ಸ್ವಾತಂತ್ರ್ಯದ ಸಡಗರ.
ಭಾರತದೆಲ್ಲೆಡೆ ತುಂಬಿದೆ ಸ್ವಾತಂತ್ರ್ಯದ ಸಡಗರ.
ಎಲ್ಲರ ಮನಸ್ಸಿನಲ್ಲಿ ತುಂಬಿದೆ ಸಂಭ್ರಮದ ಸಾಗರ.
ಹಾರಾಡುವ ಹಕ್ಕಿಗಳ ಕಲರವದ ನಿನಾದ
ಎಲ್ಲರ ಬದುಕಲ್ಲಿ ಸರ್ವ ತಂತ್ರ ಸ್ವಾತಂತ್ರದ ಆನಂದ.
ದೇಶದೆಲ್ಲೆಡೆ ಮೊಳಗಿದೆ ಸಂಸ್ಕಾರದ ಕಹಳೆ.
ತುಂಬಿ ಬಂದಿದೆ ಸಕಲರಲ್ಲಿ ಎಲ್ಲರೊಂದೆ ಎಂಬ ಭ್ರಾಂತಿ
ಸ್ಫೋಟಗೊಂಡಿದೆ ಮೇರಾ ಭಾರತ್ ಮಹಾನ್ ಎಂಬ ಕ್ರಾಂತಿ
ಸ್ವತಂತ್ರ ಭಾರತದೆಲ್ಲೆಡೆ ಕಾಣಲಿ ಸಂಸ್ಕೃತಿ
ಮಾತೆ ಆಗುವಳು ಪಾವನಾಕೃತಿ
ಸದಾ ನಗುತಿರಲಿ ಎಲ್ಲರಲ್ಲೂ ಸಂಸ್ಕಾರದ ಜಾಗೃತಿ.
ತೋರಿಸಬೇಡಿ ಪುಣ್ಯ ಮಾತೆಯ ಮೇಲೆ ವಿಕೃತಿ.
ಉಮಾದೇವಿ. ಯು ತೋಟಗಿ .
ಸ. ಶಿ. ಸ. ಕ. ಹಿ. ಪ್ರಾ. ಶಾ. ರಾಮಾಪುರ. ತಾ,: ಸವದತ್ತಿ. ಜಿ: ಬೆಳಗಾವಿ.