ಉಪನ್ಯಾಸಕರ ನಿವೃತ್ತಿ ಜೀವನವನ್ನು ಕೂಡ ನೆಮ್ಮದಿಯಿಂದ ಕಳೆಯಲು ಬೀಡದ DDPU ಕಛೇರಿ ಸಿಬ್ಬಂದಿ…
ಡಿಡಿಪಿಯು ಕಚೇರಿಯಲ್ಲಿಯೇ ಲಂಚಾವತಾರ!!?
ಧಾರವಾಡ: ಲಂಚ ಸ್ವೀಕರಿಸುತ್ತಿದ್ದ ಧಾರವಾಡ DDPU ಕಚೇರಿ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಚೇರಿಯಲ್ಲೇ 15 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿಡಿಪಿಯು ಕಚೇರಿ ಸೆಕ್ಷನ್ ಆಧಿಕಾರಿ ದುರ್ಗದಾಸ್ ಮಸೂತಿ ಹಾಗೂ ಡಿಡಿಪಿಯು ಎಫ್ಡಿಎ ಸಹಾಯಕ ನಾಗರಾಜ್ ಹೂಗಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಅವರು ನಿವೃತ್ತ ಉಪನ್ಯಾಸಕ ಸುಭಾಷ್ ಚವರೆಡ್ಡಿಯಿಂದ ಪಿಂಚಣಿ ನೀಡಲು ದಾಖಲೆ ಸರಿಪಡಿಸಿಕೊಡಲು 15,000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.