ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಿಕೊಪ್ಪ ಇಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕ ಶ್ರೀ ಎಮ್ ಎಸ್ ಹಿರೇಮಠ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸದಾ ಸ್ಮರಿಸಿ ಗೌರವಿಸೋಣ.ಅವರ ತ್ಯಾಗದ ಸಂಕೇತವಾದ ಈ ಸ್ವಾತಂತ್ರ್ಯ ನಾವೆಲ್ಲ ಗೌರವದಿಂದ ಕಾಪಾಡಿಕೊಂಡು ಹೋಗಬೇಕು.ದೇಶಪ್ರೇಮ ನಮ್ಮಲ್ಲಿ ಬೆಳೆಯಬೇಕು.ಎಲ್ಲರೂ ಸ್ವಚ್ಛತೆಯ ಕಡೆ ಗಮನ ಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶ್ರೀ ರಾಮಣ್ಣ ಬಾಣದ ಶ್ರೀ ಕಲ್ಮೇಶ್ವರ ದೊಡ್ಡಮನಿ ಶ್ರೀ ಬಸವರಾಜ ದೊಡ್ಮನಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ಕಾಶವ್ವ ರಮೇಶ ದೊಡ್ಡಮನಿ ಲಲಿತಾ ದೊಡ್ಡಮನಿ ರತ್ನಾ ದೊಡ್ಮನಿ ಯಲ್ಲಪ್ಪ ಬಾಣದ ಗಣೇಶ ಲಮಾಣಿ ಎಸ್ ಎಸ್ ಲಮಾಣಿ ಶಿಕ್ಷಕರಾದ ಎನ್ ಎಫ್ ಸಜ್ಜನರ ನಾಗರಾಜ ವಾಲಿಕಾರ ಬಸವರಾಜ ಬನ್ನಿಮಟ್ಟಿ ಮುಂತಾದವರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು. ಇದೆ ಸಂದರ್ಭದಲ್ಲಿ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ಕಾಶವ್ವ ರಮೇಶ ದೊಡ್ಮನಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.