ಇವರಿಗೆ
ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರು ಮಾನ್ಯ ಮುಖ್ಯಮಂತ್ರಿರವರು ಕರ್ನಾಟಕ ಸರ್ಕಾರ ಹಾಗೂ
ಸನ್ಮಾನ್ಯ ಮಧು ಬಂಗಾರಪ್ಪ ರವರು ಪ್ರಾಥಮಿಕ & ಪ್ರೌಢ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ..
ಮಾನ್ಯರೆ..
ವಿಷಯ. ಕ್ಷೇತ್ರ ಶಿಕ್ಷಣಾಧಿಕಾರಿ & ಉಪ ನಿರ್ದೇಶಕರು ತಸ್ತಮಾನ ಹುದ್ದೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಅವಧಿ ಪೂರ್ಣ ವರ್ಗಾವಣೆ ಮಾಡಿರುವ ಸಂದರ್ಭದಲ್ಲಿ KAT & ಹೈ ಕೋರ್ಟ್. ನ್ಯಾಯಾಲಯಕ್ಕೆ ದಾವೆ ಮೂಲಕ ಅವಧಿ ಪೂರ್ಣ ವರ್ಗಾವಣೆ ಯನ್ನು ರದ್ದುಪಡಿಸಿ ಮೂಲ ಸ್ಥಳ ಕ್ಕೆ ಕರ್ತವ್ಯ ಕ್ಕೆ ಹಾಜರಾಗಲು ನ್ಯಾಯಾಲಯ ಅನುಮತಿ ನೀಡಿರುವ ಆದೇಶ ಗಳನ್ನು ಮಾನ್ಯ ಕಾರ್ಯದರ್ಶಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕಾರ್ಯದರ್ಶಿ ರವರು ಕರ್ನಾಟಕ ಸರ್ಕಾರ ಬೆಂಗಳೂರು..
ಸನ್ಮಾನ್ಯರೆ..
ಈ ಮೇಲ್ಕಂಡ ವಿಷಯ ಕ್ಕೆ ಸಂಭವಿಸಿದಂತೆ
ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿ & ಮಾನ್ಯ ಉಪ ನಿರ್ದೇಶಕರು
ತಸ್ತ ಮಾನ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಮೇಲ್ಕಂಡ ಪ್ರಾಮಾಣಿಕ ಅಧಿಕಾರಿಗಳನ್ನು ಅವಧಿ ಪೂರ್ಣ ವರ್ಗಾವಣೆ ಮಾಡಿರುವ ಸಂದರ್ಭದಲ್ಲಿ K.A.T ನ್ಯಾಯಾಲಯ ಮತ್ತು
ಹೈ.ಕೋರ್ಟ್ ನ್ಯಾಯಾಲಯ ಕ್ಕೆ ಅರ್ಜಿ ಸಲ್ಲಿಸಿರುವ ಸಂದರ್ಭದಲ್ಲಿ ಅವಧಿ ಪೂರ್ಣ ವರ್ಗಾವಣೆಯನ್ನು ಸರ್ಕಾರ ಮಾಡಿರುವುದನ್ನು ಪರಿಶೀಲನೆ ಮಾಡಿ ನ್ಯಾಯ ಸಮ್ಮತ ವಾದ ತೀರ್ಪುನ್ನು ನೀಡಿರುತ್ತಾರೆ. ಇಂತಹ ಪ್ರಕರಣಗಳನ್ನು ಮರು ಆದೇಶ ಜಾರಿ ಮಾಡಿ ಮೊದಲು ಕರ್ತವ್ಯ ನಿರ್ವಹಿಸುತ್ತಿರುವ ಮೂಲ ಸ್ಥಳಕ್ಕೆ ಆದೇಶ ಜಾರಿ ಮಾಡುವುದನ್ನು ಮಾನ್ಯ ಕಾರ್ಯದರ್ಶಿ ರವರು ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆ ರವರು ಮತ್ತು ಅಧಿಕಾರಿ ನೌಕರವೃಂದ ಕಳೆದ 2020..2021.2021.2022 ನೇ ಸಾಲಿನ ಅವಧಿಯಲ್ಲಿ ನ್ಯಾಯಾಲಯ ತೀರ್ಪು ಮಾಡಿರುವ ಆದೇಶವನ್ನು ಗೌಪ್ಯತೆ ಯೊಂದಿಗೆ ಸಂಬಂಧ ಪಟ್ಟ ತಾಲ್ಲೂಕು. ಜಿಲ್ಲೆ ಯ ಮಾನ್ಯ ಶಾಸಕರ ಒತ್ತಡ ಏರಿಕೆ ಅನ್ವಯ K.A.T ಮತ್ತು ಹೈ ಕೋರ್ಟ್ ಆದೇಶ ಜಾರಿ ಮಾಡಿರುವ ಆದೇಶದಂತೆ ಮಾನ್ಯ ಕಾರ್ಯದರ್ಶಿರವರು ಹಾಗೂ ಅಧಿಕಾರಿ ನೌಕರರ ವೃಂದ ಆದೇಶ ಜಾರಿ ಮಾಡದೆ ಈ ಅವಧಿಯಲ್ಲಿ ಇದ್ದಂತ ಕಾರ್ಯದರ್ಶಿರವರು ಮತ್ತು ಹಿರಿಯ ಅಧಿಕಾರಿ ರವರು ಮತ್ತು
ಅದೀನ ಕಾರ್ಯದರ್ಶಿ ರವರು ಶಾಸಕರ ಶಿಫಾರಸ್ಸು ಮೂಲಕ ಹೊಸದಾಗಿ ಈ ಕೆಳಕಂಡ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿ.
ಮಾನ್ಯ ಉಪ ನಿರ್ದೇಶಕರನ್ನು ಹೊಸ ಆದೇಶ ಜಾರಿ ಮಾಡುವುದರ ಮೂಲಕ ಅವಧಿ ಪೂರ್ಣ ವರ್ಗಾವಣೆಯ ಅನ್ಯಾಯವನ್ನು ಸರಿಪಡಿಸಿ ದಕ್ಷ ಪ್ರಾಮಾಣಿಕ ಅಧಿಕಾರಿ ಗಳಿಗೆ ಮೂಲ ಸ್ಥಳಕ್ಕೆ ಹಾಜರಾಗಲು ಆದೇಶ ಜಾರಿ ಮಾಡದೆ ನ್ಯಾಯಾಲಯವು ಸಂವಿಧನದಲ್ಲಿ ನೀತಿ ನಿಯಮನುಸಾರ ಅವಕಾಶ ಕಲ್ಪಿಸಿ ಕೊಟ್ಟಿರುವುದನ್ನು ಅಸಡ್ಡೆ ತೋರಿಸುವುದರ ಮೂಲಕ ಅನ್ಯಾಯ ಮಾಡಿರುವುದು ಅನೇಕ ಪ್ರಕರಣಗಳು ಬೆಳಕಿಗೆ ಬಂದಿರುತ್ತದೆ ಆದ್ದರಿಂದ ಸದರಿ ಈ ಕೆಳಕಂಡ 2020.2021…&2021.2022. & 2022.2023ನೇ ಸಾಲಿನಲ್ಲಿ K.A.T
ಮತ್ತು ಹೈಕೋರ್ಟ್ ತೀರ್ಪಿನ ಆದೇಶವನ್ನು ನ್ಯಾಯಾಲಯ ಮೂಲಕ & ವಕೀಲರ ಮೂಲಕ ಜಾರಿ ಮಾಡಿರುವುದನ್ನು ಇನ್ನಾದರೂ ಸಂಪೂರ್ಣ ಮರು ಪರಿಶೀಲನೆ ಮಾಡುವುದರ ಮೂಲಕ ಸನ್ಮಾನ್ಯ ಮುಖ್ಯ ಮಂತ್ರಿ ಸಾಹೇಬರು ಕರ್ನಾಟಕ ಸರ್ಕಾರ ಮತ್ತು ಸನ್ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರು ರವರು
ಮಾನ್ಯ ಕಾರ್ಯದರ್ಶಿ ರವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ರವರಿಗೆ ಈ ಮೇಲ್ಕಂಡ ವಿಷಯ ಮತ್ತು ಮಾಹಿತಿ ಯನ್ನು ತಕ್ಷಣ ಕಡತ ಗಳನ್ನು ಪರಿಶೀಲನೆ ಮಾಡಿಸಿ ಕಂಟೆಕ್ಟ್ ಆಫ್ ಕೋರ್ಟ್ ಗೆ ಅವಕಾಶ ನೀಡದೆ ಅವಧಿ ಪೂರ್ಣ ವರ್ಗಾವಣೆ ಮಾಡಿರುವ ಆದೇಶಗಳನ್ನು K.A.T ನ್ಯಾಯಾಲಯ ಮತ್ತು
ಹೈ ಕೋರ್ಟ್ ನ್ಯಾಯಾಲಯ ಆದೇಶ ಜಾರಿ ಮಾಡಿರುವಂತೆ ಮರು ಆದೇಶ ಜಾರಿ ಮಾಡಿ ಮೂಲ ಸ್ಥಳ ಗಳಿಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಮಾನ್ಯ ಉಪ ನಿರ್ದೇಶಕರನ್ನು ತಕ್ಷಣ ಆದೇಶ ಜಾರಿ ಮಾಡಿಸಿಕೊಟ್ಟು ನ್ಯಾಯಾಲಯ ತೀರ್ಪು.ಮತ್ತು ಸಂವಿದಾನ ಚೌಕಟ್ಟಿ ಗೆ ಬೆಲೆ ನೀಡಲು ಈ ಮೂಲಕ ಸನ್ಮಾನ್ಯ ಮುಖ್ಯ ಮಂತ್ರಿ ಸಾಹೇಬರನ್ನು ಹಾಗೂ ಸನ್ಮಾನ್ಯ ಮಧು ಬಂಗಾರಪ್ಪ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ನ್ಯಾಯ ದೊರಕಿಸಿಕೊಡಲು ಈ ಮೂಲಕ ತಮ್ಮಲ್ಲಿ ಕೋರುತ್ತಿದ್ದೇನೆ..
ಗೌರವ ವಂದನೆಗಳೊಂದಿಗೆ
ಇಂತಿ ತಮ್ಮ ನಂಬುಗೆಯ
J. M.ರಾಜಶೇಖರ್
ಮಾಹಿತಿ ದರ್ಬಾರ್
ಸಾಮಾಜಿಕ ಕಾರ್ಯ ಕರ್ತರು R.T.I
& ಜರ್ನಲಿಸ್ಟ್
ರಾಣಿ ಬೆನ್ನೂರು.ಹಾವೇರಿ ಜಿಲ್ಲೆ..