ಇದೆಂಥಾ ಪರಿಸ್ಥಿತಿ ಬಂತು ನೋಡಿ….ಅಂಗನವಾಡಿ ಕಡ್ಡಡಕ್ಕೆ ಬಾಡಿಗೆ ಕಟ್ಟಲು ಚಿನ್ನವನ್ನು ಅಡವಿಟ್ಟ ಕಾರ್ಯಕರ್ತೆ..
ಬಳ್ಳಾರಿ:ಅಂಗನವಾಡಿ ಕಟ್ಟಡಕ್ಕೆ ಸರ್ಕಾರ ಬಾಡಿಗೆ ಕಟ್ಟದೆ ಇದ್ದದ್ದರಿಂದ ಅಂಗನವಾಡಿ ಕಾರ್ಯಕರ್ತೆ ತನ್ನ ಒಡವೆ ಮಾಡಿ ಬಾಡಿಗೆ ಕಟ್ಟ ಘಟನೆ ನಡೆದಿದೆ.ಇದು ನಡೆದದ್ದು ಬಳ್ಳಾರಿಯ ಮರಿಸ್ವಾಮಿ ಮಠದ ಬಳಿಯಿರುವ ಅಂಗನವಾಡಿಯಲ್ಲಿ. ಖಾಸಗಿ ಕಟ್ಟಡ ಮಾಲೀಕರು ಸರ್ಕಾರ ಹಣ ನೀಡದಿದ್ದರಿಂದ ಖಾಲಿ ಮಾಡುವಂತೆ ಒತ್ತಾಯಿಸಿದ್ದರು.
ಬಳ್ಳಾರಿಯ ಸುಮಾರು 100 ಕ್ಕೂ ಹೆಚ್ಚು ಅಂಗನವಾಡಿಗಳು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿವೆ.ಸರ್ಕಾರ ಕಳೆದ 10 ತಿಂಗಳಿನಿಂದ ಬಾಡಿಗೆ ಕಟ್ಟಿಲ್ಲ.ಹಾಗಾಗಿ ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ತನ್ನಲ್ಲಿದ್ದ 200 ಗ್ರಾಂ ಚಿನ್ನ ಅಡ ಇಟ್ಟು ಬಾಡಿಗೆ ಕಟ್ಟಿದ್ದಾರೆ. ಕಳೆದ ಸಲವೂ ಇವರು ಎರಡು ರೂಪಾಯಿ ಬಡ್ಡಿಯಂತೆ ಸಾಲ ತಂದು ಬಾಡಿಗೆ ಕಟ್ಟಿದ್ದರು.