ಕೇಂದ್ರ ಸರಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ: ತುಟ್ಟಿ ಭತ್ಯೆ ಹೆಚ್ಚಳ ನಿಯಮ ಏನು ಹೇಳುತ್ತದೆ…
ಕೇಂದ್ರ ಸರಕಾರ ತನ್ನ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿದಾಗ ಆಯಾ ರಾಜ್ಯಾದ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗುತ್ತದೆ.
ನಮ್ಮ ರಾಜ್ಯದಲ್ಲಿ ಏಳನೇ ವೇತನ ಆಯೋಗ ಇದುವರೆಗೂ ಅನುಷ್ಠಾನಕ್ಕೆ ಬಂದಿಲ್ಲ.ಕೇವಲ ಮದ್ಯಂತರ ವರದಿ ಅನುಷ್ಠಾನ ಮಾಡಲಾಗಿದೆ.
ತುಟ್ಟಿಭತ್ಯೆ ಹೆಚ್ಚಳ ಜುಲೈ 1ರಿಂದ ಅನ್ವಯಆಗಲಿದೆ. ಏಕೆಂದರೆ ಸರ್ಕಾರ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಅಂದರೆ ಜನವರಿ ಮತ್ತು ಜುಲೈನಲ್ಲಿ ಪರಿಷ್ಕರಿಸುತ್ತದೆ.
ಪ್ರಸ್ತುತ ಸರ್ಕಾರದಿಂದ ನೌಕರರಿಗೆಶೇ.42 ತುಟ್ಟಿಭತ್ಯೆ ನೀಡಲಾಗುತ್ತಿದೆ. ಜೂನ್ ತಿಂಗ ಳಎಐಸಿಪಿಐ ಸೂಚ್ಯಂಕದಆಧಾರದಮೇಲೆಮುಂದಿನತುಟ್ಟಿಭತ್ಯೆನಿರ್ಧಾರವಾಗಲಿದೆ
ಇದರಿಂದ ಕನಿಷ್ಠಶೇ.3ರಷ್ಟುತುಟ್ಟಿಭತ್ಯೆಹೆಚ್ಚಳವಾಗುವಸಾಧ್ಯತೆ ಇದೆ.
ಒಂದು
ವೇಳೆ ಶೇ.4ರಷ್ಟುತುಟ್ಟಿಭತ್ಯೆಹೆಚ್ಚಳ ಆದರೆ ಕೇಂದ್ರ ಸರಕಾರಿ ನೌಕರರಿಗೆ ಡಿಎ ಶೇ.45ಕ್ಕೆಏರಿಕೆಯಾಗಲಿದೆ. ಇದೇ ರೀತಿ ಆದರೆ ಮುಂದಿನ ವರ್ಷದ ವೇಳೆಗೆಶೇ.50ರಷ್ಟುತಲುಪಲಿದೆ.
ಕನಿಷ್ಠವೇತನ 18,000 ರೂ. ಆಧಾರದ ಮೇಲೆ ನೋಡುವುದಾದರೆ ಕೇಂದ್ರ ಸರಕಾರಿ ನೌಕರರು ಪ್ರತಿ ತಿಂಗಳು ಕನಿಷ್ಠ 9000 ರೂ.ಗಳ ತುಟ್ಟಿಭತ್ಯೆಯನ್ನು ಪಡೆಯುತ್ತಾರೆ.
ವೇತನಕ್ಕೆ ಅನುಗುಣವಾಗಿ ತುಟ್ಟಿಭತ್ಯೆಯೂ ಹೆಚ್ಚಾಗಲಿದೆ. ಈ ಹಿಂದೆ ಮಾರ್ಚ್ನಲ್ಲಿ ಕೇಂದ್ರ ನೌಕರರ ಡಿಎಯನ್ನು ಸರ್ಕಾರ ಶೇ 4ರಷ್ಟು ಹೆಚ್ಚಿಸಿದ್ದು, ನೌಕರರ ತುಟ್ಟಿಭತ್ಯೆಶೇ 42ಕ್ಕೆಏರಿಕೆಯಾಗಿತ್ತು. ಈ ಹೆಚ್ಚಳವನ್ನು 1 ಜನವರಿ 2023 ರಿಂದಜಾರಿಗೆತರಲಾಗಿದೆ.
ತುಟ್ಟಿಭತ್ಯೆಯನಿಯಮವೆಂದರೆಅದು 50 ಪ್ರತಿಶತವನ್ನುತಲುಪಿದಾಗಅದನ್ನುಶೂನ್ಯಕ್ಕೆಇಳಿಸಲಾಗುತ್ತದೆ. ಈ ಹಿಂದೆ 2016ರಲ್ಲಿಸರ್ಕಾರ 7ನೇವೇತನ ಆಯೋಗವನ್ನು ಜಾರಿಗೊಳಿಸಿದಾಗ ತುಟ್ಟಿಭತ್ಯೆಯನ್ನು ಶೂನ್ಯಕ್ಕೆಇಳಿಸಲಾಗಿತ್ತು.
ನಿಯಮಗಳ ಪ್ರಕಾರ ತುಟ್ಟಿಭತ್ಯೆ ಶೇ.50ಕ್ಕೆತಲುಪಿದ ತಕ್ಷಣ ಅದನ್ನು ಶೂನ್ಯಕ್ಕೆಇಳಿಸಿ ಶೇ.50ರ ಪ್ರಕಾರ ಮೂಲ ವೇತನಕ್ಕೆ ಅಂದರೆ ಕನಿಷ್ಠ ವೇತನಕ್ಕೆ ಸೇರಿಸಲಾಗುತ್ತದೆ. ಕೇಂದ್ರ ಸರಕಾರಿ ನೌಕರರಿಗೆಪ್ರತಿ 6 ತಿಂಗಳಿಗೊಮ್ಮೆ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗುತ್ತದೆ. ಅದರಂತೆ ಈ ಬಾರಿಕೂಡ ಹೆಚ್ಚಳವಾಗಲಿದ್ದು, ಶೇ.3ರಷ್ಟು ಏರಿಕೆ ಮಾಡುವ ಮೂಲಕ ಶೇ.45ಕ್ಕೆ ತಲುಪುವ ಸಾಧ್ಯತೆ ಇದೆ.ತುಟ್ಟಿಭತ್ಯೆಹೆಚ್ಚಳ ಆದರೆ ಸುಮಾರು 1 ಕೋಟಿ ಕೇಂದ್ರ ಸರಕಾರಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.