ಯುವ ಅಧಿಕಾರಿಗಳ ‘ಮೇರಾ ಭಾರತ ಮಹಾನ್ ಹಾಡಿಗೆ ಜನರಿಂದ ಅಪಾರ ಮೆಚ್ಚುಗೆ
ಹುಬ್ಬಳ್ಳಿ : 77ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಧಾರವಾಡ ಮೂಲದ ಯುವ ಅಧಿಕಾರಿಗಳ ತಂಡವು ನಿರ್ಮಿಸಿದ ‘ಮೇರಾ ಭಾರತ್ ಮಹಾನ್’ ಎಂಬ ದೇಶಭಕ್ತಿಯ ಹಿಂದಿ ಹಾಡು ಬಿಡುಗಡೆಗೊಂಡು ಇಪ್ಪತ್ತೇ ತಾಸಿನಲ್ಲಿ ೧೧,೦೦೦ ಕ್ಕೂ ಹೆಚ್ಚು ವೀಕ್ಷಕರನ್ನು ಹೊಂದುತ್ತಿದ್ದು. ಸಾರ್ವಜನಿಕರು ಕಮೆಂಟ್ ಮತ್ತು ಲೈಕ್ಸ್ ಗಳ ಮೂಲಕ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಹಾಡನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ರವಿವಾರ ನಗರದ ಸರ್ಕ್ಯೂಟ್ ಹೌಸ್ನಲ್ಲಿ ಯೂಟ್ಯೂಬ್ ನ @DRDBeats ಚಾನಲ್ ನಲ್ಲಿ ಬಿಡುಗಡೆ ಮಾಡಿ, ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಹಶೀಲ್ದಾರ್ ಡಾ. ಮಹದೇವ ಸನಮುರಿ, ಧಾರವಾಡದ ಸರ್ಕಾರಿ ಇಎಸ್ಐ ಆಸ್ಪತ್ರೆಯ ವೈದ್ಯ ಡಾ. ಜಗದೀಶ ಗೋಲಭಾವಿ, ಧಾರವಾಡದ ಡಯಟ್ನ ಶಂಕರ್ ಸೋಮರಡ್ಡಿ, ಹುಬ್ಬಳ್ಳಿಯ ಎನ್ಎಂಆರ್ ಸ್ಕ್ಯಾನ್ ರೇಡಿಯಾಲಜಿಸ್ಟ್ ಡಾ.ವಿಷ್ಣು ಎಸ್ ಮತ್ತು ಯುಪಿಎಸ್ಸಿ ಪರೀಕ್ಷೆಯ ಮಾರ್ಗದರ್ಶಕ ನರೇಂದ್ರ ಭಾಗವಹಿಸಿದ್ದಾರೆ.
ಈ ಹಾಡು ಸುಮಾರು ೪ ನಿಮಿಷ ೦೫ ಸೆಕೆಂಡ್ ನಿಂದ ಕೂಡಿರುತ್ತದೆ. ಹಾಡಿನ ರಚನೆ, ಹಾಡುವುದು, ಶೂಟಿಂಗ್ ಮತ್ತು ವಿಡಿಯೋಗ್ರಾಪಿ ಎಲ್ಲವನ್ನು ಈ ತಂಡದ ಸದಸ್ಯರೇ ಮಾಡಿದ್ದಾರೆ. ಧಾರವಾಡ ಮೂಲದ ಚನ್ನು ಪಾವಟೆ ಹಾಡನ್ನು ಹಾಡಿ, ಸಂಗೀತ ನೀಡಿದ್ದಾರೆ. ಆದರೆ ನಮ್ಮ ತಂಡದ ಸದಸ್ಯರು ಕೋರಸ್ ಸಂಯೋಜಿಸಿದ್ದಾರೆ. ಚಿತ್ರೀಕರಣವನ್ನು ದಾಂಡೇಲಿ ಮತ್ತು ಮುಂಡಗೋಡ ಮತ್ತು ಧಾರವಾಡದಲ್ಲಿ ಮಾಡಲಾಗಿದೆ. ಇದನ್ನು ವೀಕ್ಷಿಸಲು ಬಯಸುವವರು https://youtu.be/CEg9lBQVHyY ಈ ಲಿಂಕ್ ಮೂಲಕ ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದು.