ಶಾಲೆ ಸಹಾಯಕಿಗೆ ಹಾವು ಕಡಿತ – ಆಸ್ಪತ್ರೆಗೆ ದಾಖಲು
ಕಾರವಾರ:ಶಾಲೆ ಸಹಾಯಕಿಗೆ ಹಾವು ಕಡಿತ – ಆಸ್ಪತ್ರೆಗೆ ದಾಖಲು!
ಕಾರವಾರ:ಶಾಲೆ ಸಹಾಯಕಿಗೆ ಹಾವು ಕಡಿತ – ಆಸ್ಪತ್ರೆಗೆ ದಾಖಲು!
ಕಾರವಾರ: ನಗರದ ಸಮೀಪ ಶಿರವಾಡದ ಕರ್ನಾಟಕ ಪಬ್ಲಿಕ್ ಶಾಲೆಯ ಸಹಾಯಕಿ ಆನಂದಿ ಎಂಬ ಮಹಿಳೆಗೆ ಹಾವು ಕಡಿದ ಘಟನೆ ಮಂಗಳವಾರ ನಡೆದಿದೆ.
ಶಾಲಾ ಸಮಯದಲ್ಲಿ ನೀರಿನ ಪಂಪ್ ಸ್ಟಾರ್ಟ್ ಮಾಡಲು ತೆರಳುವ ವೇಳೆ ಆನಂದಿ ಅವರಿಗೆ ಹಾವು ಕಚ್ಚಿದೆ. ತೀವ್ರ ಅಸ್ವಸ್ಥರಾದ ಅವರನ್ನು ಸಾರ್ವಜನಿಕರು ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು. ಆನಂದಿ ಅವರ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಪೊಲೀಸರು ಶಾಲೆಯ ಸ್ಥಳಕ್ಕೆ ಭೇಟಿ ನೀಡಿ ಘಟನೆ ಪರಿಶೀಲಿಸಿದ್ದಾರೆ.
ಘಟನೆಯಿಂದ ಪೋಷಕರು ಚಿಂತೆಗೆ ಒಳಗಾಗಿದ್ದಾರೆ. ಶಾಲಾ ಆವರಣ ಸ್ವಚ್ಛ ಗೊಳಿಸಲು ಶಾಲಾ ಮುಖ್ಯೋಪಾಧ್ಯಾಯರಿಗೆ ಬಿಇಒ ಸೂಚನೆ ನೀಡಿದ್ದಾರೆ.