ಶಿಕ್ಷಕರ ಬಿಳ್ಕೊಡುಗೆ ಸಮಾರಂಭ ಅದ್ದೂರಿಯಾಗಿ ಜರುಗಿತು:ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿದ ಗ್ರಾಮಸ್ಥರು.
ಬಾವುಕ ಕ್ಷಣಗಳಿಗೆ ಸಾಕ್ಷಿಯಾದ ಸರಕಾರಿ ಶಾಲೆಯ ಶಿಕ್ಷಕರ ಬಿಳ್ಕೊಡುಗೆ ಸಮಾರಂಭ…
ತುಮಕೂರು ತಾಲೂಕಿನ ಶಿರಾವರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸತತ 35 ವರ್ಷದಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಟಿ ನರಸಿಂಹಮೂರ್ತಿ ಅವರು ಇಂದು ನಿವೃತ್ತಿ ಹೊಂದಿದ್ದಾರೆ. ಈ ಹಿನ್ನೆಲೆ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳು ಶಿಕ್ಷಕರನ್ನು ಬೆಳ್ಳಿ ರಥದಲ್ಲಿ ಕುರಿಸಿ ಊರ ತುಂಬ ಮೆರವಣಿಗೆ ಮಾಡುವ ಮೂಲಕ ಬೀಳ್ಕೊಡುಗೆ ನೀಡಿದ್ದಾರೆ.
ನರಸಿಂಹಮೂರ್ತಿ ಗರಡಿಯಲ್ಲಿ ಕಲಿತ ಸಾವಿರಾರು ಜನರು ಸಾಫ್ಟ್‌ವೇರ್ ಇಂಜಿನಿಯರ್, ಡಾಕ್ಟರ್, ರಾಜಕಾರಣಿಗಳು, ದೇಶ ವಿದೇಶಗಳಲ್ಲಿ ಹಲವು ಕೆಲಸಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂತಹ ನೆಚ್ಚಿನ ಶಿಕ್ಚಕನಿಗೆ ಕೊಟ್ಟ ಅದ್ದೂರಿ ಬೀಳ್ಕೊಡುಗೆ ಸನ್ಮಾನಕ್ಕೆ ಮನಸೋತ ಶಿಕ್ಷಕ ನರಸಿಂಹಮೂರ್ತಿ ಆ ಗ್ರಾಮಸ್ಥರ ಪ್ರೀತಿಗೆ ಭಾವುಕರಾಗಿ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡರೆ ಇಂತಹ ಸನ್ಮಾನಗಳು ಎಲ್ಲರಿಗೂ ಸಿಗುತ್ತೆ ಎಂದಿದ್ದಾರೆ.
ತನ್ನ ಶಿಕ್ಷಕ ತಮ್ಮ ಶಾಲೆಯನ್ನ ಬಿಟ್ಟು ಹೋಗುತ್ತಿರುವುದಕ್ಕೆ ಆ ಗ್ರಾಮಸ್ಥರೆಲ್ಲಾ ಭಾವುಕರಾಗಿದ್ದಾರೆ. ಮುಂದೆ ಇಂತಹ ಶಿಕ್ಷಕರು ನಮ್ಮ ಶಾಲೆಗೆ ಸಿಗಲಿ ಎನ್ನುವ ಮೂಲಕ ಶಿಕ್ಷಕರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಆಶಿಸಿದ್ದಾರೆ.