ಶಾಸಕನ ಹೆಸರು ಬರೆದಿಟ್ಟು ಎಸ್ಡಿಎ ಆತ್ಯಹತ್ಯೆಗೆ ಶರಣು.
ಯಾರು ಈ ಶಾಸಕ ? ಏನಿದು ಪ್ರಕರಣ ನೀವೆ ನೋಡಿ
ಚಿತ್ರದುರ್ಗ: ಶಾಸಕನ ಹೆಸರು ಡೆತ್ ನೋಟ್ ನಲ್ಲಿ ಬರೆದಿಟ್ಟು ಗ್ರಾಮ ಪಂಚಾಯತ ನೌಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಹೆಸರು ತಿಪ್ಪೇಸ್ವಾಮಿ, ಇವರು ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಎಸ್ ಡಿ ಎ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಉಪ್ಪರಿಗೇನಹಳ್ಳಿಯ ಮೋಹನ್ ಕುಮಾರ್, ಮೂರ್ತಿ, ಉಗ್ರಪ್ಪ, ರಾಜಪ್ಪ ಹಾಗೂ 30 ಜನ ಸ್ನೇಹಿತರು ತಮ್ಮನ್ನ ಬೆದರಿಸಿ ಖಾತೆ ಮಾಡಿಸಿಕೊಂಡಿದ್ದಾರೆ ಅಲ್ಲದೆ ಎಸ್ಸಿಗಳಿಗೆ ಮಾತ್ರ ಕೆಲಸಮಾಡಿಕೊಡು ಅಂತಾ ಪಿಡಿಓ ಮೂಲಕ ಹಿಂಸೆ ಮಾಡ್ತಿದ್ರು ಎಂದು ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.
ಎಂ. ಚಂದ್ರಪ್ಪ ಹೊಳಲ್ಕೆರೆಯ ಬಿಜೆಪಿ ಶಾಸಕನಿಂದ ಒತ್ತಡ ಹಾಗೂ ಸಸ್ಪೆಂಡ್ ಮಾಡುವ ಬೆದರಿಕೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.
ಈ ಘಟನೆ ಕುರಿತಂತೆ ಹೊಸದುರ್ಗ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ