ಗೆಳೆತನ …
ರಕ್ತ ಸಂಭಂದಗಳನ್ನು ಮೀರಿದ ಬಂಧನ .
ಸುಂದರ ಸವಿ ನೆನಪುಗಳನು ನೆನಪಿಸುವ ಸವಿ ಹೂರಣ.
ಕಷ್ಟ, ಸುಖಗಳನು ಪರಸ್ಪರ ಹೊಂಚಿಕೊಳ್ಳೋ ಮಿಲನ.
ಎಲ್ಲೋ ಹುಟ್ಟಿ ಎಲ್ಲೋ ಬೆಳೆದರೂ
ಒಂದಾಗಿ ಬಾಳೋ ಸಮ್ಮಿಲನ.
ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ
ಕೊಡೊ ಪವಿತ್ರ ಮನಗಳ ತೋರಣ.
ಸೋಲು, ಗೆಲುವುಗಳಿಗೆ ಸಾಂತ್ವನ ಹೇಳೋ ಹೂಬನ.
ನೈಜ ಸ್ನೇಹ ಚಿರಂಜೀವಿ ಎಂದು
ತೋರಿಸೋ ಮೈದಾನ..
ಇದೋ ನಾನರ್ಪಿಸುವೆ ನನ್ನೆಲ್ಲ
ಪವಿತ್ರ ಮನಸಿನ ಸ್ನೇಹಿತರಿಗೆ
ಹೃನ್ಮನದ ನನ್ನೀ ಕವನ 🌹.
ಶ್ರೀಮತಿ ಉಮಾದೇವಿ. ಯು. ತೋಟಗಿ. ಸ ಶಿ. ಸ. ಕ. ಹಿ. ಪ್ರಾ. ಶಾ. ರಾಮಪುರ ತಾ : ಸವದತ್ತಿ :ಜಿ :ಬೆಳಗಾವಿ.