ರೀಲ್ಸ್ ರೀಲ್ಸ್ ರೀಲ್ಸ್
ಅರೆರೇ ಜsರಾ ಸುನಲೋ ಬಚ್ಚೋ
ರೀಲ್ಸ್ ಮಾಡುವುದೆಂತಹ ಹುಚ್ಚೋ
ಪ್ರಾಣಕ್ಕಿಂತ ಅದುವೇ ಹೆಚ್ಚೋ??
ಎಲ್ಲಿ ನೋಡಿದರೂ ರೀಲ್ಸ್ ರೀಲ್ಸ್
ಬಯಸುತ್ತಾರೆ ಬರೀ ಲೈಕ್ಸ ಲೈಕ್ಸ್
ಮೈ ಮರೆತರೆ ಓ ಗಾಡ್ ನಾನ್ಸೆನ್ಸ್
ರೀಲ್ಸ್ ಮಾಡಲು ಮಿತಿಯೇ ಇಲ್ಲ
ವಯಸ್ಸಿನ ಅರಿವು ಮೊದಲೇ ಇಲ್ಲ
ಜೀವದ ಪರಿಯೂ ಇಲ್ಲವೇ ಇಲ್ಲ
ನೋಡಿ ಸಂಭ್ರಮಿಸು ಪ್ರಕೃತಿಯನ್ನು
ತೋರದಿರಿ ನಿಮ್ಮಯ ವಿಕೃತಿಯನ್ನು
ಸಾಧ್ಯವಾದರೆ ಕೈಗೊಳ್ಳಿ ಸುಕೃತಿಯನ್ನು
ಅವಘಡ ಎಂದೂ ಅಲ್ಲ ನಿರೀಕ್ಷಿತ
ಇರಬೇಕೂ ನಾವ್ ಪ್ರತಿಕ್ಷಣ ಜಾಗೃತ
ಮೈಯ ಮರೆಯದಿರೆ ನಾವು ಸುರಕ್ಷಿತ
ಕೊಂಚ ಯೋಚಿಸು ನೀನೂ ಮನವೇ
ನೀನು ಮಾಡುವುದು ಎಲ್ಲವು ಸರಿಯೇ
ನೀನೇ ಇಲ್ಲದಿರೆ ಇದೆಲ್ಲವೂ ಏಕೆ?
ಕುಟುಂಬ ಕಾದಿದೆ ನಿಮಗಾಗಿಲ್ಲಿ
ಪ್ರಜ್ಞೆಯು ಇರಲಿ ಸಂಚಾರದಲ್ಲಿ
ಸಂತಸ ತುಂಬಿರಿ ಸಂಸಾರದಲ್ಲಿ
ಮೋಜಿಗಾಗಿ ನೀವ್ ಮಾಡಿರೆ ರೀಲ್ಸ್
ನಿಮಗಿರಲಿ ಜವಾಬ್ದಾರಿ ಫೂಲ್ಸ್
ಆದರೂ ಇರಲಿ ಕೆಲವು ರೂಲ್ಸ್
ಪ್ರಾಣಕ್ಕಿಂತ ರೀಲ್ಸ್ ಮುಖ್ಯವೇ?
ಸ್ನೇಹಕ್ಕಿಂತ ಲೈಕ್ಸ್ ಮುಖ್ಯವೇ??
ಸಂಭ್ರಮಕ್ಕಿಂತ ರೀಲ್ಸ್ ಸೌಖ್ಯವೇ?
ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ
ಬಿ ಆರ್ ಪಿ ಚನ್ನಮ್ಮನ ಕಿತ್ತೂರು