ಪರಿಸರ ಸ್ನೇಹಿ ಗಣಪ ತಯಾರಿಕಾ ತರಬೇತಿ ಕಾರ್ಯಾಗಾರ.
ಹುಬ್ಬಳ್ಳಿ .22:
ಇಲ್ಲಿನ ವಿಶ್ವೇಶ್ವರ ನಗರದ ಸರಕಾರಿ ಪ್ರೌಢಶಾಲೆಯಲ್ಲಿ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಧಾರವಾಡ, ಮಕ್ಕಳ ಸಾಹಿತ್ಯ ಪರಿಷತ್ ಧಾರವಾಡ, ಕರ್ನಾಟಕ ಸಂಗ್ರಾಮ ಸೇನೆ ಧಾರವಾಡ ಹಾಗೂ ಸರಕಾರಿ ಪ್ರೌಢಶಾಲೆ ವಿಶ್ವೇಶ್ವರ ನಗರ ಸಹ್ಯಾದ್ರಿ ಇಕೋ ಕ್ಲಬ್ ವತಿಯಿಂದ ಪರಿಸರ ಸ್ನೇಹಿ ಗಣಪ ತಯಾರಿಕಾ ತರಬೇತಿ ಕಾರ್ಯಾಗಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಮುಖ್ಯೋಪಾಧ್ಯಯರಾದ ಡಿ.ಜಿ. ಕಮ್ಮಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಪಿಒಪಿ ಗಣಪಗಳು ಸಾಮಾನ್ಯವಾಗಿ ನೀರಿನಲ್ಲಿ ಕರಗುವುದಿಲ್ಲ. ಇಂತಹ ಗಣಪತಿಗಳಿಂದ ನೀರು ಕಲುಷಿತಗೊಂಡು ವಾತಾವರಣದಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಎಲ್ಲರೂ ಪಿಒಪಿ ಗಣಪತಿಗಳನ್ನು ತ್ಯಜಿಸಿ, ಮಣ್ಣಿನ ಗಣಪತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕೈಜೋಡಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಜೀವ ದುಮ್ಮಕ್ಕನಾಳ ಗಣಪತಿ ಪ್ರತಿಷ್ಠಾಸುವ ಕಾರ್ಯವಿಧಾನದ ಕುರಿತು ಮಾತನಾಡಿದರು.
ದಿಮೇಶ ನಾಯ್ಕ ಪಿಒಪಿ ಹಾಗೂ ಬಣ್ಣದ ಗಣಪನ ತಯಾರಿಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಬಗ್ಗೆ ವಿವರಿಸಿದರು.
ಹಿರಿಯ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ ಮಕ್ಕಳಿಗೆ ಸುಂದರವಾದ ಗಣಪತಿ ತಯಾರಿಸುವ ಕಲೆ ಬಗ್ಗೆ ತಿಳಿಸಿದರು.
ಗೀತಾ ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು.