ಪ್ರತಿಯೊಂದು ಮಗುವಿನಲ್ಲೂ ತನ್ನದೇ ಆದಂತ ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಉತ್ತಮ ರೀತಿಯಲ್ಲಿ ಪ್ರದರ್ಶನ ಮಾಡಲು ಪ್ರತಿಭಾ ಕಾರಂಜಿ ವೇದಿಕೆಯನ್ನು ಬಳಸಿಕೊಂಡು ಉನ್ನತ ಮಟ್ಟಕ್ಕೆ ತಮ್ಮ ಪ್ರತಿಭಾ ಪ್ರದರ್ಶನ ಮಾಡಬೇಕು ಎಂದು ಹಾರೈಸಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀ ಜಿ ಎಂ ಮುಂದಿನಮನಿ ರವರು ಡ್ರಮ್ ಬಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೆವೆಂತ್ ಡೆ ಶಾಲೆ ಲಕ್ಷ್ಮೇಶ್ವರ ಇಲ್ಲಿ ಇಂದು ಲಕ್ಷ್ಮೇಶ್ವರ ಉತ್ತರ ಕ್ಲಸ್ಟರ್ ನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಿನ್ನೆ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳು ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ ಲ್ಯಾಂಡರ್ ನ್ನು ಯಶಸ್ವಿಯಾಗಿ ಇಳಿಸಿದ್ದು ಭಾರತೀಯರಾದ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಗದಗ ಜಿಲ್ಲಾ ಉಪನಿರ್ದೇಶಕರ ಕಛೇರಿಯ ಎಪಿಸಿಒ ಎಸ್ ಕೆ ಹವಾಲ್ದಾರ ಮಾತನಾಡಿದರು.
ಎಲ್ಲಾ ನಿರ್ಣಾಯಕರು ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಿ ಮುಂದಿನ ಹಂತಕ್ಕೆ ಕಳುಹಿಸಿ ಎಂದು ಕರಾಪ್ರಾಶಾಶಿಸಂಘ ಲಕ್ಷ್ಮೇಶ್ವರ ಘಟಕ ಅಧ್ಯಕ್ಷರಾದ ಬಿ ಎಸ್. ಹರಲಾಪುರ ಹೇಳಿದರು.
ಈ ಸಂದರ್ಭದಲ್ಲಿ ಕರಾಸನೌ ಸಂಘ ಅಧ್ಯಕ್ಷರು ಶ್ರೀ ಡಿ ಎಚ್ ಪಾಟೀಲ, ಕಾರ್ಯದರ್ಶಿ ಚಂದ್ರು ನೇಕಾರ, ಕಸಾಪ ಅಧ್ಯಕ್ಷರು ಈಶ್ವರ ಮೆಡ್ಲೇರಿ, ಶಿಕ್ಷಣಾಧಿಕಾರಿಗಳ ಸಂಘದ ಶಿರಹಟ್ಟಿ ಅಧ್ಯಕ್ಷರು ಎಮ್ ಬಿ ಹೊಸಮನಿ, ಆರ್ ಎಮ್ ಶಿರಹಟ್ಟಿ ಜಿಲ್ಲಾಧ್ಯಕ್ಷರು ವಿಕಲಚೇತನ ನೌಕರರ ಸಂಘ ಗದಗ, ಬಿ ಎಮ್ ಕುಂಬಾರ, ಡಿ ಎನ್ ದೊಡ್ಡಮನಿ, ಆರ್ ಎಫ್ ದೊಡ್ಡಮನಿ, ಅಶೋಕ ಪೀಟರ್, ಸಿ ಆರ್ ಪಿ ಗಳಾದ ಉಮೇಶ್ ನೇಕಾರ, ಸತೀಶ್ ಬೋಮಲೆ, ಜಿ ಆರ್ ಪಾಟೀಲ್, ಎಮ್ ಎನ್ ಭರಮಗೌಡ್ರ, ಎಸ್ ಎಮ್ ತಾಯಮ್ಮನವರ, ಎಸ್ ಎಮ್ ಹಾಳದೋಟದ ಮುಖ್ಯ ಅತಿಥಿಗಳಾಗಿ ಹಾಜರಿದ್ದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಿರಹಟ್ಟಿ ತಾಲ್ಲೂಕು ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀ ಜಿಎಂ ಮುಂದಿನಮನಿ ರವರಿಗೆ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಮತ್ತು ಕರಾಪ್ರಾಶಾಶಿಸಂಘ ಜಿಲ್ಲಾ ಘಟಕ ಕೊಡ ಮಾಡಿದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶ್ರೀ ಎಸ್ ಎನ್ ತಾಯಮ್ಮನವರ, ಶ್ರೀಮತಿ ಎಸ್ ಎಂ ಹಾಳದೋಟದ, ಹಾಗೂ ನಿಕಟ ಪೂರ್ವ ಬಿ ಆರ್ ಪಿ ಶ್ರೀ ಎಮ್ ಎನ್ ಭರಮಗೌಡ್ರರವರನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ಸುಸನ್ ಮುಖ್ಯ ಶಿಕ್ಷಕರು ವಹಿಸಿದ್ದರು. ಸ್ವಾಗತವನ್ನು ದಾನಪ್ಪ ಎಚ್, ಶ್ರೀಕಾಂತ್ ಬಡಿಗೇರ ನಿರೂಪಣೆ, ಸಂತೋಷ ವಂದನಾರ್ಪಣೆಯನ್ನು ಮಾಡಿದರು, ಎನ್ ಎಸ್ ಬಂಕಾಪುರ ಮತ್ತು ಎನ್ ಎನ್ ಶಿಗ್ಲಿ ಸ್ಪರ್ಧೆಗಳನ್ನು ನಿರ್ವಹಣೆ ಮಾಡಿದರು. ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ಉತ್ತರ ಕ್ಲಸ್ಟರ್ ನ ವ್ಯಾಪ್ತಿಯ ಶಿಕ್ಷಕರು, ನಿರ್ಣಾಯಕರು, ಮುದ್ದು ಮಕ್ಕಳು ಪಾಲ್ಗೊಂಡಿದ್ದರು.