ಚಂದ್ರಯಾನ
—
ಜೈ ಜವಾನ್
ಜೈ ಕಿಸಾನ್
ಜೈ ವಿಜ್ಞಾನ
ಅಂದಿನ ವೇಗ
ಗಮನವಿಟ್ಟು ನೋಡಿ
ದಾರಿ ಉದ್ದಕೂ ಹೊತ್ತೊಯ್ದಿತ್ತು
ಅದೇ ಸೈಕಲ್ ಗಾಡಿ
ಉಪಗ್ರಹ ಆರ್ಯಭಟ!
ಇಂದಿನ ವೇಗ
ಭಾರತ ವಿಜ್ಞಾನ
ಬೆಕ್ಕಸ ಬೆರಗಾಗಿ ನಾವು
ಸಾಗಿ ಬಂದ ದಾರಿ
ದೂರ ಬಲು ದೂರ
ಏರಿತು ಹಾರಿತು
ಆಕಾಶಕೆ ನಬೋ ಮಂಡಲಕೆ
ಕಣ್ಣಿಗೂ ನಿಲುಕದೆ
ಚಿಮ್ಮಿತು ಹೊಮ್ಮಿತು ನೌಕೆ
ನೂರು ಕೋಟಿಗು
ಅಧಿಕ ಸದಾಶಯಗಳನ್ನು ಹೊತ್ತು
ನಮ್ಮೀ ಹೆಮ್ಮೆಯ
ಚಂದ್ರಯಾನ-ಮೂರು!
———
ಅಮರ್ಜಾ
ಅಮರೇಗೌಡ ಪಾಟೀಲ
ಬುಬನ, ಕುಷ್ಟಗಿ.
14.07.2023