ಶಿಕ್ಷಕರಿಂದ ಲೈಂಗೀಕ ಕಿರುಕುಳ ಆರೋಪ : ಸೇವೆಯಿಂದ ಶಿಕ್ಷಕ ಅಮಾನತ್..
ಕರ್ತವ್ಯಲೋಪ,ದುರ್ನನಡತೆ ಹಿನ್ನಲೆಯಲ್ಲಿ ಸರಕಾರಿ ಶಾಲೆಯ ಶಿಕ್ಷಕ ಅಮಾನತ್ ಮಾಡಿ ಆದೇಶ ಮಾಡಿದ ಡಿಡಿಪಿಐ…
ಕರ್ತವ್ಯಲೋಪ, ದುರ್ನಡತೆ ಹಿನ್ನೆಲೆಯಲ್ಲಿ ಬಸವಕಲ್ಯಾಣ ತಾಲ್ಲೂಕಿನ ಕಾಂಬಳೆವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಅಶೋಕ ರೆಡ್ಡಿ ಹುಡೆ ಅವರನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಲೀಂ ಪಾಷಾ ಅವರು ಸೋಮವಾರ ಅಮಾನತುಗೊಳಿಸಿದ್ದಾರೆ.
ಅಶೋಕ ರೆಡ್ಡಿ ಅವರು ಬಸವಕಲ್ಯಾಣ ತಾಲ್ಲೂಕಿನ ಕಿಟ್ಟಾ ಗ್ರಾಮದ ಕರ್ನಾಟಕ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆಯ ನೋಡಲ್ ಅಧಿಕಾರಿ ಕೂಡ ಆಗಿದ್ದಾರೆ.
ವಸತಿ ಶಾಲೆಯ ಮೇಲ್ವಿಚಾರಕಿ ಸುನೀತಾ ರಾಜಕುಮಾರ ನಾರಾಯಣಪೇಟಕರ ಅವರಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂಬ ದೂರು ಆಧರಿಸಿ ಜು. 27ರಂದು ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಅಧಿಕಾರಿಗಳನ್ನು ಶಾಲೆಗೆ ಕಳುಹಿಸಿ ವರದಿ ಪಡೆಯಲಾಗಿದೆ.
ಅಶೋಕ ರೆಡ್ಡಿ ಅವರು ಕರ್ತವ್ಯಲೋಪ, ದುರ್ನಡತೆಯಿಂದ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಅವರ ವಿರುದ್ಧ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಾವಳಿ 2021ರ ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಸಲೀಂ ಪಾಷಾ ತಿಳಿಸಿದ್ದಾರೆ.