ಜನುಮ ದಿನದಂದೆ ಹಾವು ಕಚ್ಚಿ ಬಾಲಕಿ ಸಾವು!!
ಮೃತ ಬಾಲಕಿ ಕೈಯಲ್ಲಿ ಕೇಕ್ ಕತ್ತರಿಸಿ ತಮ್ಮ ಆಕ್ರಂದನ ಹೊರ ಹಾಕಿದ ಪೋಷಕರು..
ಕುಣಿಗಲ್ : ಜಮೀನಿನ ತೋಟದಲ್ಲಿ ಕಳೆ ಕೀಳುತ್ತಿದ್ದ ವೇಳೆ ಬಾಲಕಿಗೆ ಹುಟ್ಟು ಹಬ್ಬದ ದಿನದಂದೇ ಹಾವು ಕಚ್ಚಿ ಸಾವನಪ್ಪಿರುವ ಘಟನೆ ತಾಲೂಕಿನ ಸಂತೆಮಾವತ್ತೂರು ಸಮೀಪದ ಪಂಚವಟಿ ತಾಂಡಾದಲ್ಲಿ ಶನಿವಾರ ನಡೆದಿದೆ.
ಗ್ರಾಮದ ಶಂಕರ್ ನಾಯ್ಕ್ ಹಾಗೂ ಸವಿತಾ ಭಾಯಿ ಅವರ ಪುತ್ರಿ ಚೈತನ್ಯಭಾಯಿ(9) ಹುಟ್ಟು ಹಬ್ಬದ ದಿನದಂದೇ ಸಾವನಪ್ಪಿರುವ ನತದೃಷ್ಟ ಬಾಲಕಿ.
ಮೃತ ಬಾಲಕಿ ಕೈಯಲ್ಲಿ ಕೇಕ್ ಕತ್ತರಿಸಿ ಆಕ್ರಂದನ : ಶನಿವಾರ ಚೈತನ್ಯಭಾಯಿಯ ಹುಟ್ಟು ಇದ್ದಿತು ಹುಟ್ಟು ಹಬ್ಬ ಆಚರಣೆ ಮಾಡಲೆಂದು ಮನೆಯವರು ಸಿದ್ದತೆ ಮಾಡಿಕೊಂಡಿದ್ದರು ಆದರೆ ವಿಧಿ ಆಟವೇ ಬೇರೆಯಾಗಿತ್ತು, ಹಾವು ಕಚ್ಚಿ ಮೃತಪಟ್ಟಳು. ಇದರಿಂದ ಬಹಳ ನೊಂದ ಪೋಷಕರು ಬಾಲಕಿಯ ಶವದ ಕೈಯಿಂದಲ್ಲೇ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿ ತೀವ್ರ ಆಕ್ರಂದನ ವ್ಯಕ್ತಪಡಿಸಿದ್ದಾರೆ..