ಸಮಷ್ಟಿ ಪ್ರಜ್ಞೆಯ ಶ್ರೇಷ್ಠ ಶಿಕ್ಷಣ ಸಂತ ಡಾ.ಕಟ್ಟಿಮನಿ’
ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆ ಸಂಸ್ಥಾಪಕರಲ್ಲಿ ಒಬ್ಬರಾದ ಡಾ. ಎಚ್.ಎಫ್. ಕಟ್ಟಿಮನಿ 137ನೇ ಜಯಂತಿ
ಹುಬ್ಬಳ್ಳಿ : ಈಗ್ಗೆ ನೂರು ವರ್ಷಗಳ ಹಿಂದೆಯೇ ‘ಎಲ್ಲರಿಗೂ ಶಿಕ್ಷಣ’ ಪ್ರಾಪ್ತವಾಗಬೇಕೆಂಬ ಬದ್ಧತೆಯಲ್ಲಿ ಅವಿಶ್ರಾಂತವಾಗಿ ಶ್ರಮಿಸಿರುವ ಸಮಷ್ಟಿ ಪ್ರಜ್ಞೆಯ ಶ್ರೇಷ್ಠ ಶಿಕ್ಷಣ ಸಂತ ಡಾ. ಎಚ್. ಎಫ್. ಕಟ್ಟಿಮನಿ ಎಂದು ಡೆಪ್ಯೂಟಿ ಚೆನ್ನಬಸಪ್ಪ ಕನ್ನಡ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಡಾ. ಗುರುಮೂರ್ತಿ ಯರಗಂಬಳಿಮಠ ಪ್ರತಿಪಾದಿಸಿದರು.
ಅವರು ಮಂಗಳವಾರ ನಗರದ ಎಚ್.ಎಫ್. ಕಟ್ಟಿಮನಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ಎಚ್.ಎಫ್. ಕಟ್ಟಿಮನಿ ಅವರ 137ನೇ ಜಯಂತಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ವಿದ್ಯಾ ವಿಕಾಸದ ನಿರ್ದಿಷ್ಟ ಯೋಜನೆ-ಯೋಚನೆ ಹೊಂದಿದ್ದ ಡಾ. ಕಟ್ಟಿಮನಿ ಅವರು ವೈಯಕ್ತಿಕ ಸುಖ-ಸಂತೋಷಗಳನ್ನು ತೊರೆದು ಕರ್ನಾಟಕ ಮತ್ತು ಮಹಾರಾಷ್ಟç ರಾಜ್ಯಗಳನ್ನು ಸುತ್ತಿ ಜನಮನಗಳನ್ನು ಗೆದ್ದು ಎಲ್ಲೆಡೆ ಹೆಚ್ಚೆಚ್ಚು ಶಾಲಾ-ಕಾಲೇಜು ಹಾಗೂ ವಾಚನಾಲಯ ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ದೂರದೃಷ್ಟಿಯ ನೆಲೆಯಲ್ಲಿ ಡಾ. ಎಚ್.ಎಫ್. ಕಟ್ಟಿಮನಿ ಸೇರಿದಂತೆ 7 ಜನ ಮಹನೀಯರು 1916ರಲ್ಲಿ ಸ್ಥಾಪನೆ ಮಾಡಿರುವ ಬೆಳಗಾವಿಯ ಕೆ.ಎಲ್.ಇ. ಸಂಸ್ಥೆ ಕೋಟ್ಯಾಂತರ ವಿದ್ಯಾರ್ಥಿಗಳಿಗೆ ಅಕ್ಷರದ ಬೆಳಕು ತುಂಬಿದೆ. ಸ್ವಾತಂತ್ರ್ಯಪೂರ್ವ ಮತ್ತು ನಂತರ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಸೊಲ್ಲಾಪೂರ, ಬಾಗಲಕೋಟ, ಬೆಂಗಳೂರು, ಗದಗ, ಶಿರಹಟ್ಟಿಗಳಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಶ್ರಮಿಸಿದ ಕೀರ್ತಿ ಡಾ.ಕಟ್ಟಿಮನಿ ಅವರದು ಎಂದೂ ಹೇಳಿದರು.
ಡಾ. ಕಟ್ಟಿಮನಿ ಜನಪ್ರಿಯತೆ :ಮುಂಬೈ ಸರಕಾರದ ಸಂದರ್ಭದಲ್ಲಿ ಹಾಗೂ ಮೈಸೂರು ರಾಜ್ಯದ ಸಂದರ್ಭದಲ್ಲಿ ಒಟ್ಟು 3 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧ ಆಯ್ಕೆ ಆಗಿದ್ದು ಡಾ.ಕಟ್ಟಿಮನಿ ಅವರ ವ್ಯಾಪಕ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದೂ ಡಾ. ಯರಗಂಬಳಿಮಠ ಹೇಳಿದರು.
ಶಾಲಾ ಆಡಳಿತ ಮಂಡಳಿಯ ಸದಸ್ಯ ಜಿ.ಐ. ಬಿಜಾಪೂರ ಅಧ್ಯಕ್ಷತೆವಹಿಸಿದ್ದರು. ಇನ್ನೋರ್ವ ಆಡಳಿತ ಮಂಡಳಿ ಸದಸ್ಯ ಎಂ.ಬಿ. ಕರಡಿ, ಜೆ.ಜಿ. ಶಿಕ್ಷಕರ ತರಬೇತಿ ಕಾಲೇಜು ಪ್ರಾಚಾರ್ಯ ಬಿ.ಬಿ. ನಾಯಕ ಹಾಗೂ ಡಾ. ಕಟ್ಟಿಮನಿ ಅವರ ಮೊಮ್ಮಗ ಚೆನ್ನವೀರಸ್ವಾಮಿ ಅಲ್ಲಯ್ಯನವರಮಠ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಾದ ಜೀವನ ಕನವಳ್ಳಿ, ಪ್ರಿಯಾ ತುರಿಹಾಳ ಹಾಗೂ ಪ್ರೌಢ ಶಾಲಾ ಮುಖ್ಯಾಧ್ಯಾಪಕಿ ಎಲ್.ಜಿ. ಗಾಣಿಗೇರ ಮಾತನಾಡಿದರು. ಮುಖ್ಯಾಧ್ಯಾಪಕ ಆರ್.ಆರ್. ಶಿರೂರ ಸ್ವಾಗತಿಸಿದರು. ಶಶಿಕಲಾ ಬರದ್ವಾಡ ನಿರೂಪಿಸಿದರು. ಶಶಿಕಲಾ ದಳವಾಯಿ ವಂದಿಸಿದರು. ಗಂಗಮ್ಮ ವಸ್ತ್ರದ, ಸುಜಾತಾ ಸವದತ್ತಿ ಇತರರು ಇದ್ದರು. ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಹುಬ್ಬಳ್ಳಿಯ ಎಚ್.ಎಫ್. ಕಟ್ಟಿಮನಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಣ ತಜ್ಞ ಡಾ.ಎಚ್.ಎಫ್. ಕಟ್ಟಿಮನಿ ಅವರ 137ನೇ ಜಯಂತಿ ಸಮಾರಂಭವನ್ನು ಡೆಪ್ಯೂಟಿ ಚೆನ್ನಬಸಪ್ಪ ಕನ್ನಡ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಡಾ. ಗುರುಮೂರ್ತಿ ಯರಗಂಬಳಿಮಠ ಉದ್ಘಾಟಿಸಿದರು. ಜಿ.ಐ. ಬಿಜಾಪೂರ, ಎಂ.ಬಿ. ಕರಡಿ, ಬಿ.ಬಿ. ನಾಯಕ, ಲಕ್ಷ್ಮವ್ವ ಗಾಣಿಗೇರ, ಚೆನ್ನವೀರಸ್ವಾಮಿ ಅಲ್ಲಯ್ಯನವರಮಠ, ಆರ್.ಆರ್. ಶಿರೂರ ಇದ್ದರು.
ಹುಬ್ಬಳ್ಳಿಯ ಎಚ್.ಎಫ್. ಕಟ್ಟಿಮನಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಣ ತಜ್ಞ ಡಾ.ಎಚ್.ಎಫ್. ಕಟ್ಟಿಮನಿ ಅವರ 137ನೇ ಜಯಂತಿ ಸಮಾರಂಭದಲ್ಲಿ ಡೆಪ್ಯೂಟಿ ಚೆನ್ನಬಸಪ್ಪ ಕನ್ನಡ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಡಾ. ಗುರುಮೂರ್ತಿ ಯರಗಂಬಳಿಮಠ ಮುಖ್ಯ ಅತಿಥಿಯಾಗಿ ಮಾತನಾಡಿದರು. ಜಿ.ಐ. ಬಿಜಾಪೂರ, ಎಂ.ಬಿ. ಕರಡಿ, ಬಿ.ಬಿ. ನಾಯಕ, ಲಕ್ಷ್ಮವ್ವ ಗಾಣಿಗೇರ, ಚೆನ್ನವೀರಸ್ವಾಮಿ ಅಲ್ಲಯ್ಯನವರಮಠ ಇದ್ದರು.
ಹುಬ್ಬಳ್ಳಿಯ ಎಚ್.ಎಫ್. ಕಟ್ಟಿಮನಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಣ ತಜ್ಞ ಡಾ.ಎಚ್.ಎಫ್. ಕಟ್ಟಿಮನಿ ಅವರ 137ನೇ ಜಯಂತಿ ಸಂದರ್ಭದಲ್ಲಿ ಡೆಪ್ಯೂಟಿ ಚೆನ್ನಬಸಪ್ಪ ಕನ್ನಡ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಡಾ. ಗುರುಮೂರ್ತಿ ಯರಗಂಬಳಿಮಠ ಅವರನ್ನು ಗೌರವಿಸಲಾಯಿತು. ಜಿ.ಐ. ಬಿಜಾಪೂರ, ಎಂ.ಬಿ. ಕರಡಿ, ಬಿ.ಬಿ. ನಾಯಕ, ಲಕ್ಷ್ಮವ್ವ ಗಾಣಿಗೇರ, ಚೆನ್ನವೀರಸ್ವಾಮಿ ಅಲ್ಲಯ್ಯನವರಮಠ, ಆರ್.ಆರ್. ಶಿರೂರ ಇದ್ದರು.