ನಿರಾಳ ಬದುಕು.
ಮಾನವ ಜನ್ಮ ಸರ್ವಶ್ರೇಷ್ಠ. ಎಲ್ಲ ಜೀವಿಗಳಿಗಿಂತಲೂ ವಿಭಿನ್ನ ಆಕಾರ ವಿಭಿನ್ನ ಬಣ್ಣ, ಸುಂದರತೆ, ಬಣ್ಣ ಬಣ್ಣದ ಬಟ್ಟೆ ಧರಿಸಬಹುದು. ಸಾಕಷ್ಟು ಬೆಲೆಯುಳ್ಳ ಬಂಗಾರ ಧರಿಸಬಹುದು. ವಿಧ, ವಿಧದ ಮೃಷ್ಟಾನ್ನ ಭೋಜನ ಸವಿಯಬಹುದು. ಕಣ್ಣು, ಮನಸ್ಸು ತುಂಬೋ ಹಾಗೆ ಎಲ್ಲ ವಿಧದ ಸಭೆ,ಸಮಾರಂಭಗಳನ್ನು ಮಾಡಿ ಖುಷಿ ಪಡಿಸಿ ನೀನು ಖುಷಿ ಪಡಬಹುದು. ಜಾತ್ರೆ, ದಿಬ್ಬಣ ನೋಡಬಹುದು. ಎಲ್ಲಿ ಬೇಕೆಂದಲ್ಲಿ ಬೆಲೆ ಬಾಳುವ ಖಾರಲ್ಲಿ ಸುತ್ತಿ ಮನ ತನಿಸಿಕೊಳ್ಳಬಹುದು. ಇದೆಲ್ಲ ಓಕೆ. ಇದು ಮಾನವನಿಗೆ ಮಾತ್ರ ಸಾದ್ಯ ಅಲ್ವಾ. ಇಷ್ಟೆಲ್ಲ ಅಂದ ಚೆಂದದ ಬದುಕನ್ನು ನ್ಯಾಯ ಮಾರ್ಗದಲ್ಲಿ ಅನುಭವಿಸಿದರೆ ದೇವರಿಗೂ ಪ್ರೀತಿ. ನೀನು ನೆಮ್ಮದಿಯಿಂದ ಇರಲು ಸಾಧ್ಯ. ಬದುಕಲ್ಲಿ ತಂದೆ, ತಾಯಿ, ಅಕ್ಕ ತಂಗಿ ಹೀಗೆ ರಕ್ತ ಸಂಬಂಧಿಗಳನ್ನು ಪ್ರೀತಿಸಿ ಅವರಿಗೆ ಯಾವುದೇ ಕಷ್ಟ ಬರದಂತೆ ನೋಡಿಕೊ. ನಿನ್ನ ಸುತ್ತ ಸಾವಿರ ಕಣ್ಣಿರೋ ಸಮಾಜದ ಜನರನ್ನು ಚೆನ್ನಾಗಿ ಅರಿತುಕೊಂಡು ಅವರೊಂದಿಗೆ ಉತ್ತಮ ಸಂಭಂದ ನಿಭಾಯಿಸಿಕೊಂಡು ಮುಂದೆ ಸಾಗು.
ಪ್ರೀತಿ, ಪ್ರೇಮ ಅಂತ ಬಂದಾಗ ನಿನ್ನ, ಕುಟುಂಬಕ್ಕೂ ಸಮಾಜಕ್ಕೂ ಸಹ್ಯವೇನಿಸುವ ತರ ಇರಲಿ. ಪ್ರೀತಿಸು, ಪ್ರೆಮಿಸು, ಆದರೆ ನಮ್ಮ ಮನೆಯ ಸಂಪ್ರದಾಯ, ಭಾರತೀಯ ಸಂಸ್ಕತಿಯ ಕಟ್ಟುಪಾಡುಗಳಿಗೆ ದಕ್ಕೆ ಬರದ ಹಾಗೆ ಎಲ್ಲರೂ ಒಪ್ಪಿ ಸಂತೋಷದಿಂದ ಮನಸಾರೆ ಹರಸಿ ನಿನ್ನ ಮದುವೆ ಊಟ ಉಂಡು ಹೋದರೆ ನಿನ್ನ ದಾಂಪತ್ಯ ಜೀವನ ಅವರ ಹರಕೆಯ ರೂಪದಲ್ಲಿ ಚೆನ್ನಾಗಿ ನಡೆಯಬಹುದು. ಪ್ರೀತಿ ಮಾಡಿದವಳನ್ನೆ ಮದುವೆಯಾಗಿ ಅವಳೊಂದಿಗೆ ನಿನ್ನ ಇಡೀ ಕುಟುಂಬವನ್ನು ಚೆನ್ನಾಗಿ ನಿಭಾಯಿಸಿಕೊಂಡು ಸಾಗು.
ನೀ ನಡೆಸುವ ಬದುಕು ನಿಸ್ವಾರ್ಥ, ಪ್ರಾಮಾಣಿಕತೆ ಶೃದ್ಧೆಯಿಂದ ಬಾಳು. ನಿನ್ನ ಬದುಕು ಇನ್ನೊಬ್ಬರಿಗೆ ಮಾದರಿಯಾಗಲಿ. ಒಳ್ಳೆಯ ಕನಸು ಕಾಣುತ್ತಾ ನ್ಯಾಯ ಮಾರ್ಗದಲ್ಲಿ ನನಸು ಮಾಡುತ್ತಾ, ನೀನು ನಗುತ್ತಾ ಎಲ್ಲರನ್ನೂ ನಗಿಸುತ್ತಾ ಇನ್ನೊಬ್ಬರಿಗೆ ಬೇಶರವಾಗದಂತೆ , ಒಳ್ಳೆಯದನ್ನೇ ವಿಚಾರಿಸುತ್ತಾ, ಉತ್ತಮ ಗೆಳೆಯರ, ಹಿರಿಯರ ಸಲಹೆ ಸೂಚನಗಳಿಗೆ ಬದ್ದವಾಗಿ ನಡೆ. ಅಡ್ಡ ದಾರಿ ಹಿಡಿಸುವ, ಸಂಕಟ ಪಡುವವರ ಸುಳ್ಳು ಆರೋಪ ಮಾಡುವವರ ಕಡೆ ನಿರ್ಲಕ್ಷ್ಯ ತೋರಿಸು. ಅನುಕೂಲ ಸಿಂಧು ಬೇಕಾದಾಗ ನಿನ್ನ ಉಪಯೋಗ ಪಡೆಯುವ ದುಷ್ಟರ ಸ್ವಾರ್ಥಿಗಳ ಕಡೆ ಎಚ್ಚರವಿರಲಿ. ತಂದೆ ತಾಯಿ ಕುಟುಂಬಕ್ಕೂ ಸಮಾಜಕ್ಕೂ ಆರೋಗ್ಯಕರ ರೀತಿಯಲ್ಲಿ ವ್ಯವಹರಿಸಿ ಜೀವನ ಪಾವನ ಮಾಡಿಕೋ ಮನುಜ. ಇದುವೆ ಮುಕ್ತಿಯ ಮಾರ್ಗ. ಇದುವೇ ನಿರಾಳ ಬದುಕು.
ಶ್ರೀಮತಿ ಉಮಾದೇವಿ. ಯು. ತೋಟಗಿ. ಸ. ಶಿ.ಸ. ಕ. ಹಿ. ಪ್ರಾ. ಶಾ. ರಾಮಾಪುರ. ತಾ. ಸವದತ್ತಿ. ಜಿ. ಬೆಳಗಾವಿ.