ಶಿಕ್ಷಣ ಇಲಾಖೆಯ ಜಿಲ್ಲಾ ಅಭಿವೃದ್ಧಿ
ಡಿ.ಡಿ.ಪಿ.ಐ. ಆಗಿ ಜಯಶ್ರೀ ಕಾರೇಕರ
ಧಾರವಾಡ: ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಅಭಿವೃದ್ಧಿ ಡಿ.ಡಿ.ಪಿ.ಐ. ಹಾಗೂ ಇಲ್ಲಿಯ ಪ್ರತಿಷ್ಠಿತ ಡಯಟ್ ನೂತನ ಪ್ರಾಚಾರ್ಯರಾಗಿ ಹಿರಿಯ ಕೆ.ಇ.ಎಸ್. ಅಧಿಕಾರಿ ಜಯಶ್ರೀ ಕಾರೇಕರ ಗುರುವಾರ ಅಧಿಕಾರ ಸ್ವೀಕರಿಸಿದರು.
1994ರಲ್ಲಿ ಕೆ.ಇ.ಎಸ್. ತೇರ್ಗಡೆ ಹೊಂದಿ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಶೇಷಗಿರಿ ಸರಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿಯಾಗಿ, 1997ರಲ್ಲಿ ನಗರದ ಡಯಟ್ ಉಪನ್ಯಾಸಕಿಯಾಗಿ, 2003ರಲ್ಲಿ ಮತ್ತೆ ಕಲಘಟಗಿ ತಾಲೂಕು ಹಿರೇಹೊನ್ನಳ್ಳಿ ಸರಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕಿಯಾದರು. ಪದೋನ್ನತಿ ಹೊಂದಿ ಮರಳಿ ಇದೇ ಡಯಟ್ದಲ್ಲಿ ಹಿರಿಯ ಉಪನ್ಯಾಸಕಿಯಾಗಿದ್ದರು. ಕಳೆದ ವರ್ಷ ಡಿ.ಡಿ.ಪಿ.ಐ. ಹುದ್ದೆಗೆ ಪದೋನ್ನತಿ ಹೊಂದಿದ್ದ ಇವರು, ನಿಕಟಪೂರ್ವದಲ್ಲಿ ಹಾವೇರಿ ಡಯಟ್ ಪ್ರಾಚಾರ್ಯರಾಗಿದ್ದರು.
ಹುದ್ದೆಯ ಸ್ಥಾನಬಲದಿಂದ ಕನ್ನಡ ಪತ್ರಿಕೋದ್ಯಮದ ಹಿರಿಯ ನಿಯತಕಾಲಿಕ ‘ಜೀವನ ಶಿಕ್ಷಣ’ ಮಾಸಪತ್ರಿಕೆ ಹಾಗೂ ‘ಶಿಕ್ಷಣ ಸಂಪದ’ ತ್ರೆಮಾಸಿಕ ಪತ್ರಿಕೆಗಳ ಪ್ರಧಾನ ಸಂಪಾದಕ, ಡೆಪ್ಯೂಟಿ ಚೆನ್ನಬಸಪ್ಪ ಪ್ರ್ರಾಥಮಿಕ ಶಿಕ್ಷಣ ಪ್ರತಿಷ್ಠಾನದ ಕಾರ್ಯಾಧ್ಯಕ್ಷ, ಡಾ. ಎಚ್. ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿಯೂ ಆಗಿರುತ್ತಾರೆ. ಜಿಲ್ಲೆಯ ವಿವಿಧ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಡಯಟ್ ಸಿಬ್ಬಂದಿ ಜಯಶ್ರೀ ಕಾರೇಕರ ಅವರನ್ನು ಅಭಿನಂದಿಸಿದರು.