು ತಮ್ಮ ವೈದ್ಯಕೀಯ ವೃತ್ತಿ ಯನ್ನು ಶ್ರೀ ಧರ್ಮಸ್ಥಳ ಮಂಜುನಾಥ ಆಸ್ಪತ್ರೆಯಲ್ಲಿ ಬಹಳ ಉತ್ತಮ ಅನುಭವದಲ್ಲಿ ಆರೋಗ್ಯ್ ತಜ್ಞೆ ಯಾಗಿ ಕಳೆದ 9 ವರ್ಷಗಳ ಕಾಲ ಕೈಗೊಂಡಿರುವರು. ಸದ್ಯ ಮನೆಯಲ್ಲಿ ಇದ್ದು ಕುಟುಂಬ ಸದಸ್ಯರಿಗೂ ಹಾಗೂ ಬೇರೆ ಜನರಿಗೂ ಕೂಡ ದೈಹಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಮೂಲಕ ತಮ್ಮ ಸಾತ್ವಿಕ ಮನೋಭಾವ ಹಾಗೂ ಸೌಹಾರ್ದಯುತ ಸಲಹೆಗಳ ಮೂಲಕ ರೋಗಿಗಳ ಪ್ರೀತಿಗೆ ಪಾತ್ರರಾಗಿರುವವರು.
ವೈದ್ಯಕೀಯ ಸಲಹೆಗಳ ಬದುಕು
ರೋಗಿಗಳ ಪೋಷಕರಿಗೆ ಆತ್ಮ ಸ್ಟೈರ್ಯ ತುಂಬುವದು ಇವರ ಮೊದಲ ಕೆಲಸ.ಶುಗರ್ ಎಂದರೆ ಹೆಸರು ಕೇಳಿದರೆ ಭಯ ಎನ್ನುವ ಸ್ಥಿತಿ ನಿರ್ಮಾಣ ಇಂದಿನ ದಿನಗಳಲ್ಲಿ ಬಹುತೇಕ ಜನರಲ್ಲಿ ಆವರಿಸುತ್ತದೆ. ಆದರೆ ಇವರ ಸಾಂತ್ವನದ ಭರವಸೆಯ ಮಾತುಗಳೇ ಅರ್ಧ ನಮಗೆ ಆರಾಮ ಆಗಿ ಸಮಾಧಾನ ಎನ್ನಿಸುತ್ತವೆ.ಇವರು ನೀಡುವ ಸಲಹೆಗಳ ನ್ನು 3 ತಿಂಗಳು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾ ಸಾಗಿದರೆ ಸಾಕು ನಿಮ್ಮ ಸಕ್ಕರೆ ಕಾಯಿಲೆ ವಾಸಿಯಾಗುವುದರಲ್ಲಿ ಸಂದೇಹವೇ ಇಲ್ಲ.
ಪ್ರತಿದಿನ ಬೆಳಿಗ್ಗೆ ಮಧ್ಯಾಹ್ನ ಸಾಯಂಕಾಲ ಹಾಗೂ ರಾತ್ರಿಯ ಊಟದ ಸಮಯದಲ್ಲಿ ಸೇವಿಸುವ ಆಹಾರದ ಕ್ರಮದ ಅಳತೆಯನ್ನು ಇವರು ಹೇಳಿಕೊಡುತ್ತಾರೆ. ಹಾಗೆಯೇ ರೋಗಿಗಳು ಅವರ ಊಟದ ಭಾವಚಿತ್ರವನ್ನು ಇವರಿಗೆ ದಿನಾಲು ಕಳಿಸಲೇಬೇಕು. ಅವರ ಊಟದಲ್ಲಿ ಏನೇನು ಇರಬೇಕೆಂದು ಕ್ರಮಬದ್ದವಾಗಿ ಹೇಳಿಕೊಡುತ್ತಾರೆ. ಅದರ ಜೊತೆಗೆ ಎಲ್ಲ ರೀತಿಯ ಅವಶ್ಯಕ ರಕ್ತ ತಪಾಸನೆ ಮಾಡಿಸಿ ವೀಕ್ಷಣೆ ಮಾಡುತ್ತಾರೆ. ಯಾಕಂದರೆ ಒಬ್ಬ ರೋಗಿ ಇವರನ್ನು ನಂಬಿ ಬಂದಾಗ ಅದರ ಜವಾಬ್ದಾರಿ ಮುಖ್ಯ ವಾಗಿರುತ್ತದೆ. ಈ ಸಲಹೆಗಳ ಪಾಲಿಸಿದ ಅನೇಕರು ಗುಣಮುಖರಾಗಿ ಇವರ ಬಗ್ಗೆ ತಮ್ಮ ಆಪ್ತರಿಗೆ ಹೇಳುತ್ತಾ ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿರುವರು.
ವೈದ್ಯಕೀಯ ರಂಗದ ಬಹುಮುಖ ಸೇವೆ
ಮನೆಯಲ್ಲಿ ವೈದ್ಯಕೀಯ ಸೇವೆ ಮಾಡುತ್ತಾ ಇವರು ಅನೇಕ ಆರೋಗ್ಯ ತಪಾಸಣೆಯ ಶಿಬಿರಗಳಲ್ಲಿ ಪಾಲ್ಗೊಂಡು ಸಲಹೆ ನೀಡಿರುವರು. ಅಷ್ಟೇ ಅಲ್ಲ ಖಾಸಗಿ ಆಸ್ಪತ್ರೆಗಳಿಗೂ ವೈದ್ಯರ ಕೋರಿಕಯ ಮೇಲೆ ಆಗಾಗ ಭೇಟಿ ನೀಡುತ್ತಾರೆ. ಧಾರವಾಡ ಹತ್ತಿರದ ಬೇಲೂರನಲ್ಲಿರುವ ಸಿರಿ ಧಾನ್ಯದ ಕಿರು ಉದ್ಯಮದಲ್ಲಿ ಸಿರಿ ಧಾನ್ಯಗಳಿಂದ ಶುಗರ್ ಕಂಟ್ರೋಲ್ ಮಾಡುವ ಆಹಾರ ಕಿಟ್, ಮಕ್ಕಳಿಗಾಗಿ ಪೌಷ್ಟಿಕ ಪ್ರೊಟೀನಿಯುಕ್ತ ಆಹಾರ ಪುಡಿ ಹಾಗೆಯೇ ಬೊಜ್ಜು ಕರಗಿಸುವ ಆಹಾರ ಕಿಟ್ ತಯಾರಿಸುವ ಕಂಪನಿಯಲ್ಲಿ ಉತ್ಪನ್ನ ಅಭಿವೃದ್ಧಿ ಕೂಡ ಇವರು ಮಾಡಿರುವುದು ಇವರ ಬಹುಮುಖ ಸೇವೆಗೆ ಹಿಡಿದ ಕೈಗನ್ನಡಿ.
ಮಸಾಲೆ ಮತ್ತು ರೆಡಿ ಟು ಕುಕ್ ಉತ್ಪನ್ನ ತಯಾರಿಕೆ ಕಂಪನಿಯಲ್ಲಿ ತಯಾರಿಕಾ ಮುಖ್ಯಸ್ಥರಾಗಿ ಹಾಗೂ RD head ಆಗಿ ಕೆಲಸ ನಿರ್ವಹಿಸಿರುವುದು ಇವರ ಬಹುಮುಖ ಸೇವೆಗೆ ಹಿಡಿದ ಕೈಗನ್ನಡಿ.
ಸಹೃದಯ ವೈದ್ಯೆ
ಇವರ ಮುಖ್ಯ ಸ್ವಭಾವ ಎಂದರೆ ತಮ್ಮ ಹತ್ತಿರ ಬರುವ ರೋಗಿ ಗಳ ತೊಂದರೆಗಳನ್ನು ಚಾಲೆಂಜ್ ಆಗಿ ತೆಗೆದುಕೊಳ್ಳೋದು. ಬಹಳ ವಿಚಿತ್ರ ಯಾಕಂದರೆ ಶುಗರ್ ಸ್ಪೆಷಲಿಸ್ಟ್ ಹತ್ತಿರ ಹೋದ್ರೆ ಯಾರು ಮೊದಲಿಗೆ ಆಹಾರ ಡಯಟ್ ಹೇಳುವುದು ತುಂಬಾ ಅಪರೂಪ. ಎಲ್ಲ ತಿನ್ನಿ ಟ್ಯಾಬ್ಲೆಟ್ ತೊಗೋಳಿ ಅಂಥ ಹೇಳೋದನ್ನ ಕೇಳ್ತೀವಿ ಶುಗರ್ ಟ್ಯಾಬ್ಲೇಟ್ಸ್ ನಿಂದ್ ಎಷ್ಟೊಂದು ಅಡ್ಡ ಪರಿಣಾಮವಿದೆ.ಆದರೆ ಹೆಚ್ಚಾಗಿ ಯಾವ ವೈದ್ಯರುಗಳು ತಲೆ ಕೆಡಿಸಿಕೊಳ್ಳೋಲ್ಲ. ಕೊನೆಯ ತನಕ ಮಾತ್ರೆಗಳನ್ನು ತಗೆದುಕೊಂಡು ಬದುಕಬೇಕು
ಆಗ ನಮ್ಮ ದೇಹ ಮಾತ್ರೆಗಳಿಗೆ ಹೊಂದಿಕೊಂಡು ಬಿಡುತ್ತೆ. ಶುಗರ್ ಅನ್ನೋದು ರೋಗವೇ ಅಲ್ಲ. ನಾವು ಗಟ್ಟಿ ಜೀವ ಮಾಡಿಕೊಂಡು ಆಹಾರ ಪಥ್ಯೆ ಮಾಡಿದರೆ ಬೇಗ ಗುಣಮುಖ ಆಗಬಹುದು. ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಆಗಬೇಕು ಅಷ್ಟೇ. ದೇವರು ಕೊಟ್ಟ ಈ ಅದ್ಭುತ ಶರೀರ ಕಾಪಾಡಿಕೊಳ್ಳೋದು ನಮ್ಮ ಕೈಯಲ್ಲಿದೆ.ಎಂಬುದನ್ನು ವೈದ್ಯಕೀಯ ಚಿಕಿತ್ಸೆ ಜೊತೆಗೆ ಆತ್ಮೀಯ ಸಲಹೆಗಳ ಮೂಲಕ ಪರಿಹಾರ ನೀಡುತ್ತಿರುವವರು ಡಾ. ಅರುಣಾ ಎಂದರೆ ಅತಿಶಯೋಕ್ತಿಯಲ್ಲ.
ಅರುಣಾ ಅವರು ತಮ್ಮ ರೋಗಿಗಳ ರಿಪೋರ್ಟ್ ಸ್ಟೇಟಸ್ ನೋಡಿದಾಗ ನಿಜ್ವಾಗ್ಲೂ ಆಶ್ಚರ್ಯ ಆಗುತ್ತದೆ. ಯಾಕಂದ್ರೆ HbA1c ಟೆಸ್ಟ್ ಅಂದರೆ ರೋಗಿಯ ಸರಾಸರಿ 3 ತಿಂಗಳ ಶುಗರ್ ಲೆವೆಲ್ 13ಕ್ಕೆ ಇದ್ದಿದ್ದು 4.8 ಗೆ ಬಂದಿರೋದು.ಅನೇಕರು ಇವರ ಸಲಹೆಗಳ ಪಾಲಿಸುವ ಮೂಲಕ ಗುಣಮುಖರಾಗಿದ್ದು ಇದಕ್ಕೆ ನಿದರ್ಶನ.
Type 2 ಶುಗರ್ ಇದ್ದವರು ಹೆದರುವ ಅಗತ್ಯವೆ ಇಲ್ಲ. ಚಿಂತಿಸಿದಷ್ಟು ಶುಗರ್ ಹೆಚ್ಚಾಗುತ್ತೆ ಹೊರತು ಕಡಿಮೆ ಆಗೋಲ್ಲ. ನಮ್ಮ ಆಹಾರ ತಜ್ಞೆ ನೀಡುವ ಸಲಹೆಗಳನ್ನು ಚಾಚು ತಪ್ಪದೆ ಪಾಲಿಸಿ ಗುಣಮುಖರಾದವರು ಎಷ್ಟೋ ಜನ ಇರುವರು.
ಕೇವಲ ಡಯಾಬಿಟಿಕ್ ಮಾತ್ರವಲ್ಲದೆ ಬಿಪಿ, ಥೈರಾಯಿಡ್, ಹೃದಯ ಸಂಬಂದಿ ಕಾಯಿಲೆ, ತೂಕ ಇಳಿಸುವುದು, ತೂಕ ಹೆಚ್ಚಿಸಿಕೊಳ್ಳುವ ಈ ರೀತಿಯ ಎಲ್ಲ ಸಮಸ್ಯೆಗಳಿಗೆ ಆಹಾರ ಪಥ್ಯೆ ಇವರು ಹೇಳಿ ಕೊಡುತ್ತಾರೆ. ಮುಕ್ತವಾಗಿ ನಮ್ಮ ಸಮಸ್ಯೆಗಳನ್ನು ಕೇಳುವ ಮೂಲಕ ಸಲಹೆಗಳನ್ನು ನೀಡುತ್ತಾರೆ. ರೋಗಿಗಳಾದವರು ಅವರ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಿದರೆ ಯಶಸ್ಸು ಖಂಡಿತ.
ಶುಗರ್ ನಿಂದ್ ಬಳಲುತ್ತಿರುವ ಹಲವಾರು ರೋಗಿಗಳಿಗೆ ದಾರಿದೀಪವಾಗಿ ಅರುಣಾ ಅವರ ಮುಖದಲ್ಲಿ ಮುಗುಳ್ನಗೆ ಹಾಗೂ ಸರಳವಾದ ವೈದ್ಯಕೀಯ ಉಪಚಾರ ಕಾರಣ . ಇಂತಹ ಅಪರೂಪದ ವೈದ್ಯರು ಇಂದು ತುಂಬಾ ವಿರಳ ಈ ದಿಸೆಯಲ್ಲಿ ಇವರ ಬಗ್ಗೆ ಒಂದು ಪುಟ್ಟ ಪರಿಚಯ
ಶ್ರೀಮತಿ ಮುಕ್ತಾ. ಷ. ಪಶುಪತಿ
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ