ಕೊಪ್ಪಳ ಜಿಲ್ಲೆಯ, ಶಿಕ್ಷಣ ಇಲಾಖೆಯ ನೂತನ ಉಪನಿರ್ದೇಶಕರಾದ ಎಸ್ ಎಸ್ ಬಿರಾದಾರ ಅವರಿಗೆ ಗ್ರಾಮೀಣ ಶಿಕ್ಷಕರ ಸಂಘದಿಂದ ಅದ್ದೂರಿ ಸ್ವಾಗತ.
ಕೊಪ್ಪಳ ಜಿಲ್ಲೆಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು ಆಡಳಿತ ಇಂದು ಕೊಪ್ಪಳ ಜಿಲ್ಲೆಯ ಉಪನಿರ್ದೇಶಕರಾಗಿ ಹಾಜರಾದರು, ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಶ್ರೀಶರಣಪ್ಪಗೌಡ R.K .ಮತ್ತು ಕೊಪ್ಪಳ ಜಿಲ್ಲೆಯ ಪದಾಧೀಕಾರಿಗಳು ಬೇಟಿಯಾಗಿ ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಾದ್ಯಕ್ಷರಾದ ಶರಣಪ್ಪಗೌಡ ಆರ್ ಕೆ ರವರು ಶೈಕ್ಷಣಿಕ ಅಭಿವೃದ್ಧಿಗಾಗಿ, ಮಕ್ಕಳ ಏಳಿಗೆಗಾಗಿ ತಾವು ಕೈಗೊಳ್ಳುವ ಎಲ್ಲಾ ಕೆಲಸ ಕಾರ್ಯಗಳಿಗೆ ನಮ್ಮ ಸಂಘದ ಸಂಪೂರ್ಣ ಬೆಂಬಲ ಇರುತ್ತದೆ ಎಂದರು.
ಇದಕ್ಕೆ ಉಪನಿರ್ದೇಶಕರಾದ ಎಸ್ ಎಸ್ ಬಿರಾದಾರ ಮಾತನಾಡಿ ಶಿಕ್ಷಕರ ಎಲ್ಲಾ ಸಂಘಟನೆಗಳು ಸೇರಿ ಈ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಶ್ರಮಿಸೋಣ ನಿಮ್ಮೆಲ್ಲರ ಸಹಕರ ಇರಲಿ, ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಉತ್ತಮ ಕಾರ್ಯ ಮಾಡೋಣ ಎಂದರು.