ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸುತ್ತವೆ ಮತ್ತು ಇಂದಿನ ಯುಗದಲ್ಲಿ ಮೊಬೈಲ್ ಮತ್ತು ಟಿವಿ ಇವುಗಳಿಂದ ದೂರ ಇರುವಂತೆ ಮಾನ್ಯ ಶಾಸಕರಾದಂತ ಡಾ. ಚಂದ್ರು ಲಮಾಣಿ ಅವರು ಕಾರ್ಯಕ್ರಮವನ್ನು ಡ್ರಮ್ ಸೆಟ್ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀ ಜಿ ಎಮ್ ಮುಂದಿನಮನಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿರಹಟ್ಟಿ ಇವರು ಮಾತನಾಡಿ, ಮಕ್ಕಳ ಪ್ರತಿಭೆ ಯುವ ಪೀಳಿಗೆಗೆ ಮಾದರಿಯಾಗಿರಬೇಕೆಂದು ತಿಳಿಸಿದರು.
ಶ್ರೀ ಡಿ ಎಚ್ ಪಾಟೀಲ ಅಧ್ಯಕ್ಷರು ಕ. ರಾ ಸ. ನೌ ಸಂಘ ಲಕ್ಷ್ಮೇಶ್ವರ ಇವರು ಮಾತನಾಡಿ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿ ತಾಲ್ಲೂಕು ಜಿಲ್ಲಾ ರಾಜ್ಯ ಮಟ್ಟದಲ್ಲಿ ವಿಜೇತರಾಗುವಂತೆ ಹಾರೈಸಿದರು.
ಎಲ್ಲಾ ನಿರ್ಣಾಯಕರು ಪ್ರಾಮಾಣಿಕವಾಗಿ ಆಯ್ಕೆ ಮಾಡಿ ಮುಂದಿನ ಹಂತಕ್ಕೆ ಮಕ್ಕಳನ್ನು ಆಯ್ಕೆ ಮಾಡಿ ಎಂದು ಶ್ರೀ ಬಿ ಎಸ್ ಹರಲಾಪುರ್ ಅಧ್ಯಕ್ಷರು ಕ. ರಾ ಪ್ರಾ ಶಾ ಶಿ ಸಂಘ ಲಕ್ಷ್ಮೇಶ್ವರ ಮಾತನಾಡಿದರು. ಶ್ರೀ ಚಂದ್ರು ನೇಕಾರ ಕಾರ್ಯದರ್ಶಿ ಮಾತನಾಡಿದರು.
ಸಮೂಹ ಸಂಪನ್ಮೂಲ ಕೇಂದ್ರ ಲಕ್ಷ್ಮೇಶ್ವರ ದಕ್ಷಿಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2023- 24 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಇಂದುಮತಿ ಜಕ್ಕನಗೌಡ್ರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ಜಿಎಂ ಮುಂದಿನಮನಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿರಹಟ್ಟಿ, ಶ್ರೀಮತಿ ಜಯಲಕ್ಷ್ಮಿ ಗಡ್ಡದ್ದೇವರಮಠ ಕಾರ್ಯದರ್ಶಿ ತಾಪಾಮಬ ಲಕ್ಷ್ಮೇಶ್ವರ, ಶ್ರೀಮತಿ ಜಯಲಕ್ಷ್ಮಿ ಮಹಾಂತಶೆಟ್ಟರ ಕೋಶಾಧ್ಯಕ್ಷರು ಶ್ರೀ ತಾ ಪಾ ಮ ಬಳಗ
ಶ್ರೀ ಡಿ ಹೆಚ್ ಪಾಟೀಲ್ ಅಧ್ಯಕ್ಷರು ಸರಕಾರಿ ನೌಕರರ ಸಂಘ ಲಕ್ಷ್ಮೆಶ್ವರ್ ಶ್ರೀ ಬಸವರಾಜ ಹರಲಾಪೂರ ಅಧ್ಯಕ್ಷರು ಶಿಕ್ಷಕರ ಸಂಘದ ಅಧ್ಯಕ್ಷರು ಲಕ್ಷ್ಮೇಶ್ವರ,
ಶ್ರೀ ಈಶ್ವರ ಮೇಡ್ಲೇರಿ ಕಸಾಪ ಅಧ್ಯಕ್ಷರು ಲಕ್ಷ್ಮೇಶ್ವರ
ಶ್ರೀ ಬಿ ಎಂ ಕುಂಬಾರ್ ಪ್ರಧಾನ ಗುರುಗಳು
ಸಿಆರ್‌ಪಿಗಳು ಶ್ರೀ ಸತೀಶ್ ಬೋಮಲೆ . ಶ್ರೀ ಉಮೇಶ್ ನೇಕಾರ,
ಶ್ರೀ ಎನ್ ಎ ಮುಲ್ಲಾ ನಿರ್ವಹಣೆ ಮಾಡಿದರು.
ಶ್ರೀ ವಾಸು ದೀಪಾಲಿ, ಶ್ರೀ
ಎಲ್ಎಫ್ ಮಠದ
ಶ್ರೀ ಡಿ ಎನ್ ದೊಡ್ಡಮನಿ ಶ್ರೀ ಹುಲಬಜಾರ್ ಶ್ರೀ ಎಂಬಿ ಹೊಸಮನಿ ಅಧ್ಯಕ್ಷರು ಶಿಕ್ಷಣಾಧಿಕಾರಿಗಳ ಸಂಘ, ಎನ್ ಎನ್ ಶಿಗ್ಲಿ, ಶ್ರೀ ಎನ್ ಎಸ್ ಬಂಕಾಪುರ, ಕೆ ಎಸ್ ಹಿರೇಮಠ, ಇ ಡಿ ಮದನರಾಜ, ಆಯ್ ಎ ಬಳಿಗಾರ, ಜೆ ವಿ ಅರಳಿಕಟ್ಟಿ. ಬಿ ಎಸ್ ನಾಗನಗೌಡರ, ಪಿ ಎಚ್ ಕೊಂಡಾಬಿಂಗಿ, ಎಸ್ ಕೆ ಹೂಗಾರ, ಶ್ರೀಮತಿ ಸ್ವಾತಿ ಪೈ ಹಾಗೂ ಹಲವಾರು ಶಿಕ್ಷಕರು ಮಕ್ಕಳುಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶ್ರೀಮತಿ ಕಮಲ ಹಿರೇಮಠ್ ವಂದನಾರ್ಪಣೆಯನ್ನು ಶ್ರೀ ಐ ಎ ಬಳೆಗಾರ, ಎಮ್ ಎನ್ ಭರಮಗೌಡ್ರ ಶ್ರೀಮತಿ ಜ್ಯೋತಿ ಅರಳಿಕಟ್ಟಿ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ದಕ್ಷಿಣ ಕ್ಲಸ್ಟರ್ ನ ಎಲ್ಲಾ ಶಿಕ್ಷಕರು ಮಕ್ಕಳು ಪಾಲ್ಗೊಂಡಿದ್ದರು.