‘ಪೌಷ್ಟಿಕ ಆಹಾರ ಪಡೆಯುವದು ಮಕ್ಕಳ ಹಕ್ಕು’
ಧಾರವಾಡ:
ವಿದ್ಯಾರ್ಥಿಗಳ ವ್ಯಾಸಂಗದ ಸಂದರ್ಭದಲ್ಲಿ ಪೂರಕ ಪೌಷ್ಟಿಕ ಆಹಾರ ಸೇವನೆ ಅತೀ ಮಹತ್ವ ಪಡೆದುಕೊಂಡಿದೆ. ಪೌಷ್ಟಿಕ ಆಹಾರ ಪಡೆಯುವದು ಮಕ್ಕಳ ಹಕ್ಕು ಎಂದು ಜಿ.ಪಂ. ಸಿಇಓ ಸ್ವರೂಪಾ ಟಿ.ಕೆ ಹೇಳಿದರು.
ಅವರು ನಗರದ ಡಾ. ಆರ್. ಎನ್. ಶೆಟ್ಟಿ ಕ್ರೀಡಾಂಗಣದ ಬಳಿ ಇರುವ ಸರಕಾರಿ ಪ್ರೌಢಶಾಲೆಯಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಪೂರಕ ಪೌಷ್ಟಿಕ ಆಹಾರ ವಿತರಣೆಯ ಜಿಲ್ಲಾ ಮಟ್ಟದ ಸಮಾರಂಭದಲ್ಲಿ ಪೂರಕ ಪೌಷ್ಟಿಕ ಆಹಾರ ವಿತರಿಸಿ
ಮಾತನಾಡುತ್ತಿದ್ದರು. ರಾಜ್ಯ ಸರಕಾರದ ವತಿಯಿಂದ 9 ಮತ್ತು 10ನೆಯ ತರಗತಿಯ ವಿದ್ಯಾರ್ಥಿಗಳಿಗೆ ಅವರು
ಮೊಟ್ಟೆ, ಶೇಂಗಾ ಚಿಕ್ಕಿ ಮತ್ತು ಬಾಳೆಹಣ್ಣು ಅವರು ವಿತರಿಸಿದರು.
ಡಿಡಿಪಿಐ ಎಸ್. ಎಸ್. ಕೆಳದಿಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣದ ಜಿಲ್ಲಾ ಯೋಜನಾಧಿಕಾರಿ ರೂಪಾ ಪುರಮಕರ
ಮಾತನಾಡಿದರು. ಶಹರ ಬಿಇಓ ಅಶೋಕಕುಮಾರ ಸಿಂದಗಿ, ಅಕ್ಷರ ದಾಸೋಹ ಯೋಜನೆಯ ಅಧಿಕಾರಿಗಳಾದ ಡಾ. ಸಂಗಮೇಶ ಬಂಗಾರಿಮಠ ಮತ್ತು ಲಲಿತಾ ಹರ್ಲಾಪುರ, ಸರಕಾರಿ ಪ್ರೌಢ ಶಾಲೆಯ
ಮುಖ್ಯಾಧ್ಯಾಪಕಿ ಶ್ರೀದೇವಿ ಲದ್ದಿಮಠ, ರಮೇಶ ತಳವಾರ, ಶಿವಾನಂದ ಮುತ್ವಾಡ, ಕಮಲಾ ಸಾಲಿಮಠ, ಅರ್ಜುನ ಲಮಾಣಿ, ಮಾಧುರಿ ಕುಲಕರ್ಣಿ, ಸುರೇಶ ಜಟ್ಟೆನವರ, ಗಾಯತ್ರಿ ಜೋಶಿ, ಎಸ್. ಸುಜಾತಾ, ಛಾಯಾ ಘೋರ್ಪಡೆ, ಪವನ ಕುಲಕರ್ಣಿ ಇದ್ದರು. ಎಂ.ಜಿ. ಹಿರೇಮಠ ನಿರೂಪಿಸಿದರು. ಬಿ.ಜಿ. ಬಸೆಟ್ಟಿ ವಂದಿಸಿದರು.