‘ಪ್ರತಿಭಾನ್ವೇಷಣೆಯೇ ಪ್ರತಿಭಾ ಕಾರಂಜಿ ಉದ್ದೇಶ’
‘ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ದೇಶವಾಗಿದೆ’ಎಂದು ಕೊಂಚಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಮೇಟಿ ಹೇಳಿದರು.
ಶಿರಹಟ್ಟಿ ತಾಲ್ಲೂಕಿನ ಕೊಂಚಿಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾ ಶಿಕ್ಷ ಣ ಇಲಾಖೆಯಿಂದ ಬುಧವಾರ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಪೂರ್ಣಿಮಾ ಮ ಮೇಟಿ ಅವರು ಮಾತನಾಡಿದರು.
‘ಕಂಠಪಾಠ,ಭಾಷಣ,ಧಾರ್ಮಿಕ ಪಠಣ, ಸಂಸ್ಕೃತ ಪಠಣ,ಲಘು ಸಂಗೀತ, ಛದ್ಮವೇಷ, ಗಾಯನ, ಚಿತ್ರಕಲೆ, ಕಥೆ ಹೇಳುವುದು, ಪ್ರಬಂಧ, ಚರ್ಚಾಸ್ಪರ್ಧೆ, ಆಶು ಭಾಷಣ, ಏಕಾಪಾತ್ರಾಭಿನಯ, ಜನಪದ ನೃತ್ಯ, ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಅನೇಕ ಕಲಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಭಾ ಕಾರಂಜಿ ವ್ಯಾಪ್ತಿಯಲ್ಲಿ ಬರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಕಲಾಭಿರುಚಿಯ ಸಾಮರ್ಥ್ಯವನ್ನು ಸಾಬೀತು ಮಾಡಲು ಇದೊಂದು ಉತ್ತಮ ವೇದಿಕೆ’ ಎಂದು ಶಿರಹಟ್ಟಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಸವರಾಜ ಎಮ್ ಯರಗುಪ್ಪಿ ಹೇಳಿದರು.
‘ಪ್ರತಿಭಾ ಕಾರಂಜಿ ಎಂಬುದು ಕಲಾ ಪ್ರತಿಭೆಗಳ ಚಿಣ್ಣರ ಹಬ್ಬ, ಪೋಷಕರಿಗಲ್ಲದೆ ಸಾರ್ವಜನಿಕರು ಖುಷಿ ಪಡುವ ಹಬ್ಬ. ಮಕ್ಕಳ ಪ್ರತಿಭೆಯನ್ನು ತಂದೆ ತಾಯಿಗಳು ಹತ್ತಿರದಿಂದ ಕಣ್ಮುಂಬಿಕೊಳ್ಳುವ ವೇದಿಕೆಯಾಗಿದೆ. ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ ಸ್ಪರ್ಧೆ ಇರುವುದರಿಂದ ಶಾಲೆ ಶಿಕ್ಷಕರು ಉತ್ತಮ ತರಬೇತಿ ನೀಡಿ ಸಜ್ಜುಗೊಳಿಸಬೇಕು. ಸರ್ಕಾರದ ಆನೇಕ ಯೋಜನೆಗಳನ್ನು ಜಾರಿ ಮಾಡಿ ಗುಣಮಟ್ಟದ ಶಿಕ್ಷಣಕ್ಕೆ ಪ್ರಯತ್ನಿಸುತ್ತಿದೆ.ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಶಿಕ್ಷಣ ಸಂಯೋಜಕರಾದ ಹರೀಶ್ ಎಸ್ ಹೇಳಿದರು.
ಕ ರಾ ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್ ಎಫ್ ಮಠದ ಮಾತನಾಡಿ, ‘15 ವರ್ಷಗಳಿಂದ ಸರ್ಕಾರವು ಶಿಕ್ಷಣ ಇಲಾಖೆ ಮೂಲಕ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಒಂದರಿಂದ 10ನೇ ತರಗತಿ ಮಕ್ಕಳಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮೂಲಕ ಅವರ ಪ್ರತಿಭೆ ಗುರುತಿಸುತ್ತಿದೆ. ಇದರ ಮೂಲಕ ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ವೈಭವವನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದೆ. ಮನೋರಂಜನಾತ್ಮಕ ಕಾರ್ಯಕ್ರಮದಿಂದ ಶೈಕ್ಷಣಿಕ ಗುಣಮಟ್ಟದ ಫಲಿತಾಂಶಕ್ಕೂ ಸಹಕಾರಿಯಾಗಲಿದೆ’… ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೆಳ್ಳಟ್ಟಿ ಕ್ಲಸ್ಟರ್ ಶಾಲೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಶಿಕ್ಷಕರಾದ ಎನ್ ಎನ್ ಕಲಕೇರಿ, ಶ್ರೀಮತಿ ಎಸ್ ಎಮ್ ಬೇಪಾರಿ ಮತ್ತು ಬಿ ಪಿ ಮುಳಗುಂದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಮಹೇಶ ಮೇಟಿ, ಸದಸ್ಯರಾದ ಈರಣ್ಣ ಹುಡೇದ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಬುಡ್ನೆಸಾಬ ಹಾವನೂರ,ಎಮ್ ಪಿ ಬೂದಿಹಾಳ, ಎಸ್ ವಿ ಹುಡೇದ, ಬಿ ಎಮ್ ಯಣಿಗಾರ, ಕ ರಾ ಪ್ರಾ ಶಾ ಶಿ ಸಂಘದ ಅಧ್ಯಕ್ಷರಾದ ಎಸ್ ಎಫ್ ಮಠದ, ಸ್ಮರಣ ಸಂಚಿಕೆ ಕಾಣಿಕೆ ನೀಡಿದವರಾದ ಮಹೇಶ ಮೇಟಿ, ಜಿ ಎನ್ ಕೊಡಬಾಳ, ಶಂಕರ ರಾಠೋಡ, ಪ್ರಧಾನ ಗುರುಗಳಾದ ಎನ್ ಬಿ ಪೂಜಾರ ಮತ್ತು ಬಿ ಆರ್ ಪಿ ಗಳಾದ ಬಿ ಎಮ್ ಯರಗುಪ್ಪಿ, ವಿ ಎಚ್ ದೀಪಾಲಿ ಮತ್ತು ಸಿ.ಆರ್.ಪಿಗಳಾದ ಆರ್ ಮಹಾಂತೇಶ, ತಿರಕಪ್ಪ ಪೂಜಾರ,ಗಿರೀಶ ನೇಕಾರ, ಸಿ ವಿ ವಡಕಣ್ಣವರ,ಎಸ್ ಎನ್ ಪಶುಪತಿಹಾಳ, ಎಮ್ ಎಮ್ ಬೊಮಲೆ , ಶಿಕ್ಷಕರಾದ ಮಲ್ಲಿಕಾರ್ಜುನ ರಡ್ಡೆರ, ಜೆ ಎಸ್ ರಾಮಶೆಟ್ಟರ,ಹಾಲೇಶ ಜಕ್ಕಲಿ ಹಾಗೂ
ಕ್ಲಸ್ಟರಿನ ವಿವಿಧ ಶಾಲೆಗಳ ಪ್ರಧಾನ ಗುರುಗಳು ಮತ್ತು ಮಕ್ಕಳು, ಶಾಲಾ ಸಿಬ್ಬಂದಿವರ್ಗ ಹಾಜರಿದ್ದರು. ಎನ್ ಬಿ ಪೂಜಾರ ಸ್ವಾಗತಿಸಿದರು,ಬಿ ವ್ಹಿ ಮುಳಗುಂದ ವಂದಿಸಿದರು,ಶಂಕರ್ ನಾವಿ ನಿರೂಪಿಸಿದರು.