ಧಾರವಾಡ..
ರಾಜ್ಯ ಸರ್ಕಾರ ಕನಿಷ್ಠ ವೇತನ ಜಾರಿಗೆ ಆದೇಶಿಸುವ ಮೂಲಕ ಗ್ರಾಮೀಣ ಗ್ರಂಥಪಾಲಕರ ಬಹುದಿನಗಳ ಬೇಡಿಕೆ ಈಡೇರಿಸಿದೆ ಎಂದು ಧಾರವಾಡ ಜಿಲ್ಲೆಯ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಫಕೀರಪ್ಪ ಬಸಪ್ಪ ಸುಂಕದ ಅವರು ಹೇಳಿದ್ದಾರೆ, ಗೌರವಧನದ ಮೂಲಕ ಹಲವು ವರ್ಷಗಳಿಂದ, ಪ್ರಾಮಾಣಿಕವಾಗಿ, ಸೇವೆ ಮಾಡಿದ್ದರ ಫಲವಾಗಿ ಸರಕಾರ ಗೌರವದನ ರದ್ದುಪಡಿಸಿ, ಕನಿಷ್ಠ ವೇತನ ಜಾರಿಗೆ ಗೊಳಿಸಿದ ಕ್ರಮ ಸ್ವಾಗತಾರ್ಹವಾಗಿದೆ, ಎಂದು ಹೇಳಿದ್ದಾರೆ ಕನಿಷ್ಠ ವೇತನ ಜಾರಿಗಾಗಿ ಸಂಘದ ಸತತ ಹೋರಾಟ ನಡೆಸಲಾಗಿತ್ತು, ಜನ ಪ್ರತಿನಿಧಿಗಳ ಮೇಲೆ ಒತ್ತಡ ಹೇರಲಾಗಿತ್ತು, ಕೊನೆಗೂ ಸಂಘದ ಬೇಡಿಕೆ ಮಣ್ಣಿಸಿ ಸರಕಾರ ಕ್ರಮ ಕೈಗೊಂಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಖಾತೆ ಸಚಿವರು ಪ್ರಿಯಾಂಕ ಖರ್ಗೆ ಹಾಗೂ ಇಲಾಖೆಯ ಮುಖ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉನ್ನತ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಲಾಗುವುದು, ಎಂದು ಎಂದು ತಿಳಿಸಿದರು.