ಆರೋಗ್ಯಕರ ಜೀವನಕ್ಕೆ ಮೋದಿಕೇರ ವಸ್ತುಗಳು ಉಪಯುಕ್ತ..
ಸವದತ್ತಿ: ಪಟ್ಟಣದ ಮೋದಿಕೇರ ಮಾರಾಟ ಮಳಿಗೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಶಿಕ್ಷಕರಾದ ವಾಯ್.ಬಿ. ಕಡಕೋಳ ಮಾತನಾಡುತ್ತ
“ಮೋದಿಕೇರನ ಪ್ರಥಮ ಹಂತ ಡೈರೆಕ್ಟರ ಹಂತ ತಲುಪಿರುವ ತಮ್ಮ ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು. ಮೋದಿಕೇರ ಆರೋಗ್ಯ ಕರ ಮಾತ್ರೆ ಹಾಗೂ ಔಷಧ ಕಾರಣ.ನನ್ನ ತಾಯಿಯ ಪರವಾಗಿ ನನಗೆ ತಾವು ಗೌರವಿಸಿರುವಿರಿ. ನಿಮ್ಮ ಈ ಕಾರ್ಯ ಕ್ಕೆ ಧನ್ಯವಾದಗಳು ” ಎಂದು ಮೋದಿಕೇರ ಡಿಪಿಯವರು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ತಿಳಿಸಿದರು.
“ಮೋದಿಕೇರ ವಸ್ತುಗಳು ಜನರ ಜೀವನದ ಆರೋಗ್ಯಕ್ಕೆ ಅತೀ ಅವಶ್ಯಕವಿರುವ ವಸ್ತುಗಳಾಗಿವೆ. ಮನೆ ಬಳಕೆ, ಆರೋಗ್ಯಕ್ಕೆ ಹಾಗೂ ಕೃಷಿ ಸಾವಯವ ಗೊಬ್ಬರಗಳು ದೊರೆಯುತ್ತವೆ. ಮನೆಬಳಕೆ ಹಾಗೂ ಆರೋಗ್ಯದ ವಸ್ತುಗಳು ಮನುಷ್ಯನ ದೇಹದ ಸಾಕಷ್ಟು ರೋಗಗಳಿಗೆ ಔಷಧಿಗಳಾಗಿ ಬಳಕೆಯಾದರೆ, ಕೃಷಿ ಸಾವಯವ ಗೊಬ್ಬರಗಳು ಭೂಮಿಯ ಆರೋಗ್ಯದ ಜೊತೆಗೆ ಇಳುವರಿ ಹೆಚ್ಚಿಸಿ, ಭೂಮಿಯ ಆರೋಗ್ಯವನ್ನು ಕಾಪಾಡುತ್ತವೆ.ನನ್ನ ತಾಯಿ ಈ ಸಂಸ್ಥೆಯ ಸದಸ್ಯರಾದ ನಂತರ ನಾವು ಗೃಹಬಳಕೆಯ ವಸ್ತುಗಳನ್ನು ಹಾಗೂ ಔಷಧೀಯ ಉತ್ಪನ್ನಗಳ ಬಳಕೆ ಮಾಡುತ್ತಿದ್ದು. ಇವುಗಳ ಗುಣಮಟ್ಟದ ಬಗ್ಗೆ ಸಂತಸ ಹೊಂದಿದ್ದೇವೆ “ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಹೂಲಿ ಕೂಡ ಮೋದಿಕೇರನ ಪ್ರತಿಷ್ಠಿತ ಹಂತ ಸಿನಿಯರ್ ಡೈರೆಕ್ಟರ ಹಂತ ತಲುಪಿದ್ದಕ್ಕಾಗಿ ಅವರಿಗೂ ಕೂಡ ಸನ್ಮಾನಿಸಲಾಯಿತು. ಸನ್ಮಾನ ಪರ ಮಾತನಾಡುತ್ತ ಹೂಲಿಯವರು “ಮೋದಿಕೇರ ವಸ್ತುಗಳನ್ನ ನಿಯಮಿತವಾಗಿ ಬಳಕೆ ಮಾಡುವದರಿಂದ ನಮ್ಮ ದೇಹದಲ್ಲಿಯ ಸಾಕಷ್ಟು ರೋಗಗಳನ್ನು ನಾವೂ ಹೋಗಲಾಡಿಸಿಕೊಳ್ಳಲು ಸಾಧ್ಯ. ಪ್ರತಿಯೊಂದು ವಸ್ತುವು ಕೂಡ ಸಂಜೀವಿನಿಯಾಗಿದೆ, ಆದರೆ ಅದರ ಬಳಕೆಯ ವಿಧಾನ ನಾವೂ ತಿಳಿಯಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿ ನುಡಿದ ಮುಖ್ಯೋಪಾಧ್ಯಾಯರಾದ ಬಸವರಾಜ ಜೋಗಿಹಳ್ಳಿ “ಮೋದಿಕೇರ ಕಂಪನಿಯು 27 ವರ್ಷದಿಂದ ನಿರಂತರವಾಗಿ ಜನರಿಗೆ ಆರೋಗ್ಯಕರ ವಸ್ತುಗಳನ್ನ ನೀಡುವದಲ್ಲದೇ, ಅದಕ್ಕೆ ಪೂರಕವಾಗಿ ತರಭೇತಿ ಶಿಬಿರಗಳನ್ನು ನಡೆಸುತ್ತದೆ. ಇದರ ಸದುಪಯೋಗವನ್ನ ಎಲ್ಲರೂ ಪಡೆಯಬೇಕು” ಎಂದು ಕರೆಯನ್ನು ನೀಡಿದರು.
ಈರಣ್ಣಾ ಕರಲಿಂಗಣ್ಣವರ ಮಾತನಾಡಿ “ಮೋದಿಕೇರ ಒಂದು ಉತ್ತಮ ಆರೋಗ್ಯಕ್ಕೆ ಕಾಯಕಲ್ಪ ನೀಡುವದಲ್ಲದೆ, ಸಾಕಷ್ಟು ಜನರಿಗೆ ಉದ್ಯೋಗ ನೀಡಿದ ಹಿರಿಮೆ ಹೊಂದಿದೆ. ಸಾಕಷ್ಟು ಸಾಧಕರನ್ನು ಹುಟ್ಟು ಹಾಕಿದ ಸಂಸ್ಥೆಯಾಗಿದೆ. ಇಲ್ಲಿ ಆರೋಗ್ಯದ ಜೊತೆಗೆ ಆರ್ಥಿಕ ಸ್ವಾತಂತ್ರ್ಯ ಹೊಂದಲು ಸಾಧ್ಯ” ಎಂದು ತಿಳಿಸಿದರು.
ಮೋದಿಕೇರನ ಸವದತ್ತಿ ಮಾರಾಟ ಮಳಿಗೆಯ ಮಾಲಕರಾದ ಅನುಷಾ ಕಾಕಡೆ “ತರಭೇತಿ ಶಿಬಿರಗಳ ಪ್ರಯೋಜನಗಳನ್ನು ತಿಳಿಸಿ. ಪ್ರತಿಯೊಬ್ಬರು ತರಬೇತಿ ಯಲ್ಲಿ ಪಾಲ್ಗೊಳ್ಳಲು” ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೋದಿಕೇರ ಸದಸ್ಯರಾದ ಪುರಸಭೆಯ ಸದಸ್ಯರಾದ ಅರ್ಜುನ ಅಮೋಜಿ, ಅಭಿಯಂತರರಾದ ಎಫ್.ಎ. ಕರೀಕಟ್ಟಿ, ನಂದಿನಿ ಕರಲಿಂಗಣ್ಣವರ, ಸುಜಾತ ಮೆಡಮ್, ವಿರುಪಾಕ್ಷಿ ಕುಂಬಾರ, ಮುಂತಾದವರು ಉಪಸ್ಥಿತರಿದ್ದರು.