ಸೇವಾ ನಿವೃತ್ತಿ ಹೊಂದಿದ ಬಿಇಓ ಎಸ್.ಸಿ. ಕರೀಕಟ್ಟಿ ಅವರಿಗೆ ವೈಶಿಷ್ಟ್ಯಪೂರ್ಣ ಬೀಳ್ಕೊಡುವ ಸಮಾರಂಭ..
ಸವದತ್ತಿ-: “ಸೈನ್ಯದಲ್ಲಿ ಸೇವೆ ಸಲ್ಲಿಸಿ ನಂತರ ವಿದ್ಯೆ ಕಲಿಸುವ ಗುರುವಾಗಿ ಶಿಕ್ಷಣಾಧಿಕಾರಿಗಳಾಗಿ ನಿವೃತ್ತಿ ಹೊಂದಿರುವುದು ಶ್ಲಾಘನೀಯ ಕರೀಕಟ್ಟಿಯವರ ಸೇವೆ ನಿಜಕ್ಕೂ ಅಭಿನಂದನಾರ್ಹ.ಬೆಳವಡಿ ಮಲ್ಲಮ್ಮಳ ಕ್ಷಾತ್ರ ತೇಜಸ್ಸು ಹೊಂದಿರುವ ನೆಲೆಯಿಂದ ಎಲ್ಲಮ್ಮನ ಸ್ಥಾನಕ್ಕೆ ಬಂದು ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವುದು ಒಂದು ಪುಣ್ಯ” ಎಂದು ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ಇಲ್ಲಿನ ಗುರುಭವನದಲ್ಲಿ ಸೋಮವಾರ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಶಿಕ್ಷಕರಿಂದ, ಸೇವಾ ನಿವೃತ್ತಿ ಹೊಂದಿದ ಬಿಇಓ ಎಸ್.ಸಿ. ಕರೀಕಟ್ಟಿ ಅವರಿಗೆ ಬೀಳ್ಕೊಡುವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.ಸೇವೆಯಲ್ಲಿ ನಿವೃತ್ತಿ, ಸಹಜ ಪ್ರಕ್ರಿಯೆಯಾಗಿದ್ದು, ಅಲಂಕರಿಸಿದ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುವದರ ಜೊತೆಗೆ ಸಹುದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಶಿಕ್ಷಕರಿಗೆ ಜನಾನುರಾಗಿ ಅಧಿಕಾರಿ ಎನಿಸಿಕೊಳ್ಳುವುದು ಮಹತ್ವದ್ದು ಆ ಸುಯೊಗ ಕರೀಕಟ್ಟಿಯವರದು.’ಎಂದರು.
ಕಾರ್ಯಕ್ರಮದಲ್ಲಿ ಬಿಇಓ ಎಸ್.ಸಿ ಕರೀಕಟ್ಟಿ ದಂಪತಿಗಳಿಗೆ ಶಾಸಕ ವಿಶ್ವಾಸ್ ವೈದ್ಯ .ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿಯವರು.ಮೂಲಿಮಠದ ಮಲ್ಲಿಕಾರ್ಜುನ ಸ್ವಾಮಿಗಳು.ವಿರುಪಾಕ್ಷ ಮಾಮನಿ.ಸವದತ್ತಿ ತಾಲೂಕ ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು.ಸೇವಾದಳ ಸಂಘಟನೆ. ಗ್ರಾಮೀಣ. ಶಿಕ್ಷಕರ ಸಂಘ.ಎನ್.ಪಿ.ಎಸ್.ನೌಕರರ ಸಂಘ.ವಿವಿಧ ಸಿ.ಆರ್.ಸಿಗಳ ವ್ಯಾಪ್ತಿಯ ಶಾಲೆಗಳವರು.ನಿವೃತ್ತ ಸೇನಾ ಸಂಘಟನೆ. ನಿವೃತ್ತ ಶಿಕ್ಷಕರ ಸಂಘ.ಸಿ.ಆರ್.ಪಿ ಬಿ.ಆರ್.ಪಿಯವರಿಂದ.ಬಿ.ಇ.ಓ ಕಾರ್ಯಾಲಯದಿಂದ ವಿವಿಧ ಗ್ರಾಮಗಳ ಪ್ರಮುಖರು ವಿವಿಧ ಶಾಲೆಗಳ ವತಿಯಿಂದ ಕರೀಕಟ್ಟಿಯವರನ್ನು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ಸಿ.ಕರೀಕಟ್ಟಿಯವರು “ತಮ್ಮ ಇದುವರೆಗಿನ ಸೇವೆಯ ದಿನಗಳನ್ನು ನೆನೆಯುತ್ತ ತಾವು ಸೇವೆ ಸಲ್ಲಿಸಿದ ಎಲ್ಲ ತಾಲೂಕುಗಳಲ್ಲಿ ತಮ್ಮ ಸಹೋದ್ಯೋಗಿಗಳು ನೀಡಿದ ಸಹಕಾರವನ್ನು ನೆನಪಿಸಿಕೊಂಡು ಎಲ್ಲರೂ ನನಗೆ ಸಹಕಾರ ನೀಡುವ ಮೂಲಕ ನನ್ನಿಂದ ಕೆಲಸವನ್ನು ಮಾಡಿಸಿದಂತಾಗಿದೆ.ಇದು ನನ್ನೊಬ್ಬನಿಂದ ಆಗಿದೆ ಎನ್ನಲಾರೆ.ದೇವರು ದೈವ ಹಿರಿಯರ ಕೃಪೆ ಮನೆಯಲ್ಲಿ ನನ್ನ ಧರ್ಮಪತ್ನಿಯ ಸಹಕಾರ.ಎಲ್ಲ ಶಿಕ್ಷಕರ ಸಹಕಾರ ನನಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ್ದನ್ನು ಮರೆಯಲಾರೆ. ತಾವೆಲ್ಲರೂ ಇಂದು ಬೀಳ್ಕೊಡುವ ಸಮಾರಂಭವನ್ನು ಇಷ್ಟೊಂದು ಅಚ್ಚುಕಟ್ಟಾಗಿ ಮಾಡಿರುವುದನ್ನು ನೋಡಿದರೆ ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯತೆಗಳು.”ಎಂದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ “ಕರೀಕಟ್ಟಿಯವರದು ಯೋಗಾಯೋಗದ ಕರ್ತವ್ಯದ ಬದುಕು ಅವರು ಬದುಕಿನ ಮೌಲ್ಯಗಳನ್ನು ತಮ್ಮಲ್ಲಿ ಮೈಗೂಡಿಸಿಕೊಂಡು ಕರ್ತವ್ಯ ನಿಷ್ಠೆ ಹೊಂದಿದ ಕಾರಣ ಪ್ರತಿಯೊಂದು ಕೆಲಸವನ್ನು ಉತ್ತಮವಾಗಿ ಮಾಡಿ ಶಿಕ್ಷಕರ ಮನದಾಳದಲ್ಲಿ ಉಳಿದಿರುವರು.ಅವರ ನಿವೃತ್ತ ಬದುಕು ರೈತನಾಗಿ ಮಾಡುವ ಕನಸಿರುವುದನ್ನು ಕಂಡಾಗ ದೇಶದ ಗಡಿಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಯಾಗಿ ನಿವೃತ್ತ ಬದುಕು ರೈತನಾಗಿ ಕಳೆಯುವ ಅವರ ಸಂಕಲ್ಪ ನಿಜಕ್ಕೂ ಅಭಿನಂದನಾರ್ಹ ಅವರ ಬದುಕು ಉತ್ತರೋತ್ತರವಾಗಿ ದೈಹಿಕವಾಗಿ ಅಭಿವೃದ್ದಿ ಹೊಂದಲಿ”ಎಂದು ಹಾರೈಸಿದರು..
ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಮೈತ್ರಾದೇವಿ ವಸ್ತ್ರದ ಮಾತನಾಡಿ “ ತಾಲೂಕಿನ ಎಲ್ಲ ಶಿಕ್ಷಕರ ಸಹಯೋಗದಲ್ಲಿ ಬಿ.ಆರ.ಸಿ.ಹಾಗೂ ಅಕ್ಷರ ದಾಸೋಯ.ದೈಹಿಕ ಶಿಕ್ಷಣ.ಹೀಗೆ ಎಲ್ಲ ವಿಭಾಗಗಳನ್ನು ಒಟ್ಟಿಗೆ ಕರೆದುಕೊಂಡು ಉತ್ತಮ ಚಟುವಟಿಕೆಗಳನ್ನು ಹಮ್ಮಿಕೊಂಡು ಸದಾ ಚಟುವಟಿಕೆಯಿಂದ ಕೂಡಿರುವ ಇವರ ಬದುಕಿನ ಹಿಂದೆ ನಂದಾದೀಪದಂತೆ ಮನೆಯೊಡತಿ ಅವರ ಶ್ರೀಮತಿ ನಂದಾ ಅವರ ಪಾತ್ರವನ್ನು ಕೂಡ ಮಹತ್ವದ್ದು”ಎಂದು ನುಡಿದರು.
“ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಶಿಕ್ಷಕರ ಜನಾನುರಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಇಂದು ನಿವೃತ್ತಿ ಹೊಂದುತ್ತಿರುವ ಕರೀಕಟ್ಟಿಯವರ ನಿವೃತ್ತ ಜೀವನ ಸುಖ ಸಂತೋಷ ನೆಮ್ಮದಿಯಿಂದ ಕೂಡಿರಲಿ.ಅವರು ಸದಾ ಚಟುವಟಿಕೆಯ ಸ್ವಭಾವದವರು.ಅವರು ಎಲ್ಲೆಲ್ಲಿ ಸೇವೆ ಸಲ್ಲಿಸಿರುವರೋ ಅಲ್ಲೆಲ್ಲಾ ತಮ್ಮದೇ ಕೊಡುಗೆಯನ್ನು ನೀಡಿ ಸವದತ್ತಿಯಲ್ಲಿ ಗುರುಭವನದ ಮೂಲಕ ಶಿಕ್ಷಕರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವರು.”ಎಂದು ತಾಲೂಕಿನ ಶಾಸಕರಾದ ವಿಶ್ವಾಸ ವೈದ್ಯ ತಿಳಿಸಿದರು.
ತಾಲೂಕಿನ ಶಾಸಕರಾದ ವಿಶ್ವಾಸ್.ವೈದ್ಯ.ಕೃಷಿ ಇಲಾಖೆಯ ಅಧಿಕಾರಿಗಳಾದ ಸಹದೇವ ಯರಗೊಪ್ಪ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ. ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಮೈತ್ರಾದೇವಿ ವಸ್ತ್ರದ. ಧಾರವಾಡ ಡೈಟ್ ಹಿರಿಯ ಉಪನ್ಯಾಸಕಿ ಡಾ.ರೇಣುಕಾ ಅಮಲಝರಿ.ಶಾಂತಾ ಮೇಟಿ.ವಿಜಯಲಕ್ಷ್ಮೀ ಅರ್ಕಸಾಲಿ.ತಬಸುಮ್.ಪಟ್ಟಣದ.ಅರ್ಪಾತ್ ಹಿರೇಕುಂಬಿ.ಮಂಜಯ್ಯ ಶಿವಳ್ಳಿಮಠ.ಮಂಜುನಾಥ ಅಡವೇರ.ಬಿ.ಇ.ಓ ಅಶೋಕ ಸಿಂದಗಿ. ಆರ್.ಆರ್.ಸದಲಗಿ.ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ಪದಾಧಿಕಾರಿಗಳು. ಗೋಕಾಕ ಬಿ.ಇ.ಓ ಜಿ.ಬಿ.ಬಳಿಗಾರ ನಿಪ್ಪಾಣಿ ಬಿ.ಇ.ಓ ರೇವತಿ ಮಠದ. ಚಿಕ್ಕೋಡಿ ಡಿ.ವೈ.ಪಿ.ಸಿ ಚಿಕ್ಕಮಠ.ಮೂಡಲಗಿ ಬಿ.ಇ.ಓ ಅಜಿತ್.ಮಣ್ಣೀಕೇರಿ. ಹುಬ್ಬಳ್ಳಿ ಬಿ.ಆರ್.ಸಿಯ ಕೆ.ಎಂ.ಗದಗೇರಿ.ಕಿತ್ತೂರು ಬಿ.ಐ.ಇ.ಆರ್.ಟಿ.ಬಿ.ಡಿ.ಕಲಬಾವಿ. ಡಿಡಿಪಿಐ ಬಸವರಾಜ ನಾಲತವಾಡ, ಡಿ.ವೈ.ಪಿ.ಸಿ.ಬಸವರಾಜ.ಮಿಲ್ಲಾನಟ್ಟಿ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಕಿರಣ ಕುರಿ, ನಿವೃತ್ತ ಅಧಿಕಾರಿಗಳಾದ ಡಿ.ಎಮ್. ದಾನೋಜಿ, ವಿನಯಕುಮಾರ ದೇಸಾಯಿ, ಬಿ.ಎನ್. ಪ್ಯಾಟಿ,ಆರ್.ಟಿ.ಬಳಿಗಾರ.ಎಸ್.ಎಲ್.ಭಜಂತ್ರಿ.ಎಂ.ಬಿ.ಬಳಿಗಾರ.ಸೇರಿ ಧಾರವಾಡ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಉಪಾಧ್ಯಕ್ಷರಾದ ಎಸ್.ಡಿ.ಗಂಗಣ್ಣವರ.ಶೇಖರ ಹಲಸಗಿ. ಎಸ್.ಎಫ್.ದೊಡಗೌಡರ.ಡಾ.ಅಭಿನಂದನ.ನಿವೃತ್ತ ಶಿಕ್ಷಕರಾದ ಕಬ್ಬೂರ.ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಯಕುಮಾರ ಹೆಬಳಿ. ಪಿ.ಸಿ.ಸಿದ್ದನಗೌಡರ.ಎಂ.ಎಸ್.ಕೋಳಿ.ಸುರೇಶ ಬೆಳವಡಿ.ಎಚ್.ಆರ್.ಪೆಟ್ಲೂರ್.ಸುಧೀರ.ವಾಘೇರಿ.ಜಿಲ್ಲಾ ಶಿಕ್ಷಣಾಧಿಕಾರಿಗಳು ಅಕ್ಷರ ದಾಸೋಹ ಯೋಜನೆ ಜಿಲ್ಲಾ ಪಂಚಾಯತಿ ಬೆಳಗಾವಿಯ ಲಕ್ಷ್ಮಣರಾವ್ ಯಕ್ಕುಂಡಿ.
ಸೇರಿದಂತೆ ಸವದತ್ತಿ ತಾಲೂಕಿನ ಪ್ರಾಥಮಿಕ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರುಗಳು ಸಹ ಶಿಕ್ಷಕರುಗಳು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಂಜುನಾಥ ಹುದ್ದಾರ ನಿರೂಪಿಸಿದರು. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವ್ಹಿ.ಸಿ.ಹಿರೇಮಠ ವಂದಿಸಿದರು