310ನೇ ಮನವಿಗೆ ನ್ಯಾಯ ಸಿಗುತ್ತಾ? ಮಾನ್ಯ ಸಚಿವ ಸಂತೋಷ ಲಾಡ ಅವರ ಬಳಿ ನ್ಯಾಯ ಕೊಡಿಸುವಂತೆ ಮನವಿ ಸಲ್ಲಿಕೆ..
ಹುಬ್ಬಳ್ಳಿ:
ಇಂದು ಮಾನ್ಯ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಂತೋಷ ಲಾಡ ರವರಿಗೆ ಆಶ್ರಯ ಮನೆಗಳ ನೋಂದಣಿ , ಶಾಸಕ ಬೆಲ್ಲದ ರವರಿಂದ ಬಡವರ ಮೇಲೆ ನಡೆದ ದಬ್ಬಾಳಿಕೆ ಮತ್ತು ವಿಮಾನ ನಿಲ್ದಾಣದ ಅಭಿವ್ರುಧ್ಧಿಗಾಗಿ ತಮ್ಮ ಆಶ್ರಯ ಮನೆಗಳನ್ನು ಕಳೆದುಕೊಂಡಿರುವ ಮತ್ತು ಇತರ ಸಮಸ್ಯಗಳ ಬೆಡಿಕೆಗಳ ಮನವಿಯನ್ನು ನಿಡಲು ನಗರದ ಇಂದಿರಾ ಗಾಜಿನ ಮನೆ ಆವರಣದಲ್ಲಿ ಬೆಳಿಗ್ಗೆ ೧೧-೦೦ ಗಂಟೆಯಿಂದ ಮದ್ಯಾಹ್ನ ೦೧-೩೦ ವರೆಗೆ ಕಾದು ಕುಳಿತ ವರಿಗೆ ಸ್ಥಳಕ್ಕಾಗಮಿಸಿ ಸಮಸ್ಯ ಅಲಿಸಿ ಮನವಿ ಪಡೆದ ಸಚಿವರು .ಮನೆ ಕಳೆದುಕೊಂಡವರಿಗೆ ಸಮಾಧಾನ ಪಡಿಸಿ ವಿಷಯ ಸಂಭಂಧ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯ ಪರಿಹರಿಸಿ ಕೊಡುವುದಾಗಿ ತಿಳಿಸಿ ಸಮಾಧಾನ ಪಡಿಸಿದರು.
ಪ್ರೇಮನಾಥ ಚಿಕ್ಕ ತುಂಬಳ ರವರ ನೇತೃತ್ವದಲ್ಲಿ ಮನವಿ ನಿಡಲಾಯಿತು ಈ ಸಂಧರ್ಭದಲ್ಲಿ ಪಾಲಿಕೆ ಸಧಸಯ ಶಂಕರ ಮಾದರ, ಶ್ರೀ ವೆಂಕಟೇಶ ದೇಸಾಯಿ ,ಸುಭಾಷ್ ಮೆಹರವಾಡೆ, ಬಸವರಾಜ್ ತೋಪಲಗಟ್ಟಿ ,ಚೆನ್ನಮ್ಮ ಪಡೆಸುರ , ಗಿರಿಜಮ್ಮ ಕ್ಯಾಲಗೊಂಡ , ಕಮಲಮ್ಮ ಹಿತ್ತಲಮನಿ, ಲಲಿತ ಪವಾರ , ಮತ್ತು ನೂರಾರು ಆಶ್ರಯ ಮನೆಗಳ ಫಲಾನುಭವಿಗಳು ಉಪಸ್ಥಿತರಿದ್ದರು.