ಮನೋ ವೈಜ್ಞಾನಿಕ ಮನಸ್ಥಿತಿಯ ಸಹೃದಯ ವ್ಯಕ್ತಿಗಳು ಮೋಹನ್ ದಂಡಿನ
ಮಲ್ಲಿಕಾರ್ಜುನ ಹೆಗ್ಗನ್ನವರ..
ಸವದತ್ತಿ ಃ “ಶಿಕ್ಷಣ ಕ್ಷೇತ್ರದಲ್ಲಿ ಗುರು ಶಿಷ್ಯರ ಅಪೂರ್ವ ಮಿಲನ ಇಂದು ಸವದತ್ತಿ ತಾಲೂಕಿನಲ್ಲಿ ಆಗಿದೆ.ಮೋಹನ ದಂಡಿನ ಗುರುಗಳು ನಮಗೆ ಟಿ.ಸಿ.ಎಚ್.ಸಂದರ್ಭದಲ್ಲಿ ಮನೋವಿಜ್ಞಾನ ಬೋಧಿಸುತ್ತಿದ್ದರು.ಅವರ ವಿದ್ಯಾರ್ಥಿಯಾದ ನಾನಿಂದು ಸವದತ್ತಿ ತಾಲೂಕಿನ ದಂಡಾಧಿಕಾರಿಯಾಗಿ ಆಗಮಿಸಿದ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ನನ್ನ ಗುರುಗಳು ಬಂದಿದ್ದು ನಿಜಕ್ಕೂ ಒಂದು ರೀತಿಯ ಅಪೂರ್ವ ಸಂಗಮ.ಕಂದಾಯ ಮತ್ತು ಶಿಕ್ಷಣ ಇಲಾಖೆಗಳ ಸಮ್ಮಿಳಿತದ ಮೂಲಕ ಇಲಾಖೆಗಳ ಚಟುವಟಕೆಗಳು ಜರುಗುತ್ತವೆ.ಒಂದಕ್ಕೊಂದು ಪೂರಕ ವಾತಾವರಣದಲ್ಲಿ ಮನೋವೈಜ್ಞಾನಿಕ ಮನೋಸ್ಥಿತಿಯ ಸಹೃದಯ ವ್ಯಕ್ತಿಗಳು ನನ್ನ ಗುರುಗಳು ಅವರಿಗೆ ಎಲ್ಲ ರೀತಿಯ ಸಹಕಾರ ಸಂಘಟನೆಗಳಾದಿಯಾಗಿ ಶಿಕ್ಷಕರು ನೀಡಿರಿ” ಎಂದು ಸವದತ್ತಿ ತಾಲೂಕು ತಹಶೀಲ್ದಾರ್ ಎಂ.ಎನ್.ಹೆಗ್ಗನ್ನವರ ಕರೆ ನೀಡಿದರು.
ಅವರು ಸವದತ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಇಂದು ಅಧಿಕಾರ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಅವರ ಸ್ವಾಗತ ಸಮಾರಂಭದಲ್ಲಿ ತಮ್ಮ ಗುರುಗಳಿಗೆ ಗೌರವಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಡಿ.ಡಿ.ಪಿ.ಐ. ಕಾರ್ಯಾಲಯದಲ್ಲಿ ಶಿಕ್ಷಣಾಧಿಕಾರಿಗಳಾದ ಆರ್.ಟಿ.ಬಳಿಗಾರ.ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ.ಅಕ್ಷರ ದಾಸೋಹ ಸಹಾಯಕ ನಿರ್ದೆಶಕರಾದ ಮೈತ್ರಾದೇವಿ ವಸ್ತ್ರದ. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ. ಹುಕ್ಕೇರಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷರಾದ ಎಂ.ಎ.ಉಮರಾಣಿ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಪಿ.ಡಿ.ಪಾಟೀಲ.ಸವದತ್ತಿ ತಾಲೂಕು ಕ.ರಾ.ಪ್ರಾ.ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಿರಣ.ಕುರಿ.ಜಿಲ್ಲಾ ಉಪಾಧ್ಯಕ್ಷರಾದ ಎಂ.ಎಫ್.ಸಿದ್ದನಗೌಡರ.ಹುಕ್ಕೇರಿಯ ನಿವೃತ್ತ ಶಿಕ್ಷಕರಾದ ಎನ್.ಬಿ.ಗುಡಸಿ.ನೌಕರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಎನ್.ಬಿ.ನಾಯ್ಕ. ಸವದತ್ತಿ ತಾಲೂಕು ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ಜಿ.ಗೂಳಪ್ಪನವರ.ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಟಿ.ಬಿ.ಏಗನಗೌಡರ.ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ವ್ಹಿ.ಬಿ.ಪಡಿ.ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಸುಧೀರ ವಾಘೇರಿ.ಬೆಳಗಾವಿಯ ಶಿಕ್ಷಕರಾದ ಟಿ.ಬಿ.ಬೆಟಗೇರಿ.ಬಡ್ತಿ ಮುಖ್ಯೋಪಾಧ್ಯಾಯರ ಸಂಘದ ಕಾರ್ಯದರ್ಶಿಗಳಾದ ಬಿ.ವ್ಹಿ.ಕಾಡನ್ನವರ ಮೊದಲಾವರು ಉಪಸ್ಥಿತರಿದ್ದರು.
ಮೋಹನ್ ದಂಡೀನ ಅವರ ಕುರಿತು.ಜಿಲ್ಲಾ ಉಪಾಧ್ಯಕ್ಷರಾದ ಎಂ.ಎಫ್.ಸಿದ್ದನಗೌಡರ ಮಾತನಾಡಿ ನಮ್ಮ ತಾಲೂಕಿನ ಸಂಘಟನೆಗಳ ಪರವಾಗಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಮುಂಬರುವ ದಿನಗಳಲ್ಲಿ ಅವರು ಉಪನಿರ್ದೇಶಕ ಹುದ್ದೆಗೆ ಬಡ್ತಿ ಹೊಂದುವಂತಾಗಲಿ ಎಂದು ಶುಭ ಕೋರಿದರು.ಹುಕ್ಕೇರಿ ಬಿ.ಆರ್.ಸಿ ಸ,ನ್ವಯಾಧಿಕಾರಿಗಳಾದ ಎಸ್.ಡಿ.ನಾಯ್ಕ ಮಾತನಾಡಿ “ ದಂಡೀನ ಗುರುಗಳ ಸಹೃದಯತೆ ಹುಕ್ಕೇರಿ ತಾಲೂಕಿನ ಸೇವೆಯಲ್ಲಿರುವ ಸಂದರ್ಭದಲ್ಲಿ ಕೋರೋನಾ ಮತ್ತು ನೆರೆಹಾವಳಿ ಸಂದರ್ಭದಲ್ಲಿ ಮರೆಯಲಾಗದ ಕಾರ್ಯವನ್ನು ಮಾಡುವ ಜೊತೆಗೆ ತಾಲೂಕಿನ ಎಲ್ಲ ಶಿಕ್ಷಕ ಸಮುದಾಯದ ಜನನುರಾಗಿಯಾಗಿರುವರು.ಅವರನ್ನು ಬಿಟ್ಟುಕೊಡಬೇಕಾದ ನಮಗೆ ಒಬ್ಬ ದಕ್ಷ ಅಧಿಕಾರಿಯ ಆಡಳಿತದಿಂದ ನಾವು ಅವರನ್ನು ಮುಂಬರುವ ದಿನಗಳಲ್ಲಿ ಡಿ.ಡಿ.ಪಿ.ಐ ಹುದ್ದೆಯಲ್ಲಿ ನೋಡಬಯಸುತ್ತೇವೆ”ಎಂದು ಅವರ ಹುಕ್ಕೇರಿ ತಾಲೂಕಿನ ಸೇವೆಯನ್ನು ನೆನೆಪಿಸಿಕೊಂಡರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಪಿ.ಡಿ.ಪಾಟೀಲ ಮಾತನಾಡಿ “ನಿಪ್ಪಾಣಿ ಮತ್ತು ಹುಕ್ಕೇರಿ ತಾಲೂಕಿನಲ್ಲಿ ದಂಡೀನ ಅವರ ಸೇವೆಯ ದಿನಗಳನ್ನು ನೆನೆದು ಉತ್ತಮ ದಕ್ಷ ಅಧಿಕಾರಿ ಸವದತ್ತಿ ಯಲ್ಲಮ್ಮನ ನಾಡಿಗೆ ಬಂದಿರುವರು.ಅವರ ಸೇವೆ ಇಲ್ಲಿಯೂ ಕೂಡ ಚಿರಸ್ಥಾಯಿಯಾಗಿರಲಿ”ಎಂದು ಹೇಳಿದರು.
ಬೆಳಗಾವಿ ಡಿ.ಡಿ.ಪಿ.ಐ ಕಛೇರಿಯ ಶಿಕ್ಷಣಾಧಿಕಾರಿಗಳಾದ ಆರ್.ಟಿ.ಬಳಿಗಾರ “ತಮ್ಮ ಮತ್ತು ದಂಡಿನ ಅವರ ಸೇವೆಯ ದಿನಗಳನ್ನು ನೆನೆದು ದಂಡೀನ ಅವರ ಸೇವೆ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಒಂದೊಂದು ತಾಲೂಕುಗಳಲ್ಲಿ ಜರಗುತ್ತ ಬಂದಿದ್ದು ಈಗ ಸವದತ್ತಿ ತಾಲೂಕಿಗೆ ಆಗಮಿಸಿದ್ದು ಅವರ ಸೇವೆ ಇಲ್ಲಿಯೂ ಕೂಡ ಚನ್ನಾಗಿ ಸಾಗಲಿ.ಮಿತ್ರನ ಸೇವೆ ಸದಾ ಅಜರಾಮರ”ಎಂದು ಹೇಳಿದರು.
ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎನ್.ಪ್ಯಾಟಿ ಮಾತನಾಡಿ “ ಅನಿರೀಕ್ಷಿತವಾಗಿ ಕರೀಕಟ್ಟಿ ಸಾಹೇಬರ ನಿವೃತ್ತಿ ಸಂದರ್ಭದ ಚಾರ್ಜನ್ನು ನಾನು ಪಡೆದೆನು.ಈ ಪವಿತ್ರ ಕ್ಷೇತ್ರದಲ್ಲಿ ಕೆಲವು ದಿನ ಎಲ್ಲ ಶಿಕ್ಷಕರ ಇಲಾಖೆಯ ಸಿಬ್ಬಂಧಿಯ ಸಹಕಾರದಿಂದ ಕಾರ್ಯ ಮಾಡಿದೆ.ಅಧಿಕೃತವಾಗಿ ದಂಡಿನ ಅವರ ಆಗಮನ ನಮಗೂ ಸಂತೋಷ ತಂದಿದೆ.ಓರ್ವ ಉತ್ತಮ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮಗೆ ಆಗಮಿಸಿದ್ದು ಅªರ ಸೇವೆಗೆ ತಮ್ಮೆಲ್ಲರ ಸಹಕಾರ ಸಿಗಲಿ”ಎಂದು ತಿಳಿಸಿದರು
ಪ್ರಾರಂಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ ಪ್ರಾಸ್ತಾವಿಕವಾಗಿ ಮಾತನಾಡಿ “ ಕರೀಕಟ್ಟಿಯವರ ನಿವೃತ್ತಿ ಸ್ಥಾನವನ್ನು ದಂಡೀನ ಸಾಹೇಬರು ತುಂಬಿದ್ದು .ಇಲಾಖೆಯ ಬಿ.ಆರ್.ಸಿ. ಹಾಗೂ ಅಕ್ಷರ ದಾಸೋಹ.ಸಿ.ಆರ್.ಪಿ ಹಾಗೂ ಬಿ.ಆರ್.ಪಿಗಳ ಸಹಕಾರ ತಮಗೆ ಸದಾ ಇದ್ದು ಎಲ್ಲರೂ ಒಂದೇ ದೋಣಿಯ ಪಯಣಿಗರಾಗಿ ಶಿಕ್ಷಣ ಇಲಾಖೆಯನ್ನು ಪ್ರಗತಿಪಥದತ್ತ ಕೊಂಡೊಯ್ಯೋಣ”ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧ ಸಂಘಟನೆಗಳಿಂದ ಪ್ರೌಢಶಾಳಾ ಮುಖ್ಯೋಪಾಧ್ಯಾಯರು.ಸಹ ಶಿಕ್ಷಕರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ಬಿ.ಆರ್.ಸಿ ಹಾಗೂ ಸಿ.ಆರ್.ಸಿಗಳ ವತಿಯಿಂದ ಮೋಹನ ದಂಡೀನ ಅವರನ್ನು ಸನ್ಮಾನಿಸುವ ಮೂಲಕ ಸ್ವಾಗತಿಸಲಾಯಿತು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಮೋಹನ ದಂಡೀನ ಅವರು “ನಾನು ಸವದತ್ತಿ ತಾಲೂಕಿಗೆ ಬಂದಿರುವುದು ಅನಿರೀಕ್ಷಿತ.ನಿಪ್ಪಾಣಿ ಹುಕ್ಕೇರಿ ವಿವಿಧ ತಾಲೂಕಿನಲ್ಲಿ ಸೇವೆ ಮಾಡಿರುವೆ.ಅದಕ್ಕಿಂತ ಮೊದಲು ಡಯಟ್ ನಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದೆ.ಸವದತ್ತಿ ತಾಲೂಕಿನಲ್ಲಿ ಕೂಡ ನನ್ನ ವಿದ್ಯಾರ್ಥಿಗಳಿದ್ದೀರಿ.ಗುರು ಶಿಷ್ಯರ ಮಿಲನ ಕುರಿತು ತಹಶೀಲ್ದಾರ ಹೆಗ್ಗನ್ನವರ ಮಾತನಾಡಿರುವರು.ಇಲಾಖೆಯ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವಲ್ಲಿ ತಮ್ಮೆಲ್ಲರ ಸಹಕಾರ ಸದಾ ಇರಲಿ”ಎಂದು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ರತ್ನಾ ಸೇತಸನದಿ ಪ್ರಾರ್ಥನಾ ಗೀತೆ ಹೇಳಿದರು.ಎಂ.ಡಿ.ಹುದ್ದಾರ ನಿರೂಪಿಸಿದರು.ಜಿ.ಎಂ.ಕರಾಳೆ ವಂದಿಸಿದರು.