ಮಕ್ಕಳ ಮನಸ್ಸಿಗೆ ಮುದ ನೀಡಿದ ಶನಿವಾರ ಸಂಭ್ರಮ – ನೊ ಬ್ಯಾಗ ಡೇ
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ತಿಂಗಳ ಮೂರನೇ ಶನಿವಾರ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಎಸ್.ಎಸ್.ಕೆಳದಿಮಠರವರ ನಿರ್ದೇಶನದಂತೆ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬೊಮ್ಮಕ್ಕನವರ ಮಾರ್ಗದರ್ಶನದಲ್ಲಿ ಸಿ.ಆರ್.ಪಿ.ದುರಗೇಶ ಮಾದರ ಇವರ ನೇತೃತ್ವದಲ್ಲಿ ಶನಿವಾರ ಸಂಭ್ರಮ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.
ವಿದ್ಯಾರ್ಥಿನಿಯರು ಅಭಿನಯ ಗೀತೆ ಜಾನಪದ ಗೀತೆ ಹಾಸ್ಯ ಗೀತೆ ಕುಟ್ಟುವ ಪದ ಕಳ್ಳೆ ಮಳ್ಳೆ ಕಪಾಟ ಮಳ್ಳೆ ಬಾವನಾರ ಬಸಪ್ಪನಾರ ..ಕುಟ್ಟೋದು ಖುಸಿ ಬಾಳ ನೀರಿಗ್ಹೊಂಟೇನವ್ವ ನಾನು..ಲಂಬಾಣಿ ಕುಣಿತ ಮಿಮಿಕ್ರಿ ಸುಗ್ಗಿ ಹಾಡು ಮುಂತಾದ ಸೃಜನಶೀಲ ಕ್ರಿಯಾಶೀಲ ಚಟುವಟಿಕೆಗಳನ್ನು ಪ್ರದರ್ಶಿಸಿ ಹರ್ಷಪಟ್ಟರು.ಕಾರ್ಯಕ್ರಮದಲ್ಲಿ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ.ಸಿ.ಆರ.ಪಿ. ದುರಗೇಶ ಮಾದರ.ಪ್ರ.ಗು.ಲತಾ.ಗ್ರಾಮಪುರೋಹಿತ.ಶಾರದಾ ಕಂಬಳಿ.ದ್ರಾಕ್ಷಾಯಿಣಿ ಕೊರಗರ.ದೇವೇಂದ್ರ ಪತ್ತಾರ.ಸುಧಾ.ಕೊಣ್ಣೂರ.ಸುವರ್ಣ ಮಡಿವಾಳರ.ಗೀತಾ.ಕೆಂಚರಡ್ಡಿ ಮುಂತಾದವರು ಪಾಲ್ಗೊಂಡಿದ್ದರು.