ಭಾರತ ರತ್ನ ಇವರು.
1999ರ ಮೆ ತಿಂಗಳು ಕಾರ್ಗಿಲ್ ಕದನದ ಹೊತ್ತು.
ಭಾರತೀಯ ಸೈನಿಕರಿಗೆ ಉತ್ಸಾಹ ತುಂಬಿತ್ತು.
ದೇಶಪ್ರೇಮಿ ಸೈನಿಕನ ಮನಸ್ಸು ಪ್ರಾಣದ ಹಂಗು ತೊರೆದಿತ್ತು.
ಮಡಿದರೆ ವೀರಮರಣ ಗೆದ್ದರೆ ತಾಯಿಯ ಆಶೀರ್ವಾದವೆಂದಿತ್ತು.
ನಾಲ್ಕೈದು ಸಾವಿರ ಅಡಿಗಳ ಎತ್ತರದ
ಹೋರಾಟ ಆಗಿತ್ತು.
ದೇಶಾಭಿಮಾನದ ಕೆಚ್ಚು ಅವರೆದೆಯಲ್ಲಿ ಉಕ್ಕುತ್ತಿತ್ತು.
ಶತೃಪಡೆ ನಿರ್ನಾಮ ಮಾಡಿ
ನಮ್ಮ ಭೂಮಿ ಮರಳಿ
ಪಡೆಯುವ ಮನಸ್ಥಿತಿ
ಅವರದಾಗಿತ್ತು
ಭೋಫೋರ್ಶ, ಫಿರಂಗಿಗಳ
ಬಾಂಬ್ ದಾಳಿ ಇದಾಗಿತ್ತು.
ಪಾಕಿಸ್ತಾನಿ ಬದ್ದ ವೈರಿಗಳ ಎದೆಯಲ್ಲಿ
ನಡುಕ ಹುಟ್ಟಿಸುವಂತಿತ್ತು.
ನೌಕಾದಳ, ವಾಯುದಳ, ಭೂಸೇನೆ
ಕಾರ್ಗಿಲ್ ಮರಳಿ ಪಡೆಯುವ
ಸಾಹಸಕ್ಕೆ ಕಟಿಬದ್ಧವಾಗಿತ್ತು.
ಕಾರ್ಗಿಲ್ ಪ್ರದೇಶದ ಒಂದೊಂದೇ ಪರ್ವತ ಶ್ರೇಣಿಗಳು ಭಾರತದ
ವಶವಾಗಿತ್ತು.
ಭಾರತೀಯ ಸೈನಿಕರ ಶಕ್ತಿ, ಯುಕ್ತಿ,
ಪರಾಕ್ರಮಕ್ಕೆ ಪಾಕ್ ತತ್ತರಿಸಿಹೋಗಿೆತ್ತು.
ವೀರ ಪುತ್ರರ ಹೋರಾಟದಿಂದ
ಕಾರ್ಗಿಲ್ ಮೇಲೆ ನಮ್ಮ
ಅಂದದ ದ್ವಜ ಹಾರಾಡಿತ್ತು.
ಭಾರತೀಯ ಯೋಧರು ಶತ್ರುಗಳಿಗೆ ಬೆನ್ನು ತೋರಿಸಿ ಹೋಗುವವರ ಲ್ಲ
ಹೋರಾಟದ ಗಟ್ಟಿ ಮನಸ್ಸಿನ ಜಗಜಟ್ಟಿ ಗಳು ಎಂದು ಸಾಬೀತಾಗಿತ್ತು.
ಭಾರತದ ಪ್ರತಿ ಮನೆ ಮನಗಳಲ್ಲಿ
ಕಾರ್ಗಿಲ್ ಯೋಧರ ನೆನಪು ಹಸಿರಾಗಿತ್ತು.ಅಜರಾಮರವಾಗಿತ್ತು.
ಎಲ್ಲ ಕಾರ್ಗಿಲ್ ಯೋಧರಿಗೆ
ನನ್ನ ಹೆಮ್ಮೆಯ ನಮನಗಳು..
ಉಮಾದೇವಿ. ಯು. ತೋಟ ಗಿ .
ಬೈಲ ಹೊಂಗಲ.