ಕೇಂದ್ರ ಸರಕಾರ ಮಹಿಳಾ ಮತ್ತು ಒಬ್ಬಂಟಿ ಪುರುಷ ಸರ್ಕಾರಿ ನೌಕರರು 730 ದಿನಗಳ ಮಕ್ಕಳ ಆರೈಕೆ ರಜೆಗೆ ಅರ್ಹರು ಎಂದು ಬುಧವಾರ ಸಂಸತ್ತಿನಲ್ಲಿ ಹೇಳಿದೆ.
ಲೋಕಸಭೆಗೆ ಲಿಖಿತ ಉತ್ತರದಲ್ಲಿ ಕೇಂದ್ರ ಸಿವಿಲ್ ಸೇವೆಗಳ (ರಜೆ) ನಿಯಮಗಳು, 1972 ರ ನಿಯಮ 43-ಸಿ ಅಡಿಯಲ್ಲಿ ನೌಕರರು ಸಂಪೂರ್ಣ ಸೇವೆಯಲ್ಲಿ ಗರಿಷ್ಠ 730 ದಿನಗಳ ಅವಧಿಗೆ ಮಕ್ಕಳ ಆರೈಕೆ ರಜೆಗೆ ಅರ್ಹರಾಗಿದ್ದಾರೆ.
18 ವರ್ಷದವರೆಗೆ ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಈ ನಿಯಮ ಅನ್ವಯಿಸುತ್ತದೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.ಅದೇ ರೀತಿ ಈ ವಿಚಾರದಲ್ಲಿ ವಿಕಲಚೇತನ ಮಕ್ಕಳ ವಿಷಯದಲ್ಲಿ ಸರ್ಕಾರವು ಯಾವುದೇ ವಯಸ್ಸಿನ ಮಿತಿಯನ್ನು ನಿಗದಿಪಡಿಸಿಲ್ಲ. ಇಲ್ಲಿಯವರೆಗೆ ಪುರುಷರು ಜನಿಸಿದ ಅಥವಾ ದತ್ತು ಪಡೆದ ಮಗುವಿನ ಆರು ತಿಂಗಳೊಳಗೆ 15 ದಿನಗಳ ರಜೆಗೆ ಅರ್ಹರಾಗಿರುತ್ತಾರೆ. 2022ರಲ್ಲಿ ಮಹಿಳಾ ಸಮಿತಿಯು ತಾಯಂದಿರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಪಿತೃತ್ವ ರಜೆಯನ್ನು ವಿಸ್ತರಿಸಲು ಪ್ರಸ್ತಾಪಿಸಿತ್ತು.