ಕಡಿತಗೊಳಿಸಿರುವ ಮಧ್ಯಂತರ-ದಸರಾ ರಜೆ ವಿಸ್ತರಿಸಲು ಗ್ರಾಮೀಣ ಶಿಕ್ಷಕರ ಸಂಘ ಆಗ್ರಹ..
ಬೆಂಗಳೂರು:
ಶಾಲಾ ಶಿಕ್ಷಣ ಇಲಾಖೆಯು ರಜಾಸಹಿತ ಬೋಧಕ ಇಲಾಖೆಯಾಗಿರುತ್ತದೆ.ಆದರೆ ಹಲವು ವರ್ಷಗಳಿಂದ ಮಧ್ಯಂತರ – ದಸರಾ ರಜಾ ಅವಧಿ ಕಡಿತಗೊಳಿಸಲಾಗುತ್ತಿದೆ. ಆದರೆ ಗಳಿಕೆ ರಜೆ ಮಾತ್ರ ಹತ್ತು ಇವೆ.ಕಾರಣ ಈ ಹಿಂದಿನಂತೆ ಮಧ್ಯಂತರ ರಜೆಯನ್ನು 3-10-2023 ರಿಂದ 31-10-2023 ರವರೆಗೆ ವಿಸ್ತರಿಸಿ ಆದೇಶಿಸಬೇಕು.ಈ ಕುರಿತು ಘನ ಇಲಾಖೆಗೆ ದಿನಾಂಕ 22-10-2022 ರಂದು ಮನವಿ ಮಾಡಲಾಗಿತ್ತು.ಆ ಸಂದರ್ಭದಲ್ಲಿ ಮೌಖಿಕವಾಗಿ ನಮ್ಮೆಲ್ಲ ಸಂಘಟನೆಗಳಿಗೆ ಈ ವರ್ಷ ಮಾತ್ರ ಕಡಿತಗೊಳಿಸಿದ್ದೇವೆ ಮುಂದಿನ ವರ್ಷ ಮೊದಲಿನಂತೆ ತಮಗೆ ರಜೆ ವಿಸ್ತರಿಸಿ ಆದೇಶಿಸಲಾಗುವುದುದು ಎಂದು ಹೇಳಲಾಗಿತ್ತು.ಆದರೆ ಈಗ ಕೊಟ್ಟ ಭರವಸೆ ಸುಳ್ಳಾಗಿ ಕಡಿತಗೊಳಿಸಿದ ರಜೆಯ ಆದೇಶವನ್ನು 2023-2024 ಶೈಕ್ಷಣಿಕ ವರ್ಷದಲ್ಲಿಯೂ ಮುಂದುವರಿಸಲಾಗಿದೆ.ಆದ ಕಾರಣ ತಾವುಗಳು ಆದೇಶ ಪುನರ್ ಪರಿಶೀಲಿಸಿ ಮರು ಆದೇಶಿಸಬೇಕೆಂದು ಆಯುಕ್ತರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರಿಗೆ ಸೂಕ್ತ ನಿರ್ದೇಶನ ನೀಡಿ ಶಿಫಾರಸ್ಸು ಮಾಡುವಂತೆ ಮುಖ್ಯ ಮಂತ್ರಿಗಳವರಿಗೆ ಪ್ರಾಥಮಿಕ ಹಾಗೂ ಶಿಕ್ಷಣ ಸಚಿವರಿಗೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ. ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ .ಸಿ.ಉಪ್ಪಿನ ರಾಜ್ಯದ ಸಮಸ್ತ ಶಿಕ್ಷಕರ ವತಿಯಿಂದ ಪತ್ರ ಬರೆದು ಆಗ್ರಹಿಸಿದ್ದಾರೆ.
ಗೌರವಾಧ್ಯಕ್ಷರ ಎಲ್.ಆಯ್.ಲಕ್ಕಮ್ಮನವರ ಕಾರ್ಯಾಧ್ಯಕ್ಷರಾದ ಶರಣಪ್ಪಗೌಡ್ರ ಆರ್.ಕೆ.ಎಮ್.ವಿ.ಕುಸುಮಾ.ಸಲಹಾ ಸಮಿತಿ ಅಧ್ಯಕ್ಷರಾದ ಗೋವಿಂದ ಜುಜಾರೆ ಹೋರಾಟ ಸಮಿತಿ ಅಧ್ಯಕ್ಷರಾದ ಸಿದ್ದು ಉಕ್ಕಲಿ ಶಿಸ್ತು ಸಮಿತಿ ಅಧ್ಯಕ್ಷರಾದ ಹನುಮಂತಪ್ಪ ಮೇಟಿ ಉಪಾಧ್ಯಕ್ಷರಾದ ನಾಗರಾಜು ಕೆ. ಮಲ್ಲಿಕಾರ್ಜುನಯ್ಯ.ಎಮ್.ಆರ್ ಅಶೋಕ.ಬಿಸೆರೊಟ್ಟಿ.ಧರ್ಮಣ್ಣ.ಭಜಂತ್ರಿ.ಆರ್.ಎಮ್.ಕಮ್ಮಾರ ಮುಂತಾದವರು ಆಗ್ರಹಿಸಿದ್ದಾರೆ.